Advertisment

ವಿಶ್ವಕಪ್​ ಫೈನಲ್​​ಗಳಲ್ಲಿ ಆಸಿಸ್ ಇತಿಹಾಸ ರೋಚಕ; ಸೋತಿದ್ದೇ ವಿರಳ.. ಆದರೆ..!

author-image
Veena Gangani
Updated On
World Cup: ವಾರ್ನರ್​, ಮಾರ್ಷ್​ ಆಟಕ್ಕೆ ಪಾಕ್​ ಕಲಾಸ್.. ವಿಫಲ ಬೌಲಿಂಗ್​ನಿಂದ ಸೋತು ಹೋದ ಬಾಬರ್ ಟೀಮ್​
Advertisment
  • ರೋಹಿತ್​ ಮುಂದಿದೆ ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆಯೋ ಪ್ಲಾನ್!
  • ಇಂಡಿಯಾಗೆ 5 ಬಾರಿಯ ಚಾಂಪಿಯನ್ಸ್​​ಗೆ ಸೋಲಿಸುವ ಛಲ
  • 8 ವರ್ಷದ ಬಳಿಕ ಕಪ್​ ಗೆಲ್ಲೋ ತವಕದಲ್ಲಿ ಯೆಲ್ಲೋ ಆರ್ಮಿ​

ಇಂದು ವಿಶ್ವ ಕ್ರಿಕೆಟ್ ಹಬ್ಬ. ಕೋಟ್ಯಂತರ ಭಾರತೀಯರು ತಮ್ಮ ಕನಸು ನನಸಾಗಲಿ ಅಂತ ಕಾಯ್ತಿರೋ ದಿನ. ಪ್ರಾರ್ಥಿಸ್ತಿರೋ ಕ್ಷಣ. ವಿಶ್ವದ ಅತಿ ದೊಡ್ಡ ಕ್ರಿಕೆಟ್‌ ಸ್ಟೇಡಿಯಂನಲ್ಲಿ ವಿಶ್ವಕಪ್‌ನ ಮಹಾಸಮರ ಇಂದು ಮಧ್ಯಾಹ್ನ ನಡೆಯಲಿದೆ. ಅದೂ ಎರಡು ಮದಗಜ ಟೀಮ್‌ಗಳ ನಡುವೆ. ದೇಶ ವಿದೇಶದಲ್ಲಿ ಭಾರತೀಯರೆದೆಯಲ್ಲಿ ಜೈ ಹೋ ಇಂಡಿಯಾ ಅನ್ನೋ ಘೋಷಣೆ ಮೊಳಗ್ತಿರೋ ಈ ಹೊತ್ತಲ್ಲಿ ಮಹಾ ಕದನಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ.

Advertisment

publive-image

ವಿಶ್ವ ಕಿರೀಟಕ್ಕೆ ಮುತ್ತಿಡಲು ಜಸ್ಟ್​ ಕೆಲವು ಗಂಟೆಗಳು ಮಾತ್ರ ಬಾಕಿ ಇದೆ. ಈ ಒಂದು ಗೆಲುವಿಗಾಗಿಯೇ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಒಂದೇ ಒಂದು ಗೆಲುವೇ ಅಜೇಯ ಭಾರತದ ಕನಸು. ಮತ್ತೊಮ್ಮೆ ವಿಶ್ವ ಚಾಂಪಿಯನ್ಸ್ ಆಗಿ ಮೆರೆದಾಡಲು ಆ ಒಂದೇ ಒಂದು ಗೆಲುವೇ ಉಭಯ ತಂಡಗಳ ಮುಂದಿನ ಟಾರ್ಗೆಟ್​. ಇಂಥಹ ಒಂದು ಕನಸು ಕೋಟ್ಯಾಂತರ ಅಭಿಮಾನಿಗಳ ಆಸೆ ಆಕಾಂಕ್ಷೆಗಳಿಗೆ ಸಾಕ್ಷಿಯಾಗ್ತಿರುವುದೇ ಅಹ್ಮದಬಾದ್​ನ ನಮೋ ಸ್ಟೇಡಿಯಂ.

ಇಂಡೋ-ಆಸಿಸ್​ನ ರಣರೋಚಕ ಫೈನಲ್​​ ಫೈಟ್​ಗೆ ಕೌಂಟ್​ಡೌನ್​ ಶುರುವಾಗಿದ್ದು, ಯಾರ್​ ಗೆಲ್ತಾರೆ ಎಂಬ ಕ್ಯೂರಿಯಾಸಿಟಿ ವಿಶ್ವ ಕ್ರಿಕೆಟ್​ ಅಭಿಮಾನಿಗಳಲ್ಲಿದ್ರೆ, ಇತ್ತ ಶತಾಯ ಗತಾಯ ಗೆಲ್ಲೋಕೆ ವಿಶ್ವ ಕ್ರಿಕೆಟ್​ನ ಮದಗಜಗಳು ಕಾಯ್ತಿವೆ. ಇದಕ್ಕಾಗಿ ಭಾರೀ ಗೇಮ್​​ಪ್ಲಾನ್​, ಸ್ಟ್ರಾಟರ್ಜಿಗಳನ್ನೇ ತೆರೆಹಿಂದೆ ಹೆಣೆಯುತ್ತಿವೆ. ನಮೋ ಗ್ರೌಂಡ್‌ನಲ್ಲಿ ಕಠಿಣ ಅಭ್ಯಾಸ ನಡೆಸಿದ್ದಾರೆ ಕ್ರಿಕೆಟರ್ಸ್.

publive-image

ಆಸಿಸ್​​​ಗೆ ಭಾರತವನ್ನ ಭಾರತದಲ್ಲೇ ಸೋಲಿಸುವಾಸೆ..!

ವಿಶ್ವಕಪ್​ನ ಆರಂಭಿಕ ಪಂದ್ಯದಲ್ಲೇ ಟೀಮ್ ಇಂಡಿಯಾ ಎದುರು ಎಡವಿದ್ದ ಆಸ್ಟ್ರೇಲಿಯಾ, ಈಗ ಲೀಗ್​​ ಸ್ಟೇಜ್​ ಸೋಲಿನ ಪ್ರತೀಕಾರ ತೀರಿಸಿಕೊಳ್ಳುವ ಹಂಬಲದಲ್ಲಿದೆ. ಇದಕ್ಕಾಗಿ ಭಾರೀ ರಣತಂತ್ರವನ್ನೇ ಹೆಣೆಯುತ್ತಿದೆ. ಇಂಟ್ರೆಸ್ಟಿಂಗ್ ವಿಚಾರ ಏನಂದ್ರೆ, 2011ರ ವಿಶ್ವಕಪ್​ನಲ್ಲಿ ಇದೇ ಅಂಗಳದಲ್ಲಿ ಟೀಮ್ ಇಂಡಿಯಾ ಎದುರಿನ ಕ್ವಾಟರ್​​ ಫೈನಲ್​​ನಲ್ಲಿ ಮುಖಭಂಗ ಅನುಭವಿಸಿದ್ದ ಆಸ್ಟ್ರೇಲಿಯಾ, ಹ್ಯಾಟ್ರಿಕ್ ವಿಶ್ವಕಪ್ ಗೆಲ್ಲೋ ಸುವರ್ಣಾವಕಾಶ ಕಳೆದುಕೊಂಡಿತ್ತು. ಇದಕ್ಕೀಗ ತವರಿನಲ್ಲೇ ಟೀಮ್ ಇಂಡಿಯಾಗೆ ಸೋಲಿನ ಉತ್ತರ ನೀಡೋ ತವಕದಲ್ಲಿದೆ.

Advertisment

publive-image

ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಸೋತಿದ್ದು ಎರಡೇ ಬಾರಿ!

ವಿಶ್ವಕಪ್​ನ ಇತಿಹಾಸದಲ್ಲೇ ಮೋಸ್ಟ್​ ಸಕ್ಸಸ್​ಫುಲ್ ಟೀಮ್ ಆಗಿರುವ ಆಸ್ಟ್ರೇಲಿಯಾ, ಮೆಗಾ ಟೂರ್ನಿಯ ಫೈನಲ್​​ನಲ್ಲಿ ಸೋತಿದ್ದು ವಿರಳ. 1975 ಹಾಗೂ 1996ರಲ್ಲಿ ಬಿಟ್ಟರೆ, ಉಳಿದೈದು ಬಾರಿ ವಿಶ್ವ ಕಿರೀಟಕ್ಕೆ ಮುತ್ತಿಟ್ಟಿದೆ. 2015ರ ಏಕದಿನ ವಿಶ್ವಕಪ್​​ ಬಳಿಕ ಟ್ರೋಫಿಗೆ ಮುತ್ತಿಡುವಲ್ಲಿ ವಿಫಲರಾಗಿರುವ ಯೆಲ್ಲೋ ಆರ್ಮಿ, 2019ರಲ್ಲಿ ಇಂಗ್ಲೆಂಡ್​ ವಿರುದ್ಧದ​ ಸೆಮಿಸ್​ ಕದನದಲ್ಲಿ ಸೋತು ಹೊರ ಬಿದ್ದಿತ್ತು. ಆದ್ರೆ, 8 ವರ್ಷಗಳ ಬಳಿಕ ಫೈನಲ್​​ಗೇರಿರುವ ಆಸಿಸ್, 6ನೇ ಬಾರಿ ವಿಶ್ವಕಪ್​​ ಗೆದ್ದೇ ತೀರುವ ಛಲದಲ್ಲಿದೆ.

publive-image

5 ಬಾರಿಯ ಚಾಂಪಿಯನ್ಸ್​​ಗೆ ಸೋಲುಣಿಸುತ್ತಾ ಟೀಮ್ ಇಂಡಿಯಾ?

ಲೀಗ್​ನಲ್ಲಿ ಆಸ್ಟ್ರೇಲಿಯನ್ಸ್​ ಸೋಲಿಸಿರುವ ಟೀಮ್ ಇಂಡಿಯಾ, 5 ಬಾರಿಯ ಚಾಂಪಿಯನ್ಸ್​ಗೆ ಮತ್ತೊಮ್ಮೆ ಸೋಲಿನ ರುಚಿ ತೋರಿಸೋ ಹುಮ್ಮಸ್ಸಲ್ಲಿದೆ. ಇದಿಷ್ಟೇ ಅಲ್ಲ.! ಎರಡು ಸೋಲುಗಳ ಸೇಡು ಕೂಡ ಟೀಮ್ ಇಂಡಿಯಾ ಮುಂದಿದೆ. 2023ರ ವಿಶ್ವ ಟೆಸ್ಟ್​ ಚಾಂಪಿಯನ್ ಶಿಪ್‌ ಫೈನಲ್​ನಲ್ಲಿ ಆಸ್ಟ್ರೇಲಿಯಾ ಎದುರು ಮುಖಭಂಗ ಅನುಭವಿಸಿದ್ದ ರೋಹಿತ್ ಪಡೆ, ಈಗ ಆ ಸೋಲಿಗೆ ತವರಿನಲ್ಲಿ ಸೇಡು ತೀರಿಸಿಕೊಳ್ಳುವ ಆತ್ಮವಿಶ್ವಾಸದಲ್ಲಿದೆ. ಅಷ್ಟೇ ಅಲ್ಲ! 2003ರ ಏಕದಿನ ವಿಶ್ವಕಪ್ ಸೋಲಿಗೂ ಉತ್ತರಿಸುವ ಮೂಲಕ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯೋ ಪ್ಲಾನ್​ನಲ್ಲಿದೆ.

ವಿಶ್ವ ಕಿರೀಟ ಗೆಲ್ಲೋಕೆ ಉಭಯ ತಂಡಗಳು ನಾನಾ ತಂತ್ರಗಳ ಜೊತೆ ಜೊತೆಗೆ ಆನ್​ಫೀಲ್ಡ್​ನಲ್ಲಿ ಶಕ್ತಿ ಮೀರಿ ಹೋರಾಟವನ್ನೇ ನಡೆಸಲಿದ್ದಾರೆ. ಆದ್ರೂ ಈ ವರ್ಲ್ಡ್‌ ಕಪ್‌ ಸಿರೀಸ್‌ನಲ್ಲಿ ಸೋಲನ್ನೇ ಕಾಣದ ಟೀಮ್‌ ಇಂಡಿಯಾ ಎಲ್ಲರ ಗೆಲ್ಲೋ ಫೇವರಿಟ್‌. ದೇಶಾದ್ಯಂತ ಗೆದ್ದು ಬಾ ಟೀಮ್‌ ಇಂಡಿಯಾ ಅನ್ನೋ ಕೂಗು ಮೂಲೆ ಮೂಲೆಯಲ್ಲೂ ರಿಂಗಣಿಸುತ್ತಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment