newsfirstkannada.com

ಬೆಂಗಳೂರು ಪ್ರಯಾಣಿಕರೇ ಗಮನಿಸಿ.. ಆಟೋ, ಟ್ಯಾಕ್ಸಿ, ಕ್ಯಾಬ್, ಖಾಸಗಿ ಬಸ್ ಚಾಲಕರಿಂದ ಮುಷ್ಕರಕ್ಕೆ ಕರೆ

Share :

20-07-2023

    ಬೆಂಗಳೂರಲ್ಲಿ 24 ಗಂಟೆ ಆಟೋ, ಟ್ಯಾಕ್ಸಿ, ಖಾಸಗಿ ಬಸ್‌ ಮುಷ್ಕರ

    ‘ಫ್ರೀ’ ಶಕ್ತಿಯಿಂದ ಆಟೋ, ಟ್ಯಾಕ್ಸಿ ಚಾಲಕರ ಬದುಕು ಬರ್ಬಾದ್

    ಓಲಾ, ಉಬರ್‌ ಟ್ಯಾಕ್ಸಿ , ಖಾಸಗಿ ಬಸ್‌ಗಳ ಬಂದ್ ಯಾವಾಗ?

ಬೆಂಗಳೂರು: ರಾಜ್ಯ ಸರ್ಕಾರ ಸ್ತ್ರೀ ಶಕ್ತಿ ಯೋಜನೆ ಜಾರಿಗೆ ತಂದ ಮೇಲೆ ಸಾರಿಗೆ ಬಸ್‌ಗಳು ತುಂಬಿ ತುಳುಕುತ್ತಿವೆ. KSRTC ಬಸ್‌ಗಳಲ್ಲಿ ಸೀಟ್‌ ಸಿಗದೆ ಮಹಿಳೆಯರು ಕಿತ್ತಾಡಿಕೊಂಡ ಘಟನೆಗಳು ನಡೆದಿವೆ. ಈ ಫ್ರೀ ಶಕ್ತಿಯಿಂದಾಗಿ ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಚಾಲಕರು, ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಖಾಸಗಿ ಸಾರಿಗೆ ಸಂಚಾರ ಸಂಪೂರ್ಣ ನೆಲ ಕಚ್ಚಿ ಹೋಗಿದ್ದು, ಮಾಲೀಕರು ಮತ್ತು ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಆಟೋ, ಟ್ಯಾಕ್ಸಿ, ಖಾಸಗಿ ವಾಹನ ಚಾಲಕರು ಮತ್ತು ಮಾಲೀಕರು ರಾಜ್ಯ ಸರ್ಕಾರದ ವಿರುದ್ಧ ರೋಡಿಗಿಳಿಯಲು ನಿರ್ಧರಿಸಿದ್ದಾರೆ.

ಜುಲೈ 27 ರಂದು ಅಂದ್ರೆ ಮುಂದಿನ ಗುರುವಾರ ಬೆಂಗಳೂರು ನಗರದಲ್ಲಿ ಆಟೋ, ಓಲಾ, ಉಬರ್‌ ಟ್ಯಾಕ್ಸಿ ಹಾಗೂ ಖಾಸಗಿ ಬಸ್‌ಗಳ ಚಾಲಕರು, ಮಾಲೀಕರು ಮುಷ್ಕರ ಮಾಡಲು ನಿರ್ಧರಿಸಿದ್ದಾರೆ. ಜುಲೈ 26ರ ಮಧ್ಯರಾತ್ರಿ 12 ಗಂಟೆಯಿಂದ ಜುಲೈ 27ರ ಮಧ್ಯರಾತ್ರಿವರೆಗೂ ರಾಜಧಾನಿಯಲ್ಲಿ ಆಟೋ, ಓಲಾ ಉಬರ್, ಕ್ಯಾಬ್ ಹಾಗೂ ಖಾಸಗಿ ಬಸ್ ಸಂಚಾರ ಬಂದ್ ಆಗುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಸ್ತ್ರೀ ಶಕ್ತಿ ಯೋಜನೆ, ವೈಟ್ ಬೋರ್ಡ್ ವಾಹನವನ್ನು ಕಮರ್ಷಿಯಲ್ ವಾಹನವಾಗಿ ಬಳಸಿಕೊಳ್ಳುವುದು, ದ್ವಿಚಕ್ರ ವಾಹನಗಳಿಗೆ ಮುಕ್ತ ಪರವಾನಗಿ ಹೀಗೆ ಹಲವು ಯೋಜನೆಯಿಂದ ಖಾಸಗಿ ಸಾರಿಗೆ ಸಂಚಾರ ನಷ್ಟದಲ್ಲಿ ಸಿಲುಕಿದೆ. ಆಟೋ, ಟ್ಯಾಕ್ಸಿ ಚಾಲಕರಿಗೆ ಸಾಲ, ವಿಮೆ, ಮತ್ತು ಜೀವನ ಸಾಗಿಸಲು ಕಷ್ಟಕರವಾದ ಪರಿಸ್ಥಿತಿ ಎದುರಾಗಿದೆ.

ಜುಲೈ 27ರಂದು ಒಂದು ದಿನ ಸರ್ಕಾರದ ವಿರುದ್ಧ ಪ್ರತಿಭಟನೆ ಮತ್ತು ಬಂದ್ ಮಾಡಲು ರಾಜ್ಯದ 23 ಸಾರಿಗೆ ಸಂಘಟನೆಗಳು ನಿರ್ಧರಿಸಿವೆ. ಜುಲೈ 27 ರ ಬೆಳಗ್ಗೆ 11 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ಬೃಹತ್ ಱಲಿ ನಡೆಸಲಾಗುತ್ತಿದೆ. ಈ ಬೃಹತ್ ಱಲಿಯಲ್ಲಿ ಆಟೋ, ಕ್ಯಾಬ್, ಖಾಸಗಿ ಬಸ್ ಮಾಲೀಕರು ಸೇರಿದಂತೆ ಸಾವಿರಾರು ಚಾಲಕರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು ಪ್ರಯಾಣಿಕರೇ ಗಮನಿಸಿ.. ಆಟೋ, ಟ್ಯಾಕ್ಸಿ, ಕ್ಯಾಬ್, ಖಾಸಗಿ ಬಸ್ ಚಾಲಕರಿಂದ ಮುಷ್ಕರಕ್ಕೆ ಕರೆ

https://newsfirstlive.com/wp-content/uploads/2023/07/Auto-Taxi-Bundh.jpg

Load More