ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಗೆಲವು
ಬೃಹತ್ ಮೊತ್ತದ ರನ್ ಟಾರ್ಗೆಟ್ ಮಾಡುವಲ್ಲಿ ಕೊಂಚದರಲ್ಲಿ ಮಿಸ್
ಕಿವೀಸ್ ರಚಿನ್ ರವೀಂದ್ರ, ಆಸಿಸ್ನ ಟ್ರಾವಿಸ್ ಹೆಡ್ ಸೆಂಚುರಿ ಆಟ
ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರಿಕೆಟ್ ಮೈದಾನದಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ ಜಯಭೇರಿ ಬಾರಿಸಿದೆ. ಆಸಿಸ್ ನೀಡಿದ್ದ 388 ರನ್ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ್ದ ನ್ಯೂಜಿಲೆಂಡ್ ಆಟಗಾರರು ನಿರ್ಣಾಯಕ ಹೋರಾಟ ನಡೆಸಿದ್ದರಿಂದ ಮ್ಯಾಚ್ ಯಾರು ಗೆಲ್ಲುತ್ತಾರೋ ಎಂಬ ಜಿದ್ದಾಜಿದ್ದಿಗೆ ಕಾರಣವಾಗಿತ್ತು. ಕೊನೆಗೆ ಪ್ಯಾಟ್ ಕಮಿನ್ಸ್ ಪಡೆ ಕೇವಲ 5 ರನ್ಗಳ ಅಂತರದಿಂದ ಗೆದ್ದು ಬೀಗಿದೆ.
ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಭರ್ಜರಿ ಓಪನಿಂಗ್ ಅನ್ನು ಪಡೆದುಕೊಂಡಿತ್ತು. ಆರಂಭಿಕ ಬ್ಯಾಟ್ಸ್ಮನ್ಗಳಾಗಿ ಕ್ರೀಸ್ ಆಗಮಿಸಿದ ವಾರ್ನರ್ ಮತ್ತು ಟ್ರಾವಿಸ್ ಹೆಡ್ 175 ರನ್ಗಳ ಪಾರ್ಟನರ್ಶಿಪ್ ಬ್ಯಾಟಿಂಗ್ ಮಾಡಿದರು. ಈ ವೇಳೆ ವಾರ್ನರ್ 81 ರನ್ ಗಳಿಸಿ ಆಡುವಾಗ ಗ್ಲೇನ್ ಪಿಲಿಪ್ಸ್ ಓವರ್ನಲ್ಲಿ ಔಟ್ ಆದರು. ಬಳಿಕ ಬ್ಯಾಟಿಂಗ್ ಮುಂದುವರೆಸಿ ಹೆಡ್ 109 ರನ್ಗಳನ್ನು ಸಿಡಿಸಿದರು. ಇದರಲ್ಲಿ 10 ಫೋರ್ ಹಾಗೂ 7 ಭರ್ಜರಿ ಸಿಕ್ಸರ್ಗಳಿದ್ದವು. ಮಾರ್ಷ್ 36, ಸ್ಮಿತ್ 18, ಲಬುಸ್ಚಾಗ್ನೆ 18, ಮ್ಯಾಕ್ಸವೆಲ್ 41, ಇಂಗ್ಲಿಷ್ 38, ಕಮಿನ್ಸ್ 37 ರನ್ಗಳ ನೆರವಿನಿಂದ 388 ರನ್ಗಳ ಬೃಹತ್ ಮೊತ್ತ ಪೇರಿಸಿತು.
ಆಸಿಸ್ ನೀಡಿರುವ ಗುರಿಯನ್ನು ಬೆನ್ನತ್ತಿರುವ ನ್ಯೂಜಿಲೆಂಡ್ ನಿರ್ಣಾಯಕ ಹೋರಾಟ ಮಾಡಿ ಸೋಲೋಪ್ಪಿಕೊಂಡಿದೆ. ಭಾರತದ ಮೂಲದ ನ್ಯೂಜಿಲೆಂಡ್ ಆಲ್ರೌಂಡರ್ ರಚಿನ್ ರವೀಂದ್ರ ಶತಕ ಬಾರಿಸಿ ತಂಡಕ್ಕೆ ನೆರವಾದರು. ಬರೋಬ್ಬರಿ 89 ಎಸೆತಗಳನ್ನು ಎದುರಿಸಿ 9 ಮೋಹಕವಾದ ಬೌಂಡರಿ, 5 ಭರ್ಜರಿ ಸಿಕ್ಸರ್ ನೆರವಿನಿಂದ ರಚಿನ್ 116 ರನ್ಗಳನ್ನು ಬಾರಿಸಿದ್ದರು.
ಸೆಂಚುರಿ ಸಿಡಿಸಿ ಆಡುತ್ತಿದ್ದ ರಚಿನ್ ಆಸಿಸ್ ಕ್ಯಾಪ್ಟನ್ ಕಮಿನ್ಸ್ ಓವರ್ನಲ್ಲಿ ಭಾರೀ ಹೊಡೆತಕ್ಕೆ ಕೈ ಹಾಕಿ ಲಬುಸ್ಚಾಗ್ನೆ ಕ್ಯಾಚ್ ನೀಡಿ ಕೈ ಸುಟ್ಟುಕೊಂಡರು. ಇದು ಕಿವೀಸ್ ಪಡೆಗೆ ಭಾರೀ ಹೊಡೆತ ಬಿದ್ದಂತೆ ಆಯಿತು. ಕಾನ್ವೆ 28, ಯಂಗ್ 32, ಮಿಚೆಲ್ 54, ಲಾಥಮ್ 21, ಪಿಲಿಪ್ಸ್ 12, ನಿಶಾಮ್ 58, ಸ್ಯಾಟ್ನರ್ 17, ಹೆನ್ರಿ 9 ರನ್ಗೆ ಔಟ್ ಆಗಿದ್ದರು. ಬೋಲ್ಟ್ 10 ರನ್ನಿಂದ ಆಡುವಾಗಲೇ ಓವರ್ ಮುಗಿದಿದ್ದರಿಂದ ಆಸಿಸ್ ನೀಡಿದ್ದ 388 ರನ್ಗೆ ಕಿವೀಸ್ 383 ರನ್ ಗಳಿಸಲು ಶಕ್ತವಾಯಿತು. ಇದರಿಂದ ಕೇವಲ 5 ರನ್ಗಳ ಅಂತರದಿಂದ ಕೀವಿಸ್ ನೆಲಕಚ್ಚಿಕೊಂಡಿತು.
ನ್ಯೂಜಿಲೆಂಡ್ ತಂಡ ಆಸಿಸ್ ಪಡೆಗೆ ಬೆವರಿಳಿಸಿತ್ತು. ಇನ್ನೇನು ಗೆಲುವು ಪಡೆಯಿತು ಎಂದು ಅಂದುಕೊಂಡಿದ್ದರು. ಆದರೆ ಗೆಲುವಿಗೆ ಇನ್ನು 5 ರನ್ ಬಾಕಿ ಇರುವಾಗಲೇ ನಿಗದಿತ 50 ಓವರ್ ಮುಗಿದ ಕಾರಣ ಸೋಲೋಪ್ಪಿಕೊಂಡಿತು. ಇದರಿಂದ ಪ್ಯಾಟ್ ಕಮಿನ್ಸ್ ಟೀಮ್ ದೊಡ್ಡ ನಿಟ್ಟುಸಿರು ಬಿಟ್ಟು ಕೊನೆಗೆ ಗೆದ್ದೆವಲ್ಲ ಎಂದು ಸಂಭ್ರಮಿಸಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ