ಬೆಂಗಳೂರು ನೋಡಲು ಬರೋ ವಿದೇಶಿಗರೇ ಹುಷಾರ್
ಸಿಕ್ಕಿ ಸಿಕ್ಕ ಆಟೋಗಳನ್ನು ಹತ್ತೋ ಮುನ್ನ ಒಮ್ಮೆ ಯೋಚಿಸಿ
ಸಿಟಿ ಎಲ್ಲಾ ಸುತ್ತಿಸಿ 1 ಸಾವಿರ ಪೀಕಿದ ಆಟೋ ಚಾಲಕ..!
ಬೆಂಗಳೂರು: ಮೀಟ್ರು ಹಾಕ್ರಿ ಅಂದ್ರೆ ಹಾಕಲ್ಲ.. ಹೇಳಿದ್ ಕಡೆ ಹೋಗಿ ಅಂದ್ರೆ ಸುತಾರಾಮ್ ಒಪ್ಪಲ್ಲ. 5 ನಿಮಿಷದಲ್ಲಿ ಹೋಗೋ ಜಾಗಕ್ಕೆ 50 ನಿಮಿಷ ಮಾಡ್ತಾರೆ. ಇಂತವರ ಮಧ್ಯೆ ಓರ್ವ ಆಟೋ ಡ್ರೈವರ್ ವಿದೇಶಿ ದಂಪತಿಯನ್ನ ಆಟೋದಲ್ಲಿ ಕೂರಿಸಿಕೊಂಡು ಬೆಂಗಳೂರು ಸುತ್ತಿಸಿದ್ದಾನೆ.
ಹಿಂಗೇ ಖುಷಿ ಖುಷಿಯಾಗಿ ನಮ್ ರಾಜ್ಯಕ್ಕೆ ಕಾಲಿಟ್ಟಿರೋರು ಬಾಂಗ್ಲಾದೇಶ ಪ್ರಜೆಗಳು. ಮೆಜೆಸ್ಟಿಕ್‌ನಿಂದ ಬೆಂಗಳೂರು ಅರಮನೆ ಹೋಗಲು ಆಟೋ ಕೇಳ್ತಾರೆ. ಆವಾಗ ಎಂಟ್ರಿ ಕೊಡ್ತಾನೆ ನೋಡಿ ಈ ಅಸಾಮಿ. ವಿದೇಶಿಗಳು ಬರ್ತಿದ್ದಂತೆ ತನ್ನ ಆಟೋದಲ್ಲಿ ಕೂರಿಸಿಕೊಂಡು ಅರಮನೆ ತೋರಿಸೋಕೆ ಹೋಗ್ತಿದ್ದಾನೆ. ಆಮೇಲೆ ಗೊತ್ತಾಗಿದ್ದೆ ಆಟೋ ಚಾಲಕನ ಅಸಲಿ ಮುಖ!
ಬೆಂಗಳೂರು ಅರಮನೆ ಬರ್ತಿದ್ದಂತೆ ಆಟೋ ಇಳಿದ ವಿದೇಶಿ ಬ್ಲಾಗರ್ ಚಾಲಕನಿಗೆ ಎಷ್ಟು ಆಯ್ತು ಅಂತಾ ಕೇಳ್ತಾನೆ. 500 ರೂಪಾಯಿ ಅಂತಾ ಹೇಳ್ತಿದ್ದಂತೆ, ವಿದೇಶಿಗ 500 ರೂಪಾಯಿ ಕೊಡ್ತಾನೆ. ಆದ್ರೆ ಕಿಲಾಡಿ ಆಟೋ ಚಾಲಕ 500 ರೂಪಾಯಿಯನ್ನ ತೆಗೆದುಕೊಂಡು ಶರ್ಟ್ ತೋಳಿನಲ್ಲಿ ಇಡ್ತಾನೆ. ಕೈಯಲ್ಲಿ 100 ಇಡ್ಕೊಂಡು ಇದನ್ನೇ ಕೊಟ್ಟಿರೋದು ಅಂತಾ ಹೇಳಿ ಮತ್ತೆ ವಿದೇಶಿಗನಿಂದ 500 ಪೀಕ್ತಾನೆ.
ಎಲ್ಲಾ ಆಟೋ ಚಾಲಕರೂ ಕೆಟ್ಟವರಲ್ಲ..!
ಬೆಂಗಳೂರಿನಲ್ಲಿ ಎಲ್ಲಾ ಆಟೋ ಚಾಲಕರೂ ಹೀಗೇನೇ ಅಂತೇನಿಲ್ಲ. ಆದ್ರೆ ಆ ಒಬ್ಬ ಆಟೋ ಡ್ರೈವರ್‌ನನ್ನ ಅವಾಯ್ಡ್ ಮಾಡಿ ಅಂತಾ ಮೊಹಮ್ಮದ್ ಫಿಜ್ ಎಂಬ ಯೂಟ್ಯೂಬ್ ಅಕೌಂಟ್‌ನಲ್ಲಿ ಈ ವಿಡಿಯೋವನ್ನ ಪೋಸ್ಟ್ ಮಾಡಿದ್ದಾರೆ. ಉದ್ಯಾನನಗರಿ ಅಂತಾ ಫೇಮಸ್ ಆಗಿರೋ ರಾಜ್ಯ ರಾಜಧಾನಿ ಮರ್ಯಾದೆ ಇಂತಾ ಆಟೋ ಚಾಲಕನಿಂದ ವಿದೇಶದಲ್ಲಿ ಹರಜಾಗಿರೋದು ಬೇಸರದ ಸಂಗತಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ