newsfirstkannada.com

ಒಂದೇ ಓವರ್​ಗೆ 6 ವಿಕೆಟ್​ ಕಬಳಿಸಿದ ಬೌಲರ್​! ಇದೆಂಥಾ ದಾಖಲೆ ಗುರು

Share :

14-11-2023

    ಏಕದಿನ ಪಂದ್ಯದಲ್ಲಿ ಮೋಡಿ ಮಾಡಿದ ಬೌಲರ್​

    ಒಂದೇ ಒಂದು ರನ್​ ಬಾರಿಸದಂತೆ 6 ವಿಕೆಟ್​ ಕಬಳಿಸಿದ

    6 ಎಸೆತಕ್ಕೆ 6 ವಿಕೆಟ್​ ಕಬಳಿಸಿದ್ದನ್ನು ಕಂಡು ಅಚ್ಚರಿಗೊಂಡ ಟೀಂ

ಏಕದಿನ ಪಂದ್ಯದಲ್ಲಿ ಬೌಲರ್​ ಓರ್ವ ಕೊನೆಯ ಓವರ್​​ನಲ್ಲಿ ಆರು ವಿಕೆಟ್​​ ಪಡೆದು ಕ್ರಿಕೆಟ್​​ ಲೋಕದಲ್ಲೇ ಹೊಸ ದಾಖಲೆ ನಿರ್ಮಿಸಿದ ಘಟನೆ ಬೆಳಕಿಗೆ ಬಂದಿದೆ. ಆಸ್ಟ್ರೇಲಿಯಾದ ಗೋಲ್ಡ್​​ ಕೋಸ್ಟ್​​​ ಪ್ರಿಮೀಯರ್​​ ಲೀಗ್​ನಲ್ಲಿ ಮಡ್​ಗೀರಾಬ ತಂಡದ ನಾಯಕ ಗೆರತ್​​ ಮಾರ್ಗನ್​, ಸರ್ಫರ್​​ ಪಾರಾಡೈಸ್​​​ ವಿರುದ್ಧದ ಪಂದ್ಯದಲ್ಲಿ ತನ್ನ ಕೊನೆಯ ಓವರ್​ನಲ್ಲಿ 6 ವಿಕೆಟ್​​ಗಳನ್ನು ಪಡೆದು ತಂಡದ ಗೆಲುವಿಗೆ ಕಾರಣರಾಗಿದ್ದಾರೆ.

ಗೆಲುವಿಗೆ ಕೇವಲ 5 ರನ್​ ಬೇಕಾಕಿದ್ದ ಸಂದರ್ಭದಲ್ಲಿ ಬೌಲಿಂಗ್​ ಮಾಡಲು ಬಂದ ಗೆರತ್​​ ಮಾರ್ಗನ್ 65 ಬಾರಿಸಿದ್ದ ಬ್ಯಾಟರ್​​ ಜೇಕ್​ ಗ್ಯಾರ್ಲಂಡ್​ ಅವರ ವಿಕೆಟ್​ ಕಿತ್ತು ಮನೆಗೆ ಕಳುಹಿಸಿದರು. ಬಳಿಕ ಬಂದ ಬ್ಯಾಟ್ಸ್​ಮನ್​ಗಳಿಗೆ ಒಂದೂ ರನ್​ ಕೊಡದೆ ಅವರ ವಿಕೆಟ್ ಕಿತ್ತಿದ್ದಾರೆ.​ ಹೀಗೆ ​​ ಆರು ಎಸೆತಗಳಲ್ಲಿ ಆರು ವಿಕೆಟ್​ ಪಡೆದು ವಿನೂತನ ದಾಖಲೆಯನ್ನು ಗೆರತ್​​ ಮಾರ್ಗನ್ ಬರೆದಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ಗೆರತ್​​ ಮಾರ್ಗನ್, ‘‘ನಾನು ಹ್ಯಾಟ್ರಿಕ್ ವಿಕೆಟ್​ ಪಡೆದ ನಂತರ ನಾನು ಯೋಚಿಸಿದೆ – ನಾನು ಈಗ ಈ ಆಟವನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ನಂತರ ಅದು ಹುಚ್ಚಾಯಿತು. ಕೊನೆಯ ಎಸೆತದಲ್ಲಿ ಸ್ಟಂಪ್‌ಗಳು ಉರುಳುವುದನ್ನು ಕಂಡಾಗ ನನಗೆ ನಂಬಲಾಗಲಿಲ್ಲ’’. ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದೇ ಓವರ್​ಗೆ 6 ವಿಕೆಟ್​ ಕಬಳಿಸಿದ ಬೌಲರ್​! ಇದೆಂಥಾ ದಾಖಲೆ ಗುರು

https://newsfirstlive.com/wp-content/uploads/2023/11/Australian.png

Load More