newsfirstkannada.com

ನ್ಯೂಜಿಲೆಂಡ್ ಗೆಲ್ಲಲು 6 ಬಾಲ್​ಗೆ 19 ರನ್​ ಬೇಕಿತ್ತು.. ಗೆದ್ದೇಬಿಟ್ರು ಅನ್ನುವಷ್ಟರಲ್ಲಿ ನಡೀತು ರನೌಟ್​ ಹೈಡ್ರಾಮ..!

Share :

29-10-2023

    ಧರ್ಮಶಾಲಾದಲ್ಲಿ ಸಿಡಿಯಿತು 771 ರನ್​.. 32 ಸಿಕ್ಸ್​

    ನಿನ್ನೆಯೂ ಶತಕ ಸಿಡಿಸಿ ಮಿಂಚಿದ ರಚಿನ್ ರವೀಂದ್ರ

    ಆಸ್ಟ್ರೇಲಿಯಾ 388/10, ನ್ಯೂಜಿಲೆಂಡ್ 383/9

ಬರೋಬ್ಬರಿ 771 ರನ್​. 32 ಸಿಕ್ಸರ್​.. ಎರಡು ಅಮೋಘ ಶತಕ.. ಹೈಥ್ರಿಲ್ಲಿಂಗ್ ಮ್ಯಾಚ್.. ಇಂಥಹ ರಣರೋಚಕ ಮ್ಯಾಚ್​ಗೆ ಸಾಕ್ಷಿಯಾಗಿದ್ದು, ಹಿಮಾಚಲ ಪ್ರದೇಶದ ಧರ್ಮಶಾಲಾ ಸ್ಟೇಡಿಯಂ..!

ನಿನ್ನೆ ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್, ಆಸ್ಟ್ರೇಲಿಯಾವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಇದರಂತೆ ಬ್ಯಾಟಿಂಗ್​ ಇಳಿದ ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್​ ಅಕ್ಷರಶಃ ಕಿವೀಸ್ ಬೌಲರ್​ಗಳ ಮೇಲೆ ನಡೆಸಿದ್ದು ಸವಾರಿ.

ಟ್ರಾವಿಸ್-ವಾರ್ನರ್​ ವಿಧ್ವಂಸಕಾರಿ ಬ್ಯಾಟಿಂಗ್.. ಕಿವೀಸ್ ವಿಲವಿಲ..!

ಆರಂಭದಿಂದಲೇ ನ್ಯೂಜಿಲೆಂಡ್ ದಾಳಿಯನ್ನ ಪುಡಿಗಟ್ಟಿದ್ದ ಟ್ರಾವಿಸ್ ಹೆಡ್, ರೌದ್ರವತಾರವನ್ನೇ ಪ್ರದರ್ಶಿಸಿದ್ರು. ನಾನಾ ನೀನಾ ಎಂಬಂತೆ ರನ್​ ಗಳಿಸುತ್ತಾ ಸಾಗಿದ ಈ ಆರಂಭಿಕ ಜೋಡಿ, 19 ಓವರ್​ಗಳಲ್ಲಿ 175 ರನ್​ ಕಲೆಹಾಕಿ ಟಿ-20 ಕ್ರಿಕೆಟ್​ನ ನೆನಪಿಸಿತ್ತು. 65 ಎಸೆತಗಳಲ್ಲಿ 81 ರನ್ ಸಿಡಿಸಿ ಮುನ್ನುಗ್ಗುತ್ತಿದ್ದ ​​ ವಾರ್ನರ್​, 20ನೇ ಒವರ್​ನ ಮೊದಲ ಎಸೆತದಲ್ಲೇ ಗ್ಲೇನ್ ಫಿಲಿಪ್ಸ್​ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದ್ರು. ವಾರ್ನರ್​ ವಿಕೆಟ್ ಒಪ್ಪಿಸಿದ್ದೆ ತಡ 7 ಸಿಕ್ಸರ್​, 10 ಬೌಂಡರಿ ಒಳಗೊಂಡ 109 ರನ್​ ಗಳಿಸಿದ್ದ ಅಪಾಯಕಾರಿ ಟ್ರಾವಿಸ್, ಫಿಲಿಪ್ಸ್​ಗೆ ವಿಕೆಟ್ ಒಪ್ಪಿಸಿ ಹೊರನಡೆದ್ರು.

ಈ ವೇಳೆ ಒಂದಾದ ಮಿಚೆಲ್ ಮಾರ್ಶ್​, ಸ್ಟೀವ್ ಸ್ಮಿತ್ ಸ್ಲೋ ಆ್ಯಂಡ್ ಸ್ಟಡಿ ಇನ್ನಿಂಗ್ಸ್ ಕಟ್ಟಲು ಮುಂದಾದ್ರು. ಸ್ಮಿತ್ ಆಟ 18ಕ್ಕೆ ಮುಗಿದ್ರೆ. ಮಿಚೆಲ್ ಬ್ಯಾಟಿಂಗ್ 36 ರನ್​​ಗೆ ಅಂತ್ಯವಾಯ್ತು. ಈ ಬೆನ್ನಲ್ಲೇ ಬಂದ ಲಬುಶೇನ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಪರಿಣಾಮ 46 ರನ್ ಅಂತರದಲ್ಲಿ 3 ವಿಕೆಟ್ ಕಳೆದುಕೊಳ್ತು. ಈ ವೇಳೆ ಆಸ್ಟ್ರೇಲಿಯನ್ಸ್​ಗೆ ಆಸರೆಯಾಗಿ ನಿಂತಿದ್ದು ಮ್ಯಾಕ್ಸ್​ವೆಲ್​​​ ಹಾಗೂ ಜೋಶ್ ಇಂಗ್ಲಿಸ್​​​​​​​​​​​​​​…
ಸಿಡಿಲಬ್ಬರ ಬ್ಯಾಟಿಂಗ್ ನಡೆಸಿದ ಈ ಜೋಡಿ ಅರ್ಧಶತಕದ ಜೊತೆಯಾಟವಾಡ್ತು. ಈ ಹಂತದಲ್ಲಿ 24 ಎಸೆತದಲ್ಲಿ 41 ರನ್ ಸಿಡಿಸಿದ್ದ ಮ್ಯಾಕ್ಸಿ ವಿಕೆಟ್ ಒಪ್ಪಿಸಿದ್ರೆ. ಜೋಶ್ ಇಂಗ್ಲಿಸ್​​​​​​​​​​​​​​​​​​​​​​​​​​​​​​​​​​​​​​​ 38 ರನ್.. ಪ್ಯಾಟ್ ಕಮಿನ್ಸ್​ 37 ರನ್​ ಪರಿಣಾಮ ಆಸ್ಟ್ರೇಲಿಯಾ 49.2 ಓವರ್​ಗಳಲ್ಲಿ 388 ರನ್​​ಗಳಿಗೆ ಬೃಹತ್ ಮೊತ್ತ ದಾಖಲಿಸಿ ಸರ್ವಪತನಕಾಣ್ತು.

ಕಿವೀಸ್​​ಗೆ ಆರಂಭದ ಶಾಕ್.. ಆಸರೆಯಾದ ರವೀಂದ್ರ!

389 ರನ್​​ಗಳ ಬೃಹತ್​ ಮೊತ್ತ ಬೆನ್ನಟ್ಟಿದ್ದ ನ್ಯೂಜಿಲೆಂಡ್, ಆರಂಭದಲ್ಲೇ ಸ್ಫೋಟಕ ಬ್ಯಾಟಿಂಗ್​ಗೆ ಕೈಹಾಕಿತು. ಹೇಜಲ್​ವುಡ್ ಬೌಲಿಂಗ್​ನಲ್ಲಿ ಡಿವೋನ್ ಕಾನ್ವೆ 28 ರನ್​​ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ರೆ, ವಿಲ್ ಯಂಗ್​ 32ಕ್ಕೆ ಸುಸ್ತಾದ್ರು. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಮತ್ತೆ ನ್ಯೂಜಿಲೆಂಡ್​ಗೆ ಆಸರೆಯಾಗಿ ನಿಂತಿದ್ದು ರಚಿನ್ ರವೀಂದ್ರ.

ಪಾಸಿಟಿವ್ ಇಂಟೆಂಟ್​ನಲ್ಲಿ ಬ್ಯಾಟ್ ಬೀಸಿದ ರವೀಂದ್ರ ಹಾಗೂ ಡ್ಯಾರೆಲ್ ಮಿಚೆಲ್, 3ನೇ ವಿಕೆಟ್​ಗೆ 96 ರನ್​​ ಕಲೆಹಾಕಿ ಗೆಲುವಿನ ಕನಸು ಬಿತ್ತಿದ್ರು. ಮಿಚೆಲ್ ಅರ್ಧಶತಕದ ಬೆನ್ನಲ್ಲೇ ಆ್ಯಡಂ ಜಂಪಾಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದ್ರು. ಈ ಬೆನ್ನಲ್ಲೇ ಬಂದ ಕ್ಯಾಪ್ಟನ್ ಟಾಮ್ ಲಾಥಮ್​​​​ 21ಕ್ಕೆ ಔಟಾಗಿ ಹೊರ ನಡೆದ್ರೆ ಭಾರೀ ನಿರೀಕ್ಷೆ ಹುಟ್ಟುಹಾಕಿದ್ದ ಫಿಲಿಪ್ಸ್​ 12ಕ್ಕೆ ಸುಸ್ತಾದರು. ಮತ್ತೊಂದಡೆ ಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ರಚಿನ್, 116 ರನ್​ಗಳಿಗೆ ಆಟ ಕೊನೆ ಗಳಿಸಿದ್ರು.

6ಕ್ಕೆ 19 ರನ್​.. ಕೊನೆ ಓವರ್ ರನೌಟ್​ ಹೈಡ್ರಾಮ..!

ರಚಿನ್ ಔಟಾದ ಬೆನ್ನಲ್ಲೇ ನ್ಯೂಜಿಲೆಂಡ್ ಆಟ ಮುಗೀತು ಅಂತಾನೇ ಭಾವಿಸಲಾಗಿತ್ತು. ಅರ್ಧಶತಕ ಸಿಡಿಸಿದ್ದ ನಿಶಾಮ್ ಗೆಲುವಿನ ಆಸೆ ಚಿಗುರಿಸಿದ್ರು. ಅಂತಿಮ 6 ಎಸೆತಕ್ಕೆ 19 ರನ್​​ಗಳ ಅಗತ್ಯ ಇತ್ತು. ಈ ವೇಳೆ ಟ್ರೆಂಟ್ ಮೊದಲ ಎಸೆತದಲ್ಲೇ ಸಿಂಗಲ್ ಕದಿಯುವಲ್ಲಿ ಸಕ್ಸಸ್​ ಕಂಡ್ರೆ, 2ನೇ ಎಸೆತ ಸ್ಟಾರ್ಕ್ ವೈಡ್ ಸಹಿತ ಬೌಂಡರಿ ನೀಡಿದ್ರು. ಪರಿಣಾಮ 5 ಎಸೆತಕ್ಕೆ 13 ರನ್ ಬೇಕಿತ್ತು.

ಈ ವೇಳೆ ಅದ್ಭುತ ಫೀಲ್ಡಿಂಗ್ ನಡೆಸಿದ ಆಸ್ಟ್ರೇಲಿಯನ್ ಫೀಲ್ಡರ್ಸ್​​, ಬೌಂಡರಿ ತಡೆಗಟ್ಟುವಲ್ಲಿ ಯಶಸ್ವಿಯಾದರು. 5ನೇ ಎಸೆತದಲ್ಲಿ 2 ರನ್ ಕದಿಯಲು ಯತ್ನಿಸಿದ ನಿಶಾಮ್ ರನೌಟ್ ಬಲೆಗೆ ಸಿಲುಕಿದ್ರು. ಪರಿಣಾಮ ನ್ಯೂಜಿಲೆಂಡ್ ಗೆಲುವಿನ ಕನಸು ಛಿದ್ರಗೊಳ್ತು. ಇದರೊಂದಿಗೆ 5 ರನ್​​ಗಳ ಗೆಲುವು ಸಾಧಿಸಿದ ಆಸ್ಟ್ರೇಲಿಯಾ, ಸೆಮೀಸ್​​ನತ್ತ ಮತ್ತೊಂದು ಹೆಜ್ಜೆಹಾಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ನ್ಯೂಜಿಲೆಂಡ್ ಗೆಲ್ಲಲು 6 ಬಾಲ್​ಗೆ 19 ರನ್​ ಬೇಕಿತ್ತು.. ಗೆದ್ದೇಬಿಟ್ರು ಅನ್ನುವಷ್ಟರಲ್ಲಿ ನಡೀತು ರನೌಟ್​ ಹೈಡ್ರಾಮ..!

https://newsfirstlive.com/wp-content/uploads/2023/10/AUSvsNEZ.jpg

Load More