newsfirstkannada.com

ಫ್ರೀ ಬಸ್​ ಎಫೆಕ್ಟ್​​​.. ಸರ್ಕಾರದ ವಿರುದ್ಧ ಬೀದಿಗಿಳಿದ ಆಟೋ ಚಾಲಕರು; ಬೇಡಿಕೆಗಳೇನು?

Share :

13-07-2023

    ಱಪಿಡೋ ಬೈಕ್, ಟ್ಯಾಕ್ಸಿಗಳನ್ನ ನಿಷೇಧ ಮಾಡಬೇಕು

    'ಶಕ್ತಿ'ಗೆ ನಾರಿಯರು, ಆಟೋ, ಟ್ಯಾಕ್ಸಿಗಳ ಸಂಚಾರ ಮಂಕು

    ಸರ್ಕಾರದ ವಿರುದ್ಧ ಆಟೋ ಚಾಲಕರ ಕೆಂಡಮಂಡಲ

‘ಶಕ್ತಿ’ ರಸ್ತೆಗಿಳಿದು ಒಂದು ತಿಂಗಳಾಗಿದೆ. ಮಹಿಳೆಯರಂತೂ ಉಚಿತ ಯೋಜನೆ ಅಡಿ ಬಸ್​ಗಳಲ್ಲಿ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಟ್ರಿಪ್ ಮೇಲೆ ಟ್ರಿಪ್​ ಹೋಗುತ್ತಾನೆ ಇದ್ದಾರೆ. ಇತ್ತ ಆಟೋ ಡ್ರೈವರ್​ಗಳನ್ನ ಮಾತಾಡಿಸೋರೆ ಇಲ್ಲದಂತಾಗಿದೆ. ಆಟೋ, ಟ್ಯಾಕ್ಸಿ ಹಾಗೂ ಕ್ಯಾಬ್​ಗಳನ್ನ ಕಂಡರೆ ಮುಖ ಮುರಿಯುತ್ತಿದ್ದಾರೆ. ಪರಿಣಾಮ ಆಟೋ ಚಾಲಕರು ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ.

‘ಶಕ್ತಿ’ಗೆ ಒಲಿದ ನಾರಿಯರು, ಆಟೋ, ಟ್ಯಾಕ್ಸಿಗಳ ಸಂಚಾರ ಮಂಕು

ಸರ್ಕಾರ ಬಜೆಟ್​ನಲ್ಲಿ ಆಟೋ ಚಾಲಕರಿಗೆ ಏನು ಅನುದಾನ ನೀಡದೇ ಅವರ ಕೆಂಗಣ್ಣಿಗೆ ಗುರಿಯಾಗಿದೆ. ಇದೀಗ ಸರ್ಕಾರದ ವಿರುದ್ಧ ಹೋರಾಟ ಮಾಡೋಕೆ ಆಟೋ ಚಾಲಕರು ಅಣಿಯಾಗಿದ್ದಾರೆ. ಸರ್ಕಾರ ವಿರುದ್ಧ ಏಕಕಾಲಕ್ಕೆ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಆಟೋ ಸಂಘಟನೆಗಳು ಕರೆ ಕೊಟ್ಟಿದ್ದಾರೆ. ಈ ಹೋರಾಟಕ್ಕೆ ಖಾಸಗಿ ಬಸ್ ಮಾಲೀಕರು, ಟ್ರಾನ್ಸ್‌ಪೋರ್ಟ್ ಅಸೋಸಿಯೇಶನ್, ಶಾಲಾ ವಾಹನ ಒಕ್ಕೂಟ ಕೂಡ ಸಾಥ್ ನೀಡಲಿದ್ದಾರೆ.

ಸರ್ಕಾರದ ವಿರುದ್ಧ ಚಾಲಕರ ಸಿಟ್ಟು, ಸ್ತಬ್ಧವಾಗುತ್ತಾ ಸಾರಿಗೆ ವ್ಯವಸ್ಥೆ?

ಹೌದು, ಸರ್ಕಾರಿ ಸಾರಿಗೆ ಹೊರತು ಪಡಿಸಿ ಉಳಿದೆಲ್ಲಾ ಸಾರಿಗೆ ವ್ಯವಸ್ಥೆ ಸಂಪೂರ್ಣ ಬಂದ್​ಗೆ ಕರೆ ಕೊಟ್ಟಿವೆ. ಆಟೋ ಸಂಘಟನೆಗಳು ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಸರ್ಕಾರಕ್ಕೆ ಏಳು ದಿನಗಳ ಡೆಡ್ ಲೈನ್ ಕೊಟ್ಟಿದ್ದಾರೆ. ಒಂದು ವೇಳೆ ಸರ್ಕಾರ ಸಮಸ್ಯೆ ಬಗೆಹರಿಸದೇ ಇದ್ದರೆ ಇದೇ ತಿಂಗಳ 28ಕ್ಕೆ ರಾಜ್ಯಾದ್ಯಂತ ಹೋರಾಟ ಮಾಡೋದು ಖಚಿತ ಎನ್ನುತ್ತಿದ್ದಾರೆ. ಈಗಾಗಲೇ ಅಕ್ರಮ ಱಪಿಡೋ ಬೈಕ್ ಹಾಗೂ ಟ್ಯಾಕ್ಸಿಗಳನ್ನ ನಿಷೇಧ ಮಾಡಬೇಕು. ಶಕ್ತಿ ಯೋಜನೆಯಿಂದ ಸಾಕಷ್ಟು ನಷ್ಟವಾಗುತ್ತಿರುವ ಹಿನ್ನಲೆ ಪ್ರತಿ ತಿಂಗಳು ಹತ್ತು ಸಾವಿರ ಪರಿಹಾರ ಹಣ ಘೋಷಣೆ ಮಾಡಬೇಕು.

ಅಸಂಘಟಿತ ವಾಣಿಜ್ಯ ಚಾಲಕರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು. ಚಾಲಕರ ಪುನಶ್ಚೇತನಕ್ಕೆ ಕಡಿಮೆ ಬಡ್ಡಿಯಲ್ಲಿ ಜಾತಿವಾರು ನಿಗಮದಿಂದ ನೇರ ಸಾಲ ಯೋಜನೆಯಲ್ಲಿ ಆಟೋ ಹಾಗೂ ಚಾಲಕರಿಗೆ ಸುಲಭ ಕಂತುಗಳಲ್ಲಿ 2 ಲಕ್ಷ ಸಾಲದ ಸೌಲಭ್ಯ ನೀಡಬೇಕು. ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ರ್ಯಾಪಿಡೋ ಓಲಾ, ಉಬರ್ ಕಂಪನಿ ಹೆಸರಿಗೆ ಬೃಹತ್ ನೊಂದಣಿ ಮಾಡ್ತಿರುವುದನ್ನ ನಿಲ್ಲಿಸಬೇಕು. ಇದುಷ್ಟು ಆಟೋ ಚಾಲಕರ ಬೇಡಿಕೆಯಾಗಿದೆ. ಒಟ್ಟಾರೆ, ಆಟೋ ಚಾಲಕರು ಸರ್ಕಾರಕ್ಕೆ ಡೆಡ್​ಲೈನ್​ ಏನೋ ಕೊಟ್ಟಿದ್ದಾರೆ. ಆದ್ರೆ, ಇದಕ್ಕೆ ಸರ್ಕಾರ ಹೇಗೆ ಸ್ಪಂದಿಸುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ರೀ ಬಸ್​ ಎಫೆಕ್ಟ್​​​.. ಸರ್ಕಾರದ ವಿರುದ್ಧ ಬೀದಿಗಿಳಿದ ಆಟೋ ಚಾಲಕರು; ಬೇಡಿಕೆಗಳೇನು?

https://newsfirstlive.com/wp-content/uploads/2023/07/aauto-1.jpg

Load More