ಪ್ರಧಾನಮಂತ್ರಿ ಮೋದಿಯೇ ಬಾಸ್..
ಆಂಥೋನಿ ಅಲ್ಬನೀಸ್ ಬಹುಪರಾಕ್
ಸಿಡ್ನಿಯಲ್ಲಿ 'ಲಿಟಲ್ ಇಂಡಿಯಾ' ಸಂಭ್ರಮ
ಸಿಡ್ನಿ: ಪ್ರಧಾನಮಂತ್ರಿ ಮೋದಿಯೇ ಬಾಸ್ ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಹೇಳಿದ್ದಾರೆ. ನರೇಂದ್ರ ಮೋದಿ ಪ್ರವಾಸದ ಹಿನ್ನೆಲೆ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ವಿಶೇಷ ಕಾರ್ಯಕ್ರಮ ಆಯೋಜಿಸಿದ್ದರು. ಈ ಸಂಭ್ರಮದಲ್ಲಿ ಭಾಗಿಯಾದ ಆಸ್ಟ್ರೇಲಿಯಾ ಪ್ರಧಾನಿ ಅಲ್ಬನೀಸ್, ಮೋದಿಯನ್ನು ಹೊಗಳಿದರು. ಆಂಥೋನಿ ಅಲ್ಬನೀಸ್ ಮೋದಿಯೇ ಬಾಸ್ ಎಂದಾಗ ಹರ್ಷೋದ್ಭಾರ ಮುಗಿಲು ಮುಟ್ಟಿತ್ತು.
ಪ್ರಧಾನಿ ನರೇಂದ್ರ ಮೋದಿಯವರು ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಸಿಡ್ನಿಯಲ್ಲಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅನಿವಾಸಿ ಭಾರತೀಯರನ್ನು ಹಾಗೂ ಅಲ್ಲಿನ ಗಣ್ಯರನ್ನು ಉದ್ದೇಶಿಸಿ ಮಾತಾಡಿದ್ದಾರೆ. ಈ ಸಮುದಾಯ ಕಾರ್ಯಕ್ರಮದಲ್ಲಿ ಭಾಗಿಯಾಗಲೆಂದು ಸುಮಾರು 170 ಭಾರತೀಯ ಮೂಲದ ನಿವಾಸಿಗಳು ಮೆಲ್ಬೋರ್ನ್‌ನಿಂದ ಸಿಡ್ನಿಗೆ ಕ್ವಾಂಟಾಸ್ ವಿಮಾನದಲ್ಲಿ ಬಂದಿಳಿದಿದ್ದಾರೆ.
ವಿಶೇಷ ಎಂದರೆ ಪ್ರಧಾನಿ ಮೋದಿಯವರ ಅಭಿಮಾನಿಗಳ ಆಗಮಿಸಿದ ವಿಮಾನಕ್ಕೆ ‘ಮೋದಿ ಏರ್‌ವೇಸ್’ ಎಂದು ಹೆಸರಿಟ್ಟಿದ್ದರು. ವಿಮಾನವನ್ನು ಹತ್ತುವ ಮುನ್ನ ನೃತ್ಯ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ ತಲೆಯ ಮೇಲೆ ತ್ರಿವರ್ಣ ಪೇಟಗಳನ್ನು ಹಾಕಿಕೊಂಡು ಮತ್ತು ರಾಷ್ಟ್ರಧ್ವಜಗಳನ್ನು ತೋರಿಸುತ್ತಾ, ಮೋದಿ ಮೋದಿ ಎಂದು ಘೋಷಣೆ ಕೂಗುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಪ್ರಧಾನಮಂತ್ರಿ ಮೋದಿಯೇ ಬಾಸ್ ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ವಿಶೇಷ ಧನ್ಯವಾದ ತಿಳಿಸಿದ್ದಾರೆ. #Newsfirstlive #ModiIsTheBoss #NarendraModi #PMModiInSydney #KannadaNews @BJP4Karnataka pic.twitter.com/Ucu7neWvja
— NewsFirst Kannada (@NewsFirstKan) May 24, 2023