newsfirstkannada.com

ಸೋತರೂ ಭಾರತೀಯರ ಹೃದಯ ಗೆದ್ದ ಟೀಮ್​ ಇಂಡಿಯಾದ ಹೆಮ್ಮೆಯ ವನಿತೆಯರು

Share :

25-02-2023

    ಟಿ-20 ವಿಶ್ವಕಪ್​​ನಲ್ಲಿ ಟೀಂ ಇಂಡಿಯಾಗೆ ವಿರೋಚಿತ ಸೋಲು

    ಫೈನಲ್ ಪ್ರವೇಶ ಮಾಡಿದ ಆಸ್ಟ್ರೇಲಿಯಾ ವನಿತೆಯರು

    ಫೈನಲ್​​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ಸೆಣಸಾಟ

ನಿನ್ನೆ ಆಸ್ಟ್ರೇಲಿಯಾ ವಿರುದ್ಧ ನಡೆದ T20 ವಿಶ್ವಕಪ್​ನ ಸಮಿಫೈನಲ್​ ಪಂದ್ಯದಲ್ಲಿ ಕೇವಲ 5 ರನ್​ಗಳಿಂದ ಭಾರತದ ಮಹಿಳಾ ಕ್ರಿಕೆಟ್​ ತಂಡ ಪರಾಭವಗೊಂಡಿತು. ಇದರಿಂದ ಚೊಚ್ಚಲ ವಿಶ್ವಕಪ್​ ಗೆಲ್ಲುವ ನಿರೀಕ್ಷೆಯನ್ನ ಮತ್ತೆ ಕೈಚೆಲ್ಲಿದೆ. ವಿಶ್ವಕಪ್​ನಲ್ಲಿ ಸತತ 2ನೇ ಬಾರಿ ಟೀಮ್​ ಇಂಡಿಯಾ ಆಸ್ಟ್ರೇಲಿಯಾದ ಜೊತೆ ಕೈ ಸುಟ್ಟುಕೊಂಡಿದೆ. ಕಳೆದ ಬಾರಿಯ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಇದೇ ಆಸೀಸ್​ ತಂಡ ಭಾರತವನ್ನ ಮಣಿಸಿ ಪ್ರಶಸ್ತಿಗೆ ಮುತ್ತಿಟ್ಟಿತ್ತು. ಆದ್ರೆ ಈ ಸಲ ಸಮಿಫೈನಲ್​ ಹಂತದಲ್ಲೇ ಭಾರತವನ್ನ ಸೋಲಿಸಿ ಫೈನಲ್​ಗೆ ಎಂಟ್ರಿ ಕೊಟ್ಟಿದೆ.

ಕೇಪ್​ಟೌನ್​ ಸ್ಟೇಡಿಯಂನಲ್ಲಿ ನಡೆದ ಸಮಿಫೈನಲ್​ನಲ್ಲಿ ಟಾಸ್​ ವಿನ್​ ಆದ ಆಸೀಸ್​ ಮಹಿಳಾ ಟೀಮ್ ಕ್ಯಾಪ್ಟನ್​ ಮೆಗ್ ಲ್ಯಾನಿಂಗ್​ ಬ್ಯಾಟಿಂಗ್​ ಆಯ್ದುಕೊಂಡರು. ಓಪನರ್​ ಆಗಿ ಕ್ರೀಸ್​ಗೆ ಆಗಮಿಸಿದ ಅಲಿಸ್ಸಾ ಹೀಲಿ ಮತ್ತು ಬೆತ್ ಮೂನಿ ತಂಡಕ್ಕೆ ಉತ್ತಮ ಆರಂಭವನ್ನೇ ಒದಗಿಸದರು ಎನ್ನಬಹುದು.

ಮೂನಿ 37 ಎಸೆತಗಳಲ್ಲಿ 54 ರನ್​ ಸಿಡಿಸಿದರು. ಇದರಲ್ಲಿ 7 ಬೌಂಡರಿ, 1 ಸಿಕ್ಸ್ ಕೂಡ ಸೇರಿತ್ತು. ಅಲಿಸ್ಸಾ ಹೀಲಿ 25 ರನ್​ ಗಳಿಸಿ ಔಟ್​ ಆದರು. ಕ್ಯಾಪ್ಟನ್​ ಮೆಗ್ ಲ್ಯಾನಿಂಗ್ 4 ಬೌಂಡರಿ, 2 ಅಮೋಘ ಸಿಕ್ಸ್​ಗಳಿಂದ 49 ರನ್​ ಗಳಿಸಿದರು. ಆಶ್ಲೀ ಗಾರ್ಡ್ನರ್ 31, ಹ್ಯಾರಿಸ್​ 7, ಪೆರಿ 2 ರನ್​ಗಳಿಂದ ಆಸೀಸ್​ 20 ಓವರ್​ಗಳಲ್ಲಿ 4 ವಿಕೆಟ್​ಗೆ 172ರನ್​ಗಳ ಗುರಿಯನ್ನ ಟೀಮ್​ ಇಂಡಿಯಾಕ್ಕೆ ನೀಡಿತು.

ಈ ಗುರಿ ಬೆನ್ನತ್ತಿದ ಭಾರತ ತಂಡ ಆರಂಭಿಕ ಆಘಾತಕ್ಕೆ ಒಳಗಾಯಿತು. ಕೇವಲ 11 ರನ್​ ಗಳಿಸಿರುವಾಗಲೇ ಶಫಾಲಿ ವರ್ಮಾ ಔಟ್​ ಆದರು. ಮತ್ತೆ ತಂಡದ ಮೊತ್ತ 15 ರನ್​ಗಳು ಆಗಿರುವಾಗ ಸ್ಮೃತಿ ಮಂದಾನ, ಗಾರ್ಡ್ನರ್ ಬೌಲಿಂಗ್​ನಲ್ಲಿ ಎಲ್​ಬಿಗೆ ಬಲಿಯಾದರು. ಇದರಿಂದ ಭಾರತಕ್ಕೆ ಭಾರೀ ನಷ್ಟವಾಯಿತು. ಮಧ್ಯಮ ಕ್ರಮಾಂಕದಲ್ಲಿ ಆಡಲು ಕ್ರೀಸ್​ ಆಗಮಿಸಿದ ಜೆಮಿಯಾ 6 ಬೌಂಡರಿಯಿಂದ 43 ರನ್​ ಸಿಡಿಸಿದರು.

ಕ್ಯಾಪ್ಟನ್ ಹರ್ಮನ್​ ಪ್ರೀತ್​ ಕೌರ್ 6 ಬೌಂಡರಿ, 1 ಸಿಕ್ಸ್​ರ್​ ನೆರವಿನಿಂದ 54 ರನ್​ ಗಳಿಸಿ ತಂಡದ ಗೆಲುವಿಗೆ ಹೋರಾಟ ನಡೆಸಿದರು. ಆದ್ರೆ 2 ರನ್​ ತೆಗೆದುಕೊಳ್ಳೊ ಬರದಲ್ಲಿ ರನ್​ಔಟ್​ಗೆ ಬಲಿಯಾದರು. ಇಲ್ಲಿಗೆ ಭಾರತ ಗೆಲ್ಲುವ ಕನಸು ಕೈಚೆಲ್ಲಿತು. ಕ್ಯಾಪ್ಟನ್​ ಹರ್ಮನ್​ ರನ್​ಔಟ್​ ಆಗಿದ್ದೇ ಟೀಮ್​ ಇಂಡಯಾ ಸೋಲಿಗೆ ಪ್ರಮುಖ ಕಾರಣ ಎನ್ನಬಹುದು. ಇವರ ನಂತರ ಬಂದ ಯಾವ ಮಹಿಳಾ ಆಟಗಾರರು ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಹೀಗಾಗಿ 20 ಓವರ್​​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 167 ರನ್​ ಕಲೆ ಹಾಕಿ ಆಸೀಸ್​ ವಿರುದ್ಧ ಶರಣಾಯಿತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸೋತರೂ ಭಾರತೀಯರ ಹೃದಯ ಗೆದ್ದ ಟೀಮ್​ ಇಂಡಿಯಾದ ಹೆಮ್ಮೆಯ ವನಿತೆಯರು

https://newsfirstlive.com/wp-content/uploads/2023/02/BCCI-2.jpg

Load More