newsfirstkannada.com

ವಿಶ್ವಕಪ್​ ಗೆದ್ದ ಟ್ರಾವಿಸ್​ ಹೆಡ್​ಗೆ ಥ್ರೆಟ್​​.. ಹೆಂಡತಿ, 1 ವರ್ಷದ ಮಗುವಿನ ಮೇಲೆ ಅತ್ಯಾಚಾರ ಬೆದರಿಕೆ

Share :

20-11-2023

    ಪ್ಲೇಯರ್​ ಆಫ್​ ದಿ ಮ್ಯಾಚ್​ ಪಟ್ಟ ಗೆದ್ದ ಟ್ರಾವಿಸ್​ ಹೆಡ್

    120 ಎಸೆತಕ್ಕೆ 137 ರನ್​ ಬಾರಿಸಿ ಬೆಸ್ಟ್​ ಆಟಗಾರ ಎಂದೆನಿಸಿಕೊಂಡರು

    ಟ್ರೋಫಿ ಗೆದ್ದ ಬೆನ್ನಲ್ಲೇ ಕ್ರಿಕೆಟಿಗನ ಫ್ಯಾಮಿಲಿ ಮೇಲೆ ಬಂತು ಬೆದರಿಕೆಗಳು

ಆಸ್ಟ್ರೇಲಿಯಾ ವಿಶ್ವಕಪ್​ ಗೆದ್ದಿದ್ದೇ ತಡ ಆಟಗಾರ ಟ್ರಾವಿಸ್​ ಹೆಡ್​​ ಮನದಲ್ಲಿ ಭಯ ಆವರಿಸಿದೆ. ಕಾರಣ ಆತನ ಹೆಂಡತಿ ಮತ್ತು ಮಗುವಿಗೆ ಅತ್ಯಾಚಾರ ಮಾಡುತ್ತೇವೆ ಎಂಬ ಬೆದರಿಕೆಗಳು ಬರುತ್ತಿವೆ. ಸಾಮಾಜಿಕ ಜಾಲತಾಣದಲ್ಲೂ ಕ್ರಿಕೆಟ್​ ಫ್ಯಾನ್ಸ್ ಟ್ರಾವಿಸ್​ ಹೆಡ್​ ಫ್ಯಾಮಿಲಿಯ ಬಗ್ಗೆ ಕೆಟ್ಟ ಕೆಟ್ಟದ್ದಾಗಿ ಬರೆಯುತ್ತಿದ್ದಾರೆ.

2023ರ ವಿಶ್ವಕಪ್ ಫೈನಲ್​ನಲ್ಲಿ ಆಸೀಸ್​ ಟ್ರೋಫಿ ಗೆಲ್ಲಲು ಟ್ರಾವಿಸ್​ ಹೆಡ್ ಪ್ರಮುಖ ಪಾತ್ರ ವಹಿಸಿದರು. ​ 120 ಎಸೆತಕ್ಕೆ 137 ರನ್​ ಬಾರಿಸುವ ಮೂಲಕ ತಂಡದ ಜಯಕ್ಕೆ ಪ್ರಮುಖ ಕಾರಣರಾದರು. ಮಾತ್ರವಲ್ಲದೆ, ಪ್ಲೇಯರ್​ ಆಫ್​ ದಿ ಮ್ಯಾಚ್​ ಪಟ್ಟವನ್ನು ಅಲಂಕರಿಸಿಕೊಂಡರು.

ಆದರೆ ವಿಶ್ವಕಪ್​ ಗೆದ್ದ ಬೆನ್ನಲ್ಲೇ ಟ್ರಾವಿಸ್​ ಹೆಡ್ ಫ್ಯಾಮಿಲಿಗೆ ಬೆದರಿಕೆಗಳು ಬಂದಿವೆ. ಸಾಮಾಜಿಕ ಜಾಲತಾಣದಲ್ಲಿ ಆತನ ಮಡದಿ ಮತ್ತು ಮಗುವಿನ ಫೋಟೋ ಹಂಚಿಕೊಂಡು ಅತ್ಯಾಚಾರದ ಬೆದರಿಕೆಗಳನ್ನು ಹಾಕುತ್ತಿದ್ದಾರೆ.

ಇದನ್ನು ಓದಿ: ವಿಶ್ವಕಪ್​ ಟ್ರೋಫಿ ಮೇಲೆ ಕಾಲಿಟ್ಟ ಮಿಚೆಲ್​ ಮಾರ್ಷ್​​.. ಭಾರತೀಯ ಕ್ರಿಕೆಟ್​ ಫ್ಯಾನ್ಸ್​ ಕೊಟ್ರು ಸರಿಯಾದ ಗೂಸಾ!

ಸಿಂಗ್​ ಎಂಬ ಎಕ್ಸ್​ ಖಾತೆ ಈ ವಿಚಾರವನ್ನು ಫೋಟೋ ಸಮೇತ ಟ್ವೀಟ್​ ಮಾಡಿದೆ. ಅದರಲ್ಲಿ ‘ಸಂಪೂರ್ಣವಾಗಿ ಕೆಟ್ಟ ಮತ್ತು ಆಘಾತಕಾರಿ ವಿಚಾರ ಇದಾಗಿದೆ. ವಿಶ್ವಕಪ್​ ಗೆಲುವಿನ ನಂತರ ಟ್ರಾವಿಸ್ ಹೆಡ್ ಅವರ ಪತ್ನಿ ಮತ್ತು ಮಗಳಿಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ರೇಪ್​ ಬೆದರಿಕೆ ಹಾಕುತ್ತಿದ್ದಾರೆ. ಅವರ ಮಗಳಿಗೆ ಕೇವಲ 1 ವರ್ಷ’ ಎಂದು ಬರೆದುಕೊಂಡಿದ್ದಾರೆ.

ಸದ್ಯ ಈ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಜಯದ ಸಂತಸದಲ್ಲಿರುವ ಟ್ರಾವಿಷ್​ಗಂತೂ ಈ ವಿಚಾರ ನೋವು ನೀಡಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿಶ್ವಕಪ್​ ಗೆದ್ದ ಟ್ರಾವಿಸ್​ ಹೆಡ್​ಗೆ ಥ್ರೆಟ್​​.. ಹೆಂಡತಿ, 1 ವರ್ಷದ ಮಗುವಿನ ಮೇಲೆ ಅತ್ಯಾಚಾರ ಬೆದರಿಕೆ

https://newsfirstlive.com/wp-content/uploads/2023/11/IND-14.jpg

Load More