newsfirstkannada.com

ಕಾಂಗ್ರೆಸ್​ಗೆ ಬಂದ ಆಯನೂರು.. ‘ನಮ್ಮ ಪಕ್ಷ ಬಸ್ ಸೀಟ್ ತರಹ ಅಲ್ಲ’ ಎಂದು ನೇರವಾಗಿ ಟಾಂಟ್ ಕೊಟ್ಟ ಡಿ.ಕೆ.ಶಿವಕುಮಾರ್..!

Share :

24-08-2023

    ಜಿಲ್ಲಾ ‌ಮಟ್ಟದಲ್ಲಿ‌ ‘ಆಪರೇಷನ್ ಹಸ್ತ’ಕ್ಕೆ ಕರೆ ಕೊಟ್ಟ ಡಿ.ಕೆ.ಶಿವಕುಮಾರ್

    ನದಿ ನೀರು ಸಮುದ್ರ ಸೇರಲೇಬೇಕು, DKS ಪ್ರಕಾರ ‘ಸಮುದ್ರ’ ಅಂದರೆ..

    ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಧು ಬಂಗಾರಪ್ಪ ಕೂಡ ಭಾಗಿ

ಬೆಂಗಳೂರು: ಲೋಕಸಭೆ ಚುನಾವಣೆಯ ತಯಾರಿಯಲ್ಲಿರುವ ಕರ್ನಾಟಕ ಕಾಂಗ್ರೆಸ್​, ಇವತ್ತು ದೊಡ್ಡಮಟ್ಟದಲ್ಲಿ ‘ಆಪರೇಷನ್ ಹಸ್ತ’ ಮಾಡಿದೆ. ಶಿವಮೊಗ್ಗ ಜಿಲ್ಲೆಯ ಪ್ರಮುಖ ನಾಯಕರಾದ ಆಯನೂರು ಮಂಜುನಾಥ್ ಹಾಗೂ ನಾಗರಾಜ್ ಗೌಡ ಅವರನ್ನು ಪಕ್ಷಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬರಮಾಡಿಕೊಂಡರು.

ಮಧು ಬಂಗಾರಪ್ಪ ಭಾಗಿ

ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ಚಂದ್ರಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ, ರಾಜೇಗೌಡ, ಶಿವಮೊಗ್ಗ ಜಿಲ್ಲಾಧ್ಯಕ್ಷ ಸುಂದರೇಶ್ ಉಪಸ್ಥಿತಿ ಇದ್ದರು.

ಸಮುದ್ರ ಅಂದರೆ ಕಾಂಗ್ರೆಸ್ ಪಕ್ಷ

ಬಳಿಕ ಮಾತನಾಡಿರುವ ಡಿ‌.ಕೆ.ಶಿವಕುಮಾರ್.. ಕಾಂಗ್ರೆಸ್ ಪಕ್ಷ ಬಸ್ ಸೀಟ್ ತರಹ ಅಲ್ಲ. ಹತ್ತಿ ಇಳಿಯುವ ಕೆಲಸ ಮಾಡಬಾರದು. ಇದೊಂದು ಖಾಯಂ ಸೀಟ್. ಕಾಂಗ್ರೆಸ್ ಸದಸ್ಯತ್ವ ಪಡೆಯುವುದೇ ಸೌಭಾಗ್ಯದ ಕೆಲಸ. ಈಗಾಗಲೇ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಿದ್ದೇವೆ. ಇವುಗಳನ್ನು ಬಿಜೆಪಿ, ಜೆಡಿಎಸ್ ಯಾಕೆ ಕೊಡಲಿಲ್ಲ? ಬಿಜೆಪಿಗೆ ಒಂದೇ ಒಂದು ಕಾರ್ಯಕ್ರಮ ಕೊಡಲು ಆಗಲಿಲ್ಲ. ನದಿ ನೀರು ಸಮುದ್ರ ಸೇರಲೇಬೇಕು, ಸಮುದ್ರ ಅಂದರೆ ಕಾಂಗ್ರೆಸ್ ಪಕ್ಷ ಎಂದರು.

ನಾನು ಯಾರಿಗೂ ಟಿಕೆಟ್ ಭರವಸೆ ಕೊಟ್ಟಿಲ್ಲ. ಅವರ ಶಕ್ತಿ ಸಾಮರ್ಥ್ಯದ ಆಧಾರದ ಮೇಲೆ ನಿರ್ಧಾರ ಮಾಡ್ತೇವೆ. ಸಿಎಂ, ಹೈಕಮಾಂಡ್ ಇದಕ್ಕಾಗಿ ಇದ್ದು, ತೀರ್ಮಾನ ಮಾಡುತ್ತಾರೆ. ನಾವು ಆಯನೂರು ಮಂಜುನಾಥ್​ಗೂ ಟಿಕೆಟ್ ಭರವಸೆ ನೀಡಿಲ್ಲ. ನಾಗರಾಜ್ ಗೌಡಗೆ ವಿಧಾನಸಭೆ ಟಿಕೆಟ್ ನೀಡಲಾಗಲಿಲ್ಲ. ಕೊನೆ ಕ್ಷಣದಲ್ಲಿ ನಾಲ್ಕೈದು ಟಿಕೆಟ್ ಬದಲಾವಣೆ ಮಾಡಲು ಹೊರಟಿದ್ದೆ. ಕಾರಣಾಂತರಗಳಿಂದ ಬದಲಾವಣೆ ಮಾಡಲಾಗಲಿಲ್ಲ ಅಂತಾ ಹೇಳಿದರು.

ಜಿಲ್ಲಾ ‌ಮಟ್ಟದಲ್ಲಿ‌ ಸೇರ್ಪಡೆ ಮಾಡಿಕೊಳ್ಳಿ

ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಪಕ್ಷ ಸೇರಲು ಮುಂದೆ ಬರುತ್ತಾರೆ. ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು, ಜಿಲ್ಲಾ ‌ಮಟ್ಟದಲ್ಲಿ‌ ಸೇರ್ಪಡೆ ಮಾಡಿಕೊಳ್ಳಿ. ವಿವಾದಿತ ವ್ಯಕ್ತಿಗಳ ಬಗ್ಗೆ ನಮ್ಮ ಗಮನಕ್ಕೆ ತನ್ನಿ. ಉಳಿದಂತೆ ಯಾರೇ ಬಂದರೂ ಆಹ್ವಾನಿಸಿ. ವಿರೋಧ ಪಕ್ಚಗಳು ಏನೇ ಟೀಕೆ ಮಾಡಲಿ, ನಾವು ವೋಟ್ ಶೇರಿಂಗ್​ ಹೆಚ್ಚಿಸಿಕೊಳ್ಳಬೇಕಿದೆ. ಎಲ್ಲಾ ಜಿಲ್ಲಾಧ್ಯಕ್ಷರಿಗೆ ಸೂಚನೆ ನೀಡುತ್ತಿದ್ದೇನೆ ಎಂದರು.

ಜಿಲ್ಲಾಮಟ್ಟದಲ್ಲೂ ಶುರುವಾಗಲಿದೆ ಆಪರೇಷನ್ ಹಸ್ತ ಆಗಬೇಕಿದೆ ಎಂದು ಬಹಿರಂಗವಾಗಿಯೇ ಹೇಳಿದರು. ಜಿಲ್ಲಾ ಮಟ್ಟದ ನಾಯಕರಿಗೆ ತಮ್ಮ ಗಮನಕ್ಕೆ ತಂದು ಪಕ್ಷ ಸೇರ್ಪಡೆ ಮಾಡಿಕೊಳ್ಳಬೇಕು. ಯಾರಾದರೂ ವಿವಾದಿತ ವ್ಯಕ್ತಿಗಳು, ಹೆಚ್ಚೆಚ್ಚು ಷರತ್ತು ಹಾಕುವವರಿದ್ದರೆ ನಮ್ಮ ಗಮನಕ್ಕೆ ತನ್ನಿ. ಇಲ್ಲದೇ ಹೋದರೆ ಜಿಲ್ಲಾ ಮಟ್ಟದ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಿ. ಪಾಪ ಎಷ್ಟು ದಿನ ಎಂದು ಅವರೂ ಕೂಡ ಅಧಿಕಾರಕ್ಕಾಗಿ ಕಾಯಬೇಕು? ಎಂದು ಪ್ರಶ್ನೆ ಮಾಡಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್​ಗೆ ಬಂದ ಆಯನೂರು.. ‘ನಮ್ಮ ಪಕ್ಷ ಬಸ್ ಸೀಟ್ ತರಹ ಅಲ್ಲ’ ಎಂದು ನೇರವಾಗಿ ಟಾಂಟ್ ಕೊಟ್ಟ ಡಿ.ಕೆ.ಶಿವಕುಮಾರ್..!

https://newsfirstlive.com/wp-content/uploads/2023/08/DK-SHIVAKUMAR-8.jpg

Load More