ಕ್ರಿಕೆಟ್ ಪಂದ್ಯ ನೋಡಲು 58 ಗಂಟೆಗಳ ಪ್ರಯಾಣ ಬೆಳೆಸಿದ
ವಿಮಾನ ಏರಿ ಬಂದವನು ಪಂದ್ಯದ ಟಿಕೆಟ್ ಮರೆದು ಬಂದಿದ್ದ
ತಸ್ಮೇನಿಯದಿಂದ ಬಂದವನಿಗೆ ಸಿಕ್ತಾ ಪಂದ್ಯ ನೋಡುವ ಭಾಗ್ಯ?
ಕ್ರಿಕೆಟ್ಗೆ ಎಂತವರನ್ನೂ ಸಹ ಕುಳಿತಲ್ಲೇ ಕುಳ್ಳಿರಿಸುವಂತಹ ತಾಕತ್ತು ಇದೆ. ಹಾಗಾಗಿ ಜಗತ್ತಿನಾದ್ಯಂತ ಈ ಆಟಕ್ಕೆ ಹೆಚ್ಚಿನ ಫ್ಯಾನ್ಸ್ ಇದ್ದಾರೆ. ಅಷ್ಟೇ ಏಕೆ ನೆಚ್ಚಿನ ತಂಡದ ಆಟವನ್ನು ಕಾಣಲು ದೇಶದ ಉದ್ದಗಲಕ್ಕೂ ಸಂಚರಿಸುವ ಕ್ರಿಕೆಟ್ ಪ್ರೇಮಿಗಳಿದ್ದಾರೆ.
ಇಲ್ಲೊಬ್ಬ ಕ್ರಿಕೆಟ್ ಪ್ರೇಮಿ ಕೂಡ ತನ್ನ ನೆಚ್ಚಿನ ತಂಡದ ಪಂದ್ಯವನ್ನು ಕಾಣಲು ದೇಶದಿಂದ ವಿದೇಶಕ್ಕೆ ಪ್ರಯಾಣ ಮಾಡಿದ್ದಾನೆ. ಒಂದಲ್ಲಾ, ಎರಡಲ್ಲಾ ಬರೋಬ್ಬರಿ 58 ಗಂಟೆಗಳ ಕಾಲ ಟ್ರಾವೆಲ್ ಮಾಡಿದ್ದಾನೆ. ಆದರೆ ದುರಾದೃಷ್ಟಕರ ಸಂಗತಿ ಎಂದರೆ ಟ್ರಾವೆಲ್ ಮಾಡಿದ್ದೇನೋ ನಿಜ ಆದರೆ ತನ್ನ ನೆಚ್ಚಿನ ತಂಡದ ಪಂದ್ಯವನ್ನು ಕಾಣುವ ತವಕದಲ್ಲಿ ಪಂದ್ಯದ ಟಿಕೆಟ್ ಮರೆತು ಬಂದಿದ್ದಾನೆ.
58 ಗಂಟೆಗಳ ಕಾಲ ಪ್ರಯಾಣ
ಹೌದು. ಸದ್ಯ 2ನೇ ಆಸಸ್ ಟೆಸ್ಟ್ ಪಂದ್ಯ ನಡೆಯುತ್ತಿದೆ. ಜೂನ್ 28ರಂದು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಈ ಪಂದ್ಯ ಏರ್ಪಟ್ಟಿತ್ತು. ಆದರೆ ಈ ಪಂದ್ಯವನ್ನು ಕಾಣಲು ಮತ್ತು ತನ್ನ ನೆಚ್ಚಿನ ತಂಡದ ಆಸ್ಟ್ರೇಲಿಯಾದ ಆಟವನ್ನು ಕಣ್ಣಾರೆ ಕಾಣಲು ಟಿಕೆಟ್ ಮಾಟ್ ಎಂಬಾತ ಟಿಕೆಟ್ ಖರೀದಿಸಿದ್ದ.
ಟಿಕೆಟ್ ಮರೆತು ಬಂದ
ದೂರದ ಊರಾದ ತಸ್ಮೇನಿಯಾದ ಸಿಪ್ರಸ್ನಿಂದ ಹೊರಟು ಚೀನಾ ದಾಟಿ ಲಂಡನ್ಗೆ ಬಂದಿಳಿದಿದ್ದ. ಆದರೆ ಮಾಟ್ ಪ್ರಯಾಣದ ನಡುವೆ ಪಂದ್ಯದ ಟಿಕೆಟ್ ಅನ್ನು ಮರೆತು ಬಂದಿದ್ದಾನೆ. 58 ಗಂಟೆಗಳ ಕಾಲ ಪ್ರಯಾಣ ಬೆಳೆಸಿ ಟಿಕೆಟ್ ಬಿಟ್ಟು ಬಂದಿದ್ದಾನೆ.
Can we help Aussie Matt out? He’s travelled from Tasmania with no ticket!#Ashes pic.twitter.com/h1pZ3p4xJj
— England's Barmy Army 🏴🎺 (@TheBarmyArmy) June 28, 2023
‘ನನಗೊಂದು ಟಿಕೆಟ್ ಬೇಕು’
ಕೊನೆಗೆ ಮಾಟ್ ದಿಕ್ಕೇ ತೋಚದೆ ಸ್ಟೇಡಿಯಂ ಹೊರಭಾಗದಲ್ಲಿ ಬಿಳಿ ಕಾಗದದ ಮೇಲೆ ‘‘ನನಗೊಂದು ಟಿಕೆಟ್ ಬೇಕು. ನಾನು 58 ಗಂಟೆಗಳ ಕಾಲ ಟ್ರಾವೆಲ್ ಮಾಡಿ ಬಂದಿದ್ದೇನೆ’’ ಎಂದು ಬೋರ್ಡ್ ಹಿಡಿದು ನಿಂತಿದ್ದಾನೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇಂಗ್ಲೆಂಡ್ಬಾರ್ಮಿ ಆರ್ಮಿ ಎಂಬ ಟ್ವಿಟ್ಟರ್ ಖಾತೆ ಈ ವಿಡಿಯೋವನ್ನು ಹಂಚಿಕೊಂಡಿದೆ.
ಇಂಗ್ಲೆಂಡ್ ಬಾರ್ಮಿ ಆರ್ಮಿ ಹಂಚಿಕೊಂಡ ವಿಡಿಯೋ ಕಂಡು ಅನೇಕರು ಕಾಮೆಂಟ್ ಬರೆದಿದ್ದಾರೆ. ಅದರಲ್ಲೊಬ್ಬ ನಾನು ಆತನಿಗೆ ಟಿಕೆಟ್ ನೀಡಲು ಸಿದ್ದನಿದ್ದೇನೆ ಎಂದು ಕಾಮೆಂಟ್ ಬರೆದರೆ. ಮತ್ತೊಬ್ಬ ಪ್ರಯಾಣ ಬೆಳೆಸುವ ಮುನ್ನ ಎಲ್ಲವನ್ನು ಸರಿಯಾಗಿ ಪರಿಶೀಲಿಸಬೇಕು ಎಂದು ಕಾಮೆಂಟ್ ಮಾಡಿದ್ದಾನೆ. ಸದ್ಯ ಈ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ