newsfirstkannada.com

ಬೆಂಗಳೂರಿನಲ್ಲಿ ಆಟೋ ಬಹಳ ದುಬಾರಿ; ಕೇವಲ 500 ಮೀಟರ್​ಗೆ 100 ರೂ. ಚಾರ್ಜ್​​!

Share :

25-07-2023

  ಶಕ್ತಿ ಯೋಜನೆಯಿಂದ ಆಟೋ ಚಾಲಕರಿಗೆ ಕಡಿಮೆ ಆದಾಯ..!

  ಪ್ರಯಾಣಿಸಲು ಜನ ಬಾರದಿದ್ರೂ ಈಗ ಆಟೋ ಬಹಳ ದುಬಾರಿ

  ಕೇವಲ 500 ಮೀಟರ್ಗೆ 100 ರೂಪಾಯಿ ಪಡೆದ ಆಟೋ ಡ್ರೈವರ್​​​

ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ನೀಡಿದ ಭರವಸೆಯಂತೆ ಅಧಿಕಾರಕ್ಕೆ ಬಂದ ಕೂಡಲೇ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​​ ಸರ್ಕಾರ ತನ್ನ ಐದು ಗ್ಯಾರಂಟಿಗಳ ಜಾರಿಗೆ ಮುಂದಾಗಿದೆ. ಈಗಾಗಲೇ ಶಕ್ತಿ ಯೋಜನೆ ಸ್ಕೀಮ್​​ ಜಾರಿ ಮಾಡಲಾಗಿದ್ದು, ಸರ್ಕಾರಿ ಬಸ್​ಗಳ ಸೇವೆಯನ್ನು ಮಹಿಳೆಯರು ಹೆಚ್ಚಾಗಿ ಬಳಸುತ್ತಿದ್ದಾರೆ. ಇದರಿಂದ ಮಹಿಳೆಯರ ಜೀವನದ ಮಟ್ಟ ಸುಧಾರಿಸಿದೆ.

ಒಂದೆಡೆ ಬಡ ಮಹಿಳೆಯರಿಗೆ ಫ್ರೀ ಬಸ್​ ಸ್ಕೀಮ್​​ನಿಂದ ಸಾಕಷ್ಟು ಸಹಾಯವಾದರೆ, ಇನ್ನೊಂದೆಡೆ ಶಕ್ತಿ ಯೋಜನೆ ಜಾರಿಯಿಂದ ಆಟೋ ಚಾಲಕರಿಗೆ ಆದಾಯ ಕಡಿಮೆ ಆಗಿದೆ ಎನ್ನಬಹುದು. ಹೀಗಿರುವಾಗ ಇಲ್ಲೋರ್ವ ವ್ಯಕ್ತಿ ಕೇವಲ 500 ಮೀಟರ್​​​ ಪ್ರಯಾಣ ಮಾಡಿದ್ದಕ್ಕೆ 100 ರೂ. ಹಣ ನೀಡಿದ್ದಾರೆ. ಈ ಘಟನೆಯೂ ಬೆಂಗಳೂರಿನಲ್ಲಿ ಆಟೋ ಎಷ್ಟು ದುಬಾರಿ ಎನ್ನುವುದನ್ನು ಎತ್ತಿ ತೋರಿಸುತ್ತಿದೆ.

ಈ ಸಂಬಂಧ ಟ್ವೀಟ್​ ಮಾಡಿರುವ ಮುಂಬೈ ಮೂಲದ ನ್ಯೂರಲ್‌ ಗ್ಯಾರೇಜ್​ ಎಂಬ ಸಂಸ್ಥೆ ಸಂಸ್ಥಾಪಕ ಮಂದಾರ ನಾಟೇಕರ್​ ಎಂಬುವರು, ಮುಂಬೈನಲ್ಲಿ 100 ರೂಪಾಯಿ ಕೊಟ್ಟರೆ 9 ಕಿಲೋ ಮೀಟರ್​ ಹೋಗಬಹುದು. ನಾನು ಬೆಂಗಳೂರಿನಲ್ಲಿ ಕೇವಲ 500 ಮೀಟರ್ ರೈಡ್‌ಗೆ 100 ರೂ. ಪಾವತಿಸಿದ್ದೇನೆ. ಇದು ಸಾಕಷ್ಟು ದುಬಾರಿ ಎಂದು ಬರೆದುಕೊಂಡಿದ್ದಾರೆ.

ಇನ್ನು, ಈ ಟ್ವೀಟ್​ಗೆ ನೆಟ್ಟಿಗರು ಹಲವು ರೀತಿಯಲ್ಲಿ ರಿಯಾಕ್ಟ್​ ಮಾಡಿದ್ದಾರೆ. ಮುಂಬೈನಲ್ಲಿ ಮೀಟರ್​ ಆಟೋ ಸಿಗುತ್ತದೆ. ಆದರೆ, ರಸ್ತೆಗಳು ಮಾತ್ರ ಬಹಳ ಕೆಟ್ಟದಾಗಿ ಇರುತ್ತವೆ. ಬೆಂಗಳೂರಿನಲ್ಲಿ ರಸ್ತೆಗಳು ಚೆನ್ನಾಗಿವೆ, ಹಾಗಾಗಿ ಹೆಚ್ಚು ತೆಗೆದುಕೊಳ್ಳುತ್ತಾರೆ ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿನಲ್ಲಿ ಆಟೋ ಬಹಳ ದುಬಾರಿ; ಕೇವಲ 500 ಮೀಟರ್​ಗೆ 100 ರೂ. ಚಾರ್ಜ್​​!

https://newsfirstlive.com/wp-content/uploads/2023/07/Auto-Driver.jpg

Load More