newsfirstkannada.com

ಕೋಟಿ ಕೋಟಿ ಅಭಿಮಾನಿಗಳ ಕನಸಿಗೆ ಮತ್ತದೇ ತಣ್ಣೀರು.. ಟೀಂ ಇಂಡಿಯಾ ಸೋಲಿನ ಅಸಲಿ ಕಾರಣ ಏನು ಗೊತ್ತಾ?

Share :

12-06-2023

  WTC ಫೈನಲ್​​ನಲ್ಲಿ ಟೀಮ್​ ಇಂಡಿಯಾಗೆ ಸೋಲು

  209 ರನ್​ಗಳಿಂದ ಸೋತ ಟೀಮ್​ ಇಂಡಿಯಾ

  ಆಸ್ಟ್ರೇಲಿಯಾ ಈಗ ಎಲ್ಲಾ ಟ್ರೋಫಿಗಳ ಒಡೆಯ

ಕ್ರಿಕೆಟ್​​ ಅನ್ನ ಧರ್ಮದಂತೆ ಪ್ರೀತಿಸೋ ಕ್ರಿಕೆಟಿಗರನ್ನು ಆರಾಧಿಸೋ ಅಭಿಮಾನಿಗಳಿಗೆ ಆಗಿದ್ದು ಮತ್ತದೆ ನಿರಾಸೆ. ಮತ್ತದೆ ಹತಾಶೆ. ಇದಕ್ಕೆ ಬ್ರೇಕ್​​ ಯಾವಾಗ ಅನ್ನೋದೆ ಗೊತ್ತಾಗ್ತಿಲ್ಲ. ಟೀಮ್​ ಇಂಡಿಯಾ ಆಟಗಾರರು, ಸಪೋರ್ಟ್​​ ಸ್ಟಾಫ್​ ಬೇಜವಾಬ್ದಾರಿಗೆ ನುಚ್ಚು ನೂರಾಗಿದ್ದು, ಅಸಂಖ್ಯ ಅಭಿಮಾನಿಗಳ ಕನಸು.
WTC ಫೈನಲ್​ನ 5ನೇ ದಿನದಾಟದ ಆರಂಭಕ್ಕೂ ಟ್ರೋಫಿ ಗೆಲ್ಲೋ ಭರವಸೆ ಟೀಮ್​ ಇಂಡಿಯಾ ಕ್ಯಾಂಪ್​ನಲ್ಲಿ ಜೀವಂತವಾಗೇ ಉಳಿದಿತ್ತು. ಆದ್ರೆ ಅಸಲಿ ಅಖಾಡದಲ್ಲಿ ಆಗಿದ್ದೇ ಬೇರೆ. ಭಾರತದ ಬ್ಯಾಟ್ಸ್​ಮನ್​​ ಬ್ಯಾಕ್​ ಟು ಬ್ಯಾಕ್​ ಪೆವಿಲಿಯನ್​ ಸೇರಿದ್ರು. ಪಂದ್ಯದ ಮೇಲೆ ಕಂಪ್ಲೀಟ್​ ಹಿಡಿತ ಸಾಧಿಸಿದ ಆಸ್ಟ್ರೇಲಿಯಾ ಬರೋಬ್ಬರಿ 209 ರನ್​ಗಳ ದಿಗ್ವಿಜಯ ಸಾಧಿಸ್ತು.

ಆಸ್ಟ್ರೇಲಿಯಾ ಈಗ ಎಲ್ಲಾ ಟ್ರೋಫಿಗಳ ಒಡೆಯ

ಟೀಮ್​ ಇಂಡಿಯಾವನ್ನ ಮಣಿಸಿದ ಆಸ್ಟ್ರೇಲಿಯಾ ಈಗ ಐಸಿಸಿ ಟೂರ್ನಿಯ ಎಲ್ಲಾ ಟ್ರೋಫಿಗಳನ್ನ ಗೆದ್ದ ಸಾಧನೆ ಮಾಡಿದೆ. ಟಿ20 ವಿಶ್ವಕಪ್​, ಏಕದಿನ ವಿಶ್ವಕಪ್​, ಚಾಂಪಿಯನ್ಸ್​ ಟ್ರೋಫಿ ಗೆದ್ದಿದ್ದ ಆಸಿಸ್​ ಈಗ ವಿಶ್ವದ ಟೆಸ್ಟ್​ ಚಾಂಪಿಯನ್​ ಕೂಡ ಆಗಿದೆ. ಇನ್ನೊಂದೆಡೆ ಟೀಮ್​ ಇಂಡಿಯಾ ಕಾಯುವಿಕೆ ಮುಂದುವರೆದಿದೆ.

ಭಾರತದಲ್ಲಿ ಕ್ರಿಕೆಟ್​ ಅಂದ್ರೆ ಅದು ಕೇವಲ ಒಂದು ಆಟವಲ್ಲ. ಅದೊಂದು ಧರ್ಮ. ಜಾತಿ, ಮತ, ಧರ್ಮ, ಗಡಿ ಇವೆಲ್ಲವನ್ನೂ ಮೀರಿ ಇಡೀ ದೇಶ ಕ್ರಿಕೆಟ್​ ಅನ್ನ ಪ್ರೀತಿಸುತ್ತೆ. ಕ್ರಿಕೆಟ್​ ಅನ್ನ ಆರಾಧಿಸುತ್ತೆ.. ಆದ್ರೆ, ಫ್ಯಾನ್ಸ್​ ಆಗ್ತಿರೋದು ಮಾತ್ರ ಮೇಲಿಂದ ಮೇಲೆ ಸೋಲಿನ ಆಘಾತವಷ್ಟೇ. ಇದು ಒಂದೆರಡು ವರ್ಷದ ಕಥೆಯಲ್ಲ.. ಕಳೆದ 10 ವರ್ಷದಿಂದ ಐಸಿಸಿ ಇವೆಂಟ್​​ನಲ್ಲಿ ಅಭಿಮಾನಿಗಳಿಗೆ ಆಗ್ತಿರೋ ನೋವಿದು.

2 ತಿಂಗಳು IPL​ನಲ್ಲಿ ಮಸ್ತಿ, ಫೈನಲ್​​ನಲ್ಲಿ ಠುಸ್​ ಪಟಾಕಿ

ಮಹತ್ವದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗೂ ಮುನ್ನ ಟೀಮ್​ ಇಂಡಿಯಾ ಆಟಗಾರರು ಐಪಿಎಲ್​ ಆಡೋದ್ರಲ್ಲಿ ಬ್ಯುಸಿಯಾಗಿದ್ರು. ಮುಂದೆ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​ ಇದೆ. ಟೀಮ್​ ಇಂಡಿಯಾವನ್ನು ಗೆಲ್ಲಿಸಬೇಕು. ಅಭಿಮಾನಿಗಳ ಕನಸನ್ನು ಈಡೇರಿಸಬೇಕು ಅನ್ನೋ ಯಾವ ಹಂಬಲವೂ ಆಟಗಾರರಲ್ಲಿ ಇರಲಿಲ್ಲ. ಕಳೆದ 2 ತಿಂಗಳಿಂದ ಎಲ್ಲವನ್ನೂ ಮರೆತು, ವೈಟ್​ಬಾಲ್​ ಹಿಡಿದು ಶ್ರೀಮಂತ ಕ್ರಿಕೆಟ್​ ಲೀಗ್​ನಲ್ಲಿ 20 ಓವರ್​ ಮ್ಯಾಚ್​​​​ ಆಡಿ ಉಳಿದ ಟೈಮ್​ನಲ್ಲಿ ಮಸ್ತಿ ಮಾಡಿದ್ರು.

ಇಂಗ್ಲೆಂಡ್​ನಲ್ಲಿ ಆಡೋದ್ ಕಷ್ಟ​..!

ಇಂಗ್ಲೆಂಡ್​​ನ ಪ್ಲೇಯಿಂಗ್​ ಕಂಡಿಷನ್​​ನಲ್ಲಿ ಆಡೋದು ಸಿಕ್ಕಾಪಟ್ಟೆ ಕಠಿಣ. ಇದು ಇಡೀ ಜಗತ್ತಿಗೆ ಗೊತ್ತಿರೋ ವಿಚಾರ. ಆದ್ರೆ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​ಗೆ ಇದು ಗೊತ್ತಿರಲಿಲ್ವಾ? ಅಥವಾ ಬೇಜವಾಬ್ದಾರಿ ನಡೆನಾ ಗೊತ್ತಿಲ್ಲ. ಮಹತ್ವದ ಫೈನಲ್​ ಫೈಟ್​ಗೆ ಕಠಿಣ ಅಭ್ಯಾಸವನ್ನ ನಡೆಸಿ ಯಾವೊಬ್ಬ ಆಟಗಾರ ಕೂಡ ಸಿದ್ಧತೆ ನಡೆಸಲಿಲ್ಲ. 2 ವಾರ ಮುಂಚೆ ಇಂಗ್ಲೆಂಡ್​ಗೆ ಬಂದ್ರು. ನೆಟ್ಸ್​ನಲ್ಲಿ ಆಡಿದ್ದು ಬಿಟ್ರೆ, ಒಂದೇ ಒಂದು ಪ್ರಾಕ್ಟಿಸ್​ ಮ್ಯಾಚ್​ ಆಡಲೇ ಇಲ್ಲ. ಪ್ರತಿಷ್ಠೆಯ ಪಂದ್ಯವನ್ನು ಸೀರಿಯಸ್​​ ಆಗೇ ತೆಗೆದುಕೊಳ್ಳಲಿಲ್ಲ.

ಗೇಮ್​ಪ್ಲಾನ್​ ಇಲ್ಲದೇ ಕಣಕ್ಕಿಳಿದ ಟೀಮ್​ ಇಂಡಿಯಾ

ಫೈನಲ್​ ಫೈಟ್​ನಲ್ಲಿ ಟಾಸ್ ಗೆದ್ದಿದ್ದೆ ಟೀಮ್​ ಇಂಡಿಯಾದ ದೊಡ್ಡ ಸಾಧನೆ. ಅದನ್ನು ಬಿಟ್ರೆ ಒಂದೇ ಒಂದು ದಿನವೂ ಟೆಸ್ಟ್​ನಲ್ಲಿ ಮೇಲುಗೈ ಸಾಧಿಸಲಿಲ್ಲ. ಮೊದಲ ದಿನದಲ್ಲೇ ಪಂದ್ಯವನ್ನ ಬಿಟ್ಟುಕೊಟ್ಟಂತೆ ಇತ್ತು ಟೀಮ್​ ಇಂಡಿಯಾ ಆಟ. ಟೆಸ್ಟ್​ನ ನಂ1 ಬೌಲರ್​, ನಂ2 ಆಲ್​​ರೌಂಡರ್ ಆಗಿರೋ ಅಶ್ವಿನ್​ಗೆ ಕೊಕ್​ ಕೊಟ್ಟು ಮೊದಲ ತಪ್ಪು ಮಾಡಿದ್ರೆ, ಟ್ರಾವಿಸ್​​ ಹೆಡ್​ ಆಟಕ್ಕೆ ಬ್ರೇಕ್​ ಹಾಕುವಲ್ಲಿ ಎಡವಿದ್ದು 2ನೇ ತಪ್ಪು. ಬ್ಯಾಟಿಂಗ್​ನಲ್ಲಂತೂ ಟೀಮ್​ ಇಂಡಿಯಾ ಅತಿರಥ ಮಹಾರಥರ ಬಗ್ಗೆ ಹೇಳೋದೇ ಬೇಡ.

ಬ್ಯಾಟ್ಸ್​ಮನ್​ ಅಲ್ಲ.. ಸೆಂಚುರಿ ಬಾರಿಸಿದ ಬೌಲರ್ಸ್​

2 ತಿಂಗಳು ಐಪಿಎಲ್​ ಆಡಿದ್ರ ಅಸಲಿ ಎಫೆಕ್ಟ್​ ಆಗಿದ್ದೇ ಇಲ್ಲಿ. ವೈಟ್​ಬಾಲ್​ ಹಿಡಿದು ಮ್ಯಾಜಿಕ್​ ಮಾಡಿದ್ದ ಬೌಲರ್ಸ್​ ರೆಡ್​ಬಾಲ್​ನಲ್ಲಿ ರನ್​​ಮಷೀನ್​ಗಳಾದ್ರು. ದಿ ಓವಲ್​ ಟೆಸ್ಟ್​ನಲ್ಲಿ ಜಿದ್ದಿಗೆ ಬಂದವರಂತೆ ರನ್​ಲೀಕ್​ ಮಾಡಿದ್ರು. ಮೊದಲ ಇನ್ನಿಂಗ್ಸ್​ನಲ್ಲಿ ಮೇನ್​ ವೆಪನ್​ ಆಗಿದ್ದ ಮೊಹಮ್ಮದ್​ ಶಮಿ, ಮೊಹಮ್ಮದ್​ ಸಿರಾಜ್​ ರನ್​ ಬಿಟ್ಟು ಕೊಡೋದ್ರಲ್ಲೇ ಶತಕ ಬಾರಿಸಿದ್ರು. 2ನೆ ಇನ್ನಿಂಗ್ಸ್​ನಲ್ಲೂ ಆಸಿಸ್​ ಬ್ಯಾಟ್ಸ್​ಮನ್​ಗಳ ಬೇಗನೆ ಕಟ್ಟಿ ಹಾಕುವಲ್ಲಿ ಎಡವಿದ್ರು.

ಓವಲ್​​​ನಲ್ಲಿ ಕಂಗಾಲಾದ ಅತಿರಥ ಮಹಾರಥರು

ಟೀಮ್​ ಇಂಡಿಯಾದ ಬ್ಯಾಟಿಂಗ್​ ಲೈನ್​ ಅಪ್​ ನೀವೆ ಗಮನಿಸಬಹುದು. ಇರೋದೆಲ್ಲಾ ವಿಶ್ವ ಕ್ರಿಕೆಟ್​ನ ಸೂಪರ್​ ಸ್ಟಾರ್​ಗಳೇ. ಆದ್ರೆ ಫೈನಲ್​ನಲ್ಲಿ ಮಾಡಿದ್ದೇನು? ಟೀಮ್​ ಇಂಡಿಯಾ ಈ ಸೋ ಕಾಲ್ಡ್​ ಸೂಪರ್​ ಸ್ಟಾರ್​​ಗಳು ಆಸಿಸ್​ ಬೌಲರ್​ಗಳ ಪಾಲಿಗೆ ಸುಲಭದ ಬೇಟೆಯಾದ್ರು.

ಆಟಗಾರರಲ್ಲ.. ಕೋಚ್​ ದ್ರಾವಿಡ್​​ ಕೂಡ ಫೇಲ್..!

ಟೀಮ್​ ಇಂಡಿಯಾ ಹೆಡ್​ ಕೋಚ್​ ರಾಹುಲ್​ ದ್ರಾವಿಡ್​​ ಕೂಡ ಇಂಗ್ಲೆಂಡ್​​​ ಕ್ರಿಕೆಟ್​ ಆಡಿದವರೆ. ಟೀಮ್​ ಇಂಡಿಯಾ ಪರ ಮಾತ್ರವಲ್ಲ. ಕೌಂಟಿಯಲ್ಲೂ ಆಡಿದ್ದಾರೆ. ಪ್ಲೇಯಿಂಗ್​ ಕಂಡಿಷನ್ಸ್​ ಬಗ್ಗೆ ಚನ್ನಾಗೆ ಗೊತ್ತಿದ್ರೂ ಗೇಮ್​ಪ್ಲಾನ್​ ಮಾಡುವಲ್ಲಿ ಮಾತ್ರ ಎಡವಿದ್ರು. ಯಾವ ದಿನದಾಟದಲ್ಲೂ ತಂಡದಲ್ಲಿ ಸ್ಪಷ್ಟತೆಯೆ ಇರಲಿಲ್ಲ.

ಒಟ್ಟಿನಲ್ಲಿ, ಐದೂ ದಿನದಾಟ ಗಮನಿಸಿದ್ರೆ ಟೀಮ್​ ಇಂಡಿಯಾ ಸೋತಿದ್ದು ಸಿದ್ಧತೆಯ ಕೊರತೆಯಿಂದಲೇ ಅಂತಾ ಯಾರಿಗೂ ಅನ್ನಿಸದೇ ಇಲ್ಲ. ಮುಂದಾದ್ರೂ ಟೀಮ್​ ಇಂಡಿಯಾ ಆಟಗಾರರು ಎಚ್ಚೆತ್ತುಕೊಳ್ಳಬೇಕಿದೆ? ಫ್ಯಾನ್ಸ್​ ಪ್ರೀತಿ, ಅಭಿಮಾನಕ್ಕೆ ನ್ಯಾಯ ಸಲ್ಲಿಸಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೋಟಿ ಕೋಟಿ ಅಭಿಮಾನಿಗಳ ಕನಸಿಗೆ ಮತ್ತದೇ ತಣ್ಣೀರು.. ಟೀಂ ಇಂಡಿಯಾ ಸೋಲಿನ ಅಸಲಿ ಕಾರಣ ಏನು ಗೊತ್ತಾ?

https://newsfirstlive.com/wp-content/uploads/2023/06/ROHIT_SHARMA12062023.jpg

Load More