ಆಲೂಗಡ್ಡೆ ಮೂಟೆಯೊಂದಿಗೆ ಮಕ್ಕಳನ್ನು ಕುರಿಸಿದ್ದ ಆಟೋ ಚಾಲಕ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಚಾಲಕನ ವಿಡಿಯೋ
ವಿಡಿಯೋ ನೋಡಿದ ನೆಟ್ಟಿಗರು ಆಟೋ ಚಾಲಕನ ವಿರುದ್ಧ ಫುಲ್ ಗರಂ
ಲಕ್ನೋ: ದುಡ್ಡು ಯಾರಿಗೆ ತಾನೇ ಬೇಡ ಹೇಳಿ? ಅದರಲ್ಲೂ ಕೂತಲಿ, ನಿಂತಲ್ಲಿ ಅಷ್ಟೇ ಯಾಕೆ ಮಲಗಿಕೊಂಡಲ್ಲಿ ಸಹ ದುಡ್ಡು ಮಾಡೋದು ಹೇಗೆ ಎಂಬುದು ಜನರು ಯೋಚನೆ ಮಾಡುತ್ತಾ ಇರುತ್ತಾರೆ. ಅದರಲ್ಲೂ ಮಧ್ಯಮ ವರ್ಗದ ಜನರಿಗಂತೂ ಹಣ ಮಾಡೋದು ತುಂಬಾ ಕಷ್ಟದ ಕೆಲಸ. ಅಂತಹ ಸಂಕಷ್ಟದ ಸಮಯದಲ್ಲಿ ದುಡ್ಡು ಮಾಡಲು ಹೋಗಿ ಇಲ್ಲೊಬ್ಬ ಆಟೋ ಚಾಲಕನೊಬ್ಬ ಪಜೀತಿಗೆ ಸಿಕ್ಕಿಹಾಕಿಕೊಂಡಿದ್ದಾನೆ.
ಹೌದು, ಹೆಚ್ಚಿನ ಬಾಡಿಗೆ ಹಣದ ಆಸೆಯಿಂದ ಚಾಲಕ ತನ್ನ ಆಟೋದಲ್ಲಿ ಆಲೂಗಡ್ಡೆ ಮೂಟೆಯೊಂದಿಗೆ ಶಾಲಾ ಮಕ್ಕಳನ್ನು ತುಂಬಿಕೊಂಡು ಹೋಗಿರೋ ಘಟನೆ ಕನೌಜ್ ಜಿಲ್ಲೆಯಲ್ಲಿ ನಡೆದಿದೆ. ಶಾಲೆಯೊಂದಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗುವ ಆಟೋವೊಂದರಲ್ಲಿ ಆಲೂಗಡ್ಡೆ ಮೂಟೆಯನ್ನು ತುಂಬಿಕೊಂಡಿದ್ದಾನೆ. ಅದರ ಮಧ್ಯದಲ್ಲಿ ಹಿಂದೆ ಮುಂದೆ ಮೂರು, ಮೂರು ಒಟ್ಟು ಆರು ಮಕ್ಕಳನ್ನು ತುಂಬಿಕೊಂಡು ಹೋಗುತ್ತಿದ್ದ.
“तुम कुछ भी कर लो, हम न सुधरेंगे”
तस्वीर कन्नौज ज़िले की है। देखिए….. किस तरह ये ऑटो चालक मासूम स्कूली बच्चों की जान को जोखिम में डाले हुए है। आलू की बोरियों के साथ ठूँसकर बिठाये बच्चों पर क्या बीत रही होगी, उसे ये बच्चे ही जान सकते हैं। pic.twitter.com/ZE8bWzj9Bj
— SANJAY TRIPATHI (@sanjayjourno) November 9, 2023
ಇದನ್ನು ನೋಡಿದ ವ್ಯಕ್ತಿಯೊಬ್ಬ ಚಾಲಕನಿಗೆ ಪ್ರಶ್ನೆ ಮಾಡಿದ್ದಾನೆ. ದುಡ್ಡಿನ ಆಸೆಗಾಗಿ ಹೀಗೆ ಮಾಡುತ್ತಿರಾ ಅಲ್ವಾ ನಿಮಗೆ ಏನೂ ಅನಿಸುವುದಿಲ್ಲವೇ ಎಂದಿದ್ದಾರೆ. ಮಕ್ಕಳಿಗೆ ಕುಳಿತುಕೊಳ್ಳಲು ಎಷ್ಟು ಕಷ್ಟ ಆಗುತ್ತಿದೆ ನೋಡಿ ಎಂದು ತರಾಟೆ ತೆಗೆದುಕೊಂಡಿದ್ದರು. ಅದಕ್ಕೆ ಚಾಲಕ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡಿಲ್ಲ. ಇನ್ನೂ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಆಟೋ ಚಾಲಕನ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ