newsfirstkannada.com

ಇಂಗ್ಲೆಂಡ್-ಆಸ್ಟ್ರೇಲಿಯಾ 2ನೇ ಟೆಸ್ಟ್.. ಭಾರೀ ವಿವಾದಕ್ಕೆ ಕಾರಣವಾಗಿರುವ ಬೈರ್​ಸ್ಟೋವ್ ರನೌಟ್​ ವಿಡಿಯೋ..!

Share :

03-07-2023

    ಕ್ರಿಕೆಟ್ ಲೋಕದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗ್ತಿದೆ ಈ ರನೌಟ್

    ಆಸ್ಟ್ರೇಲಿಯಾ ದೊಡ್ಡ ಮನಸ್ಸು ಮಾಡಬಹುದಿತ್ತು, ಮಾಡಲಿಲ್ಲ

    43 ರನ್​ಗಳಿಂದ ಆಸ್ಟ್ರೇಲಿಯಾ ವಿರುದ್ಧ ಸೋತ ಇಂಗ್ಲೆಂಡ್ ​

Ashes Test: ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯ ಎರಡನೇ ಟೆಸ್ಟ್ ಪಂದ್ಯದ ಕೊನೆಯ ದಿನ ಭಾರೀ ನಾಟಕೀಯ ಬೆಳವಣಿಗೆಗಳು ನಡೆಯಿತು. ಕೊನೆಯಲ್ಲಿ ಆಸ್ಟ್ರೇಲಿಯಾ ಇಂಗ್ಲೆಂಡ್ ವಿರುದ್ಧ 43 ರನ್​ಗಳ ಗೆಲುವು ಸಾಧಿಸಿತು.

ಏನಿದು ವಿವಾದ..?

ಟೆಸ್ಟ್ ಪಂದ್ಯದ ಕೊನೆಯ ದಿನ ಇಂಗ್ಲೆಂಡ್ ತನ್ನ ಎರಡನೇ ಇನ್ನಿಂಗ್ಸ್​ನ 52ನೇ ಓವರ್ ಆಡುತ್ತಿತ್ತು. ಆಸ್ಟ್ರೇಲಿಯಾ ಪರ ಬೌಲ್ ಮಾಡಲು ಬಂದಿದ್ದ ಕ್ಯಾಮರಾನ್ ಗ್ರೀನ್, ಕ್ರೀಸ್​ನಲ್ಲಿದ್ದ ಬೈರ್​​ಸ್ಟೋವ್​ಗೆ ಬೌನ್ಸರ್ ಎಸೆದರು. ಇದನ್ನು ಗಮನಿಸಿದ ಎದುರಾಳಿ ಬೈರ್​ಸ್ಟೋವ್, ಬಗ್ಗಿ ಬಾಲ್​​ನಿಂದ ತಪ್ಪಿಸಿಕೊಂಡರು. ಅಲ್ಲಿಂದ ಆ ಬಾಲ್ ನೇರವಾಗಿ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಕೈ ಸೇರಿತು. ಬಳಿಕ ಬೈರ್​ಸ್ಟೋವ್, ಕ್ರೀಸ್​ನಿಂದ ಹೊರ ಬಂದು, ನಾನ್ ಸ್ಟ್ರೈಕ್​ನಲ್ಲಿದ್ದ ಬೆನ್ ಸ್ಟೋಕ್ಸ್​ ಜೊತೆ ಮಾತನಾಡಲು ಮುಂದಾಗುತ್ತಾರೆ.

ಆಸ್ಟ್ರೇಲಿಯಾ ಅಪೀಲ್ ವಾಪಸ್ ಪಡೆಯಬಹುದಿತ್ತು

ಬೈರ್​ಸ್ಟೋವ್​ ಕ್ರೀಸ್​ನಿಂದ ಹೊರ ಬರುವ ಸಂದರ್ಭದಲ್ಲಿ, ಆ ಬಾಲ್ ಇನ್ನೂ ಡೆಡ್ ಆಗಿರಲಿಲ್ಲ. ಯಾವಾಗ ಬೈರ್​​ಸ್ಟೋವ್ ಹೊರ ಬರ್ತಿದ್ದಂತೆಯೇ, ಕ್ಯಾರಿ ಆ ಬಾಲನ್ನು ಸ್ಟಂಪ್​ಗೆ ಹೊಡೆದು ವಿಕೆಟ್ ನೀಡುವಂತೆ ಅಂಪೈರ್​ಗೆ ಮನವಿ ಮಾಡ್ತಾರೆ. ಆಗ ಬೈರ್​ಸ್ಟೋವ್ ಕಕ್ಕಾಬಿಕ್ಕಿಯಾಗಿ ಎದುರಾಳಿ ತಂಡಗಳ ಸಂಭ್ರಮವನ್ನು ನೋಡುತ್ತ ನಿಲ್ಲುತ್ತಾರೆ. ಕೊನೆಗೆ ಅಂಪೈರ್, ಥರ್ಡ್​ ಅಂಪೈರ್​ಗೆ ರೆಫರ್ ಮಾಡ್ತಾರೆ. ಅಲ್ಲಿ ಬೈರ್​ಸ್ಟೋವ್ ಔಟ್ ಎಂದು ಬರುತ್ತದೆ. ಸದ್ಯ ಇದು ಕ್ರಿಕೆಟ್ ಲೋಕದಲ್ಲಿ ವಿವಾದಕ್ಕೆ ಕಾರಣವಾಗಿದೆ.

ಒಂದು ಬಾಲ್ ಎಸೆದು ವಿಕೆಟ್ ಕೀಪರ್ ಕೈ ಸೇರಿದ ನಂತರ ಬ್ಯಾಟರ್​ ಕ್ರೀಸ್​ನಿಂದ ಹೊರಬರುವಾಗ, ವಿಕೆಟ್ ಕೀಪರ್ ಅಥವಾ ಅಂಪೈರ್​ ಗಮನಕ್ಕೆ ತರುತ್ತಾರೆ. ಆದರೆ ನಿನ್ನೆಯ ದಿನ ಬೈರ್​ಸ್ಟೋವ್ ಅದನ್ನು ಮಾಡಲಿಲ್ಲ. ಮನಸ್ಸು ಮಾಡಿದ್ರೆ ಆಸ್ಟ್ರೇಲಿಯಾ ತಂಡದ ಅಪೀಲ್ ಅನ್ನು ಹಿಂತೆಗೆದುಕೊಳ್ಳಬಹುದಿತ್ತು. ಆದರೆ ಅದನ್ನು ಆಸ್ಟ್ರೇಲಿಯಾ ಮಾಡಲಿಲ್ಲ. ಈ ಹಿಂದೆ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಆ ಕೆಲಸ ಮಾಡಿದ್ದರು. ಪರಿಣಾಮ ಬೈರ್​ಸ್ಟೋವ್ 10 ರನ್​ ಗಳಿಸಿ ಪೆವಿಲಿಯನ್​ಗೆ ಮರಳಬೇಕಾಯಿತು. ಇದರಿಂದ ಇಂಗ್ಲೆಂಡ್ ಆಸ್ಟ್ರೇಲಿಯಾ ವಿರುದ್ಧ ಸೋಲಬೇಕಾಯಿತು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಇಂಗ್ಲೆಂಡ್-ಆಸ್ಟ್ರೇಲಿಯಾ 2ನೇ ಟೆಸ್ಟ್.. ಭಾರೀ ವಿವಾದಕ್ಕೆ ಕಾರಣವಾಗಿರುವ ಬೈರ್​ಸ್ಟೋವ್ ರನೌಟ್​ ವಿಡಿಯೋ..!

https://newsfirstlive.com/wp-content/uploads/2023/07/ENGvsAUS.jpg

Load More