/newsfirstlive-kannada/media/post_attachments/wp-content/uploads/2024/08/Virat-Kohli-Double-Century.jpg)
ಇಂಡೋ-ಆಸಿಸ್​​ ಟೆಸ್ಟ್​ ಸರಣಿಗೆ ಕೌಂಟ್​​ಡೌನ್​ ಶುರುವಾಗಿದೆ. ಸರಣಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಎದುರಾಳಿ ಆಸ್ಟ್ರೇಲಿಯಾ ಗೆಲುವಿಗಾಗಿ ನಾನಾ ತಂತ್ರಗಳನ್ನು ಹೂಡುತ್ತಿದೆ. ಆದ್ರಲ್ಲೂ ವಿರಾಟ್ ಕೊಹ್ಲಿ​, ವೀರಾವೇಶಕ್ಕೆ ಬ್ರೇಕ್ ಹಾಕಲು ಆಸ್ಟ್ರೇಲಿಯಾ ತಂಡ ಸ್ಪೆಷಲ್ ಸ್ಟ್ರಾಟರ್ಜಿ ರೂಪಿಸಿದೆ. ಆಸಿಸ್​ನ ಆ ಸ್ಪೆಷಲ್​ ಗೇಮ್​ಪ್ಲಾನ್​ ಏನು..?
ಬಾರ್ಡರ್​-ಗವಾಸ್ಕರ್​ ಟೆಸ್ಟ್​ ಸರಣಿಯ ಕಾವು ಹೆಚ್ಚಾಗ್ತಿದೆ. ಪ್ರತಿಷ್ಟೆಯ ಸರಣಿ ಗೆಲುವಿಗಾಗಿ ತೆರೆಯ ಹಿಂದೆ ಉಭಯ ತಂಡಗಳು ನಾನಾ ರಣತಂತ್ರಗಳನ್ನು ರೂಪಿಸ್ತಿವೆ. ಈ ನಿಟ್ಟಿನಲ್ಲಿ ಅಭ್ಯಾಸದ ಕಣದಲ್ಲಿ ಬೆವರು ಹರಿಸುತ್ತಿವೆ. ಇದ್ರ ನಡುವೆ ಮೈಂಡ್​ಗೇಮ್ ಶುರು ಮಾಡಿರುವ ಆಸ್ಟ್ರೇಲಿಯಾ, ವಿರಾಟ್​ ಕೊಹ್ಲಿ ಕಟ್ಟಿಹಾಕಲು ವಿಶೇಷ ವ್ಯೂಹ ಹೆಣೆದಿದೆ.
/newsfirstlive-kannada/media/post_attachments/wp-content/uploads/2024/11/VIRAT_KOHLI.jpg)
ಆಸ್ಟ್ರೇಲಿಯಾಗೆ ವಿರಾಟ್​ ಕೊಹ್ಲಿಯೇ ಟಾರ್ಗೆಟ್, ಕೊಹ್ಲಿಗಾಗಿ ವಿಶೇಷ ರಣತಂತ್ರ ಹೆಣೆದ ಆಸಿಸ್..!
ಪ್ರಸಕ್ತ ವರ್ಷ ರನ್​ ಬರ ಎದುರಿಸುತ್ತಿರುವ ವಿರಾಟ್​ ಕೊಹ್ಲಿ, ಆಸ್ಟ್ರೇಲಿಯಾ ಎದುರು ಅಬ್ಬರಿಸಲು ರೆಡಿಯಾಗಿದ್ದಾರೆ. ಬಾಂಗ್ಲಾದೇಶ, ನ್ಯೂಜಿಲೆಂಡ್​​ ಎದುರಿನ ವೈಫಲ್ಯ ಮೆಟ್ಟಿ ನಿಲ್ಲಲು ನಾನಾ ಕಸರತ್ತು ನಡೆಸುತ್ತಾ ಬೆವರಿಳಿಸುತ್ತಿದ್ದಾರೆ. ರೋಹಿತ್ ಅಲಭ್ಯತೆಯಲ್ಲಿ ಟೀಮ್ ಇಂಡಿಯಾವನ್ನು ಗೆಲುವಿನ ದಡ ಸೇರಿಸುವ ಶಪಥ ಮಾಡಿರುವ ವಿರಾಟ್​, ಪರ್ತ್​ನಲ್ಲೇ ಕಮ್​ಬ್ಯಾಕ್ ಮಾಡೋ ಕನಸು ಕಾಣ್ತಿದ್ದಾರೆ. ಆದ್ರೆ, ಈ ಕನಸಿಗೆ ಕೊಳ್ಳಿ ಇಡಲು ಆಸ್ಟ್ರೇಲಿಯಾ ಸ್ಪೆಷಲ್ ಪ್ಲಾನ್ ರೂಪಿಸಿದೆ.
ವಿರಾಟ್​ ಕೊಹ್ಲಿಯ ದೇಹವೇ ಬೌಲರ್​​ಗಳ ಟಾರ್ಗೆಟ್..!
ಆಸ್ಟ್ರೇಲಿಯನ್ ಕಂಡೀಷನ್ಸ್​ನಲ್ಲಿ ವಿರಾಟ್​ ಕೊಹ್ಲಿ, ಅದ್ಬುತ ರೆಕಾರ್ಡ್​ ಹೊಂದಿದ್ದಾರೆ. ಪ್ರತಿ ಪ್ರವಾಸದಲ್ಲೂ ಆಸ್ಟ್ರೇಲಿಯಾ ಬೌಲರ್​​​​ಗಳನ್ನ ವಿರಾಟ್​ ಕಾಡಿದ್ದಾರೆ. ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡಿರುವ ಆಸ್ಟ್ರೇಲಿಯಾ, ವಿರಾಟ್​ಗೆ ಮೂಗುದಾರ ಹಾಕಲು ಪ್ಲಾನ್​ ರೂಪಿಸಿದೆ. ಆಸ್ಟ್ರೇಲಿಯನ್ ಬೌಲರ್​ಗಳು ವಿರಾಟ್​​​, ಬಾಡಿಯನ್ನೇ ಗುರಿಯಾಗಿಸಿಕೊಂಡು ಬೌಲಿಂಗ್ ಮಾಡೋ ಲೆಕ್ಕಾಚಾರದಲ್ಲಿದ್ದಾರೆ. ಆ ಮೂಲಕ ವಿರಾಟ್​, ರನ್​ ಗಳಿಸಂದಂತೆ ನೋಡಿಕೊಳ್ಳುವ ತಂತ್ರ ರೂಪಿಸಿದ್ದಾರೆ.
ವಿರಾಟ್​ ಕೊಹ್ಲಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ದೇಹದ ಮೇಲೆ ಅಟ್ಯಾಕ್ ಮಾಡಲು ಯತ್ನಿಸುತ್ತಾರೆ. ಯಾಕಂದ್ರೆ, ವಿರಾಟ್​ ಕೊಹ್ಲಿ ಕ್ರಿಸ್​ ಬಿಟ್ಟು ಮುಂದೆ ಬಂದು ಆಡಲು ಇಷ್ಟಪಡ್ತಾರೆ. ನ್ಯೂಜಿಲೆಂಡ್ ಕೂಡ ಇಂಥದ್ದೇ ಪ್ರಯೋಗ ಮಾಡಿತ್ತು. ಅದು ನಿಜಕ್ಕೂ ತುಂಬಾ ಸ್ಮಾರ್ಟ್ ಪ್ಲಾನ್​. ವಿರಾಟ್​ ಕೊಹ್ಲಿ ಆಫ್​ ಸ್ಟಂಪ್​​ ಮೇಲೆ ಫೋಕಸ್ ಮಾಡ್ತಿದ್ರೆ, ಮಿಡಲ್ ಸ್ಟಂಪ್‌ನಲ್ಲಿ ಜೋಶ್ ಹೇಜಲ್‌ವುಡ್ ದಾಳಿಗೆ ಯತ್ನಿಸಬಹುದು ಎಂದು ಮಾಜಿ ಕ್ರಿಕೆಟರ್ ಸಂಜಯ್ ಮಾಂಜ್ರೇಕರ್ ಹೇಳಿದ್ದಾರೆ.
ಹೌದು.. ಸಂಜಯ್ ಮಾಂಜ್ರೇಕರ್​​ ಹೇಳಿದಂತೆ, ಈ ಹಿಂದಿನ ನ್ಯೂಜಿಲೆಂಡ್ ಸಿರೀಸ್​ನಲ್ಲಿ ವಿರಾಟ್​, ಇದೇ ರಣತಂತ್ರಕ್ಕೆ ವಿಕೆಟ್ ಒಪ್ಪಿಸಿದ್ದರು. ಹೀಗಾಗಿ ಇದೇ ತಂತ್ರಗಾರಿಕೆಯನ್ನೇ ಆಸ್ಟ್ರೇಲಿಯಾ ಪ್ರಯೋಗಿಸುವ ಸಾಧ್ಯತೆ ಇದೆ.
ಬೌನ್ಸರ್​​ಗಳ ಮೂಲಕ ಅಟ್ಯಾಕ್ ಮಾಡಿದ್ದ ಆಸಿಸ್.!
2020-21ರ ಬಾರ್ಡರ್​ ಗವಾಸ್ಕರ್​ ಟೆಸ್ಟ್​ ಸರಣಿಯುದ್ದಕ್ಕೂ ಆಸ್ಟ್ರೇಲಿಯಾವನ್ನು ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ಕಾಡಿದ್ದರು. ಗಾಬಾದ ಡು ಆರ್ ಡೈ ಮ್ಯಾಚ್​ನಲ್ಲಿ ಪೂಜಾರ ಅಕ್ಷರಶಃ ತಡೆಗೋಡೆಯಾಗಿ ನಿಂತಿದ್ದರು. ಅಂತಿಮ ದಿನ ಆಸಿಸ್​ ಬೌಲರ್​ಗಳ ತಾಳ್ಮೆ ಪರೀಕ್ಷಿಸಿದ್ದ ಪೂಜಾರ, 211 ಎಸೆತ ಎದುರಿಸಿ 56 ರನ್ ಕಲೆಹಾಕಿದರು. ಪೂಜಾರ ವಿಕೆಟ್​​​ಗಾಗಿ ಪರದಾಡಿದ್ದ ಆಸ್ಟ್ರೇಲಿಯಾ, ಅವತ್ತು ಪೂಜಾರ ದೇಹವನ್ನೇ ಟಾರ್ಗೆಟ್​ ಮಾಡಿತ್ತು. ಅಮದು ಕೊನೆಯ ಟೆಸ್ಟ್​ನಲ್ಲಿ ಈ ತಂತ್ರ ಪ್ರಯೋಗಿಸಿದ್ದ ಆಸಿಸ್​, ಇದೀಗ ಅದೇ ಪ್ಲಾನ್​ನ​​ ಮೊದಲ ಟೆಸ್ಟ್​ನಲ್ಲೇ ಕಾರ್ಯರೂಪಕ್ಕೆ ತರಲಿದೆ.
/newsfirstlive-kannada/media/post_attachments/wp-content/uploads/2024/11/TARGET-KOHLI.jpg)
ಕೊಹ್ಲಿ ಇಂಜುರಿ ಮಾಡುವುದೇ ಆಸ್ಟ್ರೇಲಿಯಾ ಟಾರ್ಗೆಟ್?
ವಿರಾಟ್​​ ಕೊಹ್ಲಿ, ಕ್ರೀಸ್​ಗೆ ಬಂದಷ್ಟೇ ವೇಗದಲ್ಲಿ ಹಿಂತಿರುಗಿದ್ರೆ ಒಕೆ.. ಕ್ರೀಸ್​ನಲ್ಲಿ ಸೆಟ್ಲ್​ ಆಗಿಬಿಟ್ರೆ. ಆಸ್ಟ್ರೇಲಿಯಾ ಕಥೆ ಮುಗೀತು ಅಂತಾನೇ ಲೆಕ್ಕ.. ಈ ಕಾರಣಕ್ಕಾಗಿಯೇ ಕೊಹ್ಲಿಯನ್ನ 30 ರನ್​​ ಒಳಗೆ ಕಟ್ಟಿ ಹಾಕುವ ಲೆಕ್ಕಾಚಾರದಲ್ಲಿದೆ. ಬಾಡಿ ಟು ಬಾಡಿ ಟಾರ್ಗೆಟ್ ಮಾಡಿ ಸುಮ್ಮನಿರಿಸುವ ಜೊತೆಗೆ ಇಂಜುರಿ ಮಾಡೋದು ಕೂಡ ಮತ್ತೊಂದು ಪ್ಲಾನ್.. ಕೊಹ್ಲಿಯನ್ನ ಇಂಜುರಿ ಮಾಡಿ ಸರಣಿ ಹೊರ ಬೀಳಿಸೋ ಲೆಕ್ಕಾಚಾರ ತಂಡದಲ್ಲಿದೆ.
ವಿರಾಟ್​ ವೀರಾವೇಶಕ್ಕೆ ಬ್ರೇಕ್ ಹಾಕಲು ನಾನಾ ರಣತಂತ್ರಗಳನ್ನು ಆಸ್ಟ್ರೇಲಿಯಾ ರೂಪಿಸ್ತಿದೆ. ಆದ್ರೆ, ಕೊಹ್ಲಿ ನೋಡಿದ್ರೆ ಕಮ್​ಬ್ಯಾಕ್​ ಮಾಡೋ ಸರ್ಕಸ್​ನಲ್ಲಿದ್ದಾರೆ. ಕೊಹ್ಲಿ VS ಆಸಿಸ್​​ ನಡುವಿನ ಬ್ಯಾಟಲ್​ನಲ್ಲಿ ಆಸ್ಟ್ರೇಲಿಯಾ, ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಅನ್ನೋದು ಇನ್ನಷ್ಟು ದಿನಗಳಲ್ಲಿಯೇ ಗೊತ್ತಾಗಲಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us