newsfirstkannada.com

ರಾಜಕೀಯ ಅಸ್ತಿತ್ವದ ಹುಡುಕಾಟದಲ್ಲಿದ್ದ ಆಯನೂರುಗೆ ಸಿಕ್ಕಿದೆ ದೊಡ್ಡ ವೇದಿಕೆ; ಮಂಜುನಾಥ್ ಕಣ್ಣು ಯಾವ ಸ್ಥಾನದ ಮೇಲಿದೆ ಗೊತ್ತಾ?

Share :

25-08-2023

  ತೆನೆ ಇಳಿಸಿ ಕಾಂಗ್ರೆಸ್​​ ಪಡೆ ರಥ ಏರಿದ ಮಾಜಿ ಸಂಸದ

  ನಿಗದಿತ ಸೂತ್ರದ ಆಧಾರದ ಮೇಲೆ ಆಪರೇಷನ್ ಹಸ್ತ

  ಲೋಕಸಭೆ ಎಲೆಕ್ಷನ್​​ಗೆ ವೋಟ್​​ ಶೇರ್​ ಹೆಚ್ಚಿಸಲು ಪ್ಲಾನ್​!

ಮಲೆನಾಡಿನ ಹೆಬ್ಬಾಗಿಲಲ್ಲಿ ಕಾಂಗ್ರೆಸ್​​ ಬಲಿಷ್ಠ ಬೇಟೆ ಆಡಿದೆ. ಶಿವಮೊಗ್ಗದಲ್ಲಿ ಕಮಲ ಬದಲಿ ಹಸ್ತೋತ್ಸವ ಆಚರಿಸಲು ಡಿಕೆಶಿ ಸೆಡ್ಡು ಹೊಡೆದಿದ್ದಾರೆ. ಬಿಜೆಪಿ ಭದ್ರಕೋಟೆಯನ್ನ ಈ ಬಾರಿ ಛಿದ್ರ ಮಾಡಲು ಪಣ ತೊಟ್ಟಿರುವ ಕೆಪಿಸಿಸಿ ಸಾರಥಿ, ರಾಜಕೀಯ ಅಸ್ತಿತ್ವಕ್ಕಾಗಿ ಪರದಾಡ್ತಿದ್ದ ಆಯನೂರು ಮಂಜುನಾಥ್​ಗೆ ಗಾಳ ಹಾಕಿ ಪಕ್ಷಕ್ಕೆ ಸೆಳೆದಿದ್ದಾರೆ. ಈ ಮೂಲಕ ಆಪರೇಷನ್​ ಹಸ್ತವನ್ನ ರಾಜ್ಯಮಟ್ಟಕ್ಕೆ ವಿಸ್ತರಿಸುವ ಸುಳಿವು ನೀಡಿದ್ದಾರೆ.

‘ಹಸ್ತ’ ಲಾಘವ ಮಾಡಿದ ಆಯನೂರು ಕಮಲ‘ನಾಥ’!

ವಿಧಾನಸಭೆ ಟಿಕೆಟ್​​​​ ವಂಚಿತರಾಗಿ ತೆನೆ ಮುಡಿದಿದ್ದ ಮಾಜಿ ಕಮಲ ನಾಯಕ ಆಯನೂರು ಮಂಜುನಾಥ್​​, ಈಗ ಹಸ್ತದ ಗಾಳಕ್ಕೆ ಬಿದ್ದಿದ್ದಾರೆ. ವಿಧಾನಪರಿಷತ್​​​ ಮೇಲೆ ಆಯನೂರು ಕಣ್ಣಿಟ್ಟಿದ್ದಾರೆ ಎನ್ನಲಾಗ್ತಿದೆ. ಇತ್ತ, ಶಿಕಾರಿಪುರದಲ್ಲಿ ಮಾಜಿ ಸಿಎಂ ಪುತ್ರನಿಗೆ ಗೆಲುವಿಗಾಗಿ ತಿಣುಕುವಂತೆ ಮಾಡಿದ್ದ, ಪಕ್ಷೇತರವಾಗಿ ಸ್ಪರ್ಧಿಸಿದ್ದ ನಾಗರಾಜ್ ಗೌಡ ಕಾಂಗ್ರೆಸ್​​​ ಮರು ಪ್ರವೇಶ ಮಾಡಿದ್ದಾರೆ. ಕೆಪಿಸಿಸಿ ಕಚೇರಿ ಅಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಬ್ಬರನ್ನೂ ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಡಿಕೆಶಿ ಬರಮಾಡಿಕೊಂಡ್ರು.

ಜಿಲ್ಲಾಮಟ್ಟದಲ್ಲೂ ಶುರುವಾಗಲಿದ್ಯಾ ಆಪರೇಷನ್ ಹಸ್ತ?

ಕಾಂಗ್ರೆಸ್​ಗೆ ಘರ್ ವಾಪ್ಸಿ ಚರ್ಚೆ ನಡುವೆ, ಜಿಲ್ಲಾಮಟ್ಟದಲ್ಲೂ ಆಪರೇಷನ್ ಹಸ್ತಕ್ಕೆ ಡಿಕೆಶಿ ಕೈ ಹಾಕಿದ್ದಾರೆ. ವೋಟ್​ ಶೇರ್ ಹೆಚ್ಚಳಕ್ಕೆ ಬಹಿರಂಗವಾಗಿಯೇ ಕೆಪಿಸಿಸಿ ಕ್ಯಾಪ್ಟನ್​​​​ ಕರೆ ನೀಡಿದ್ದು, ಜಿಲ್ಲಾ ಮಟ್ಟದ ನಾಯಕರ ಗಮನಕ್ಕೆ ತಂದು ಪಕ್ಷ ಸೇರ್ಪಡೆ ಮಾಡಿ ಅಂತ ಹುಕುಂ ಜಾರಿ ಮಾಡಿದ್ದಾರೆ. ಆದ್ರೆ, ಯಾರಾದ್ರೂ ವಿವಾದಿತ ವ್ಯಕ್ತಿಗಳು, ಹೆಚ್ಚೆಚ್ಚು ಷರತ್ತು ಹಾಕಿದ್ರೆ ನಮ್ಮ ಗಮನಕ್ಕೆ ತನ್ನಿ ಅಂತ ಡಿಕೆಶಿ ಸಲಗದ ರೀತಿ ಸಲಹೆ ಕೊಟ್ಟಿದ್ದಾರೆ.

ನಿಗದಿತ ಸೂತ್ರದ ಆಧಾರದ ಮೇಲೆ ಆಪರೇಷನ್ ಹಸ್ತ ಮುಂದುವರೆಯುವ ಸುಳಿವು ಸಿಕ್ಕಿದೆ. ಎಲ್ಲಿ ಕಾಂಗ್ರೆಸ್ ಪ್ರಬಲವಾಗಿಲ್ಲವೋ ಅಲ್ಲಿ ಆಪರೇಷನ್ ನಡೆಯಲಿದೆ. ಆದ್ರೆ, ಪ್ರಬಲ ಅಭ್ಯರ್ಥಿಗಳು ಇರುವ ಕಡೆ ಅಪರೇಷನ್​​​ ಇಲ್ಲ ಅಂತ ಡಿಕೆಶಿ ಹೇಳಿದ್ದಾರೆ. ಅಲ್ಲದೆ, ಪಕ್ಷಕ್ಕೆ ಬರುವ ಯಾರಿಗೂ ಅಧಿಕಾರ ಭರವಸೆ ನೀಡಿಲ್ಲ.. ಇಲ್ಲಿ ಕೇವಲ ಓಟ್ ಶೇರ್ ಹೆಚ್ಚಳದ ಉದ್ದೇಶ ಮಾತ್ರ ಇದೆ.

ಸೋಮಶೇಖರ್​ಗೆ ಕಾಂಗ್ರೆಸ್​ನಿಂದ ಲೋಕಸಭೆ ಟಿಕೆಟ್​ ಆಫರ್​!?

ಆಪರೇಷನ್​ ಗೋಡೆ ಮೇಲೆ ನಿಂತಿದ್ದ ಯಶವಂತಪುರ ಶಾಸಕ ಸೋಮಶೇಖರ್​, ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್​, ಸದ್ಯಕ್ಕೆ ಕೆಳಕ್ಕೆ ಇಳಿದಿದ್ದಾರೆ..ಮಾಜಿ ಡಿಸಿಎಂ ಆರ್.ಅಶೋಕ್​ರನ್ನ ಭೇಟಿ ಮಾಡಿ ಕ್ಷೇತ್ರದಲ್ಲಿನ ಘಟನೆಗಳನ್ನ ವಿವರಿಸಿದ್ದಾರೆ. ಕೈಪಡೆ ಸೇರಿ ಭವಿಷ್ಯ ಹಾಳು ಮಾಡ್ಕೊಳ್ಳದಂತೆ ಹೇಳಿದ್ದಾಗಿ ಅಶೋಕ್​​ ತಿಳಿಸಿದ್ರು. ಅಲ್ಲದೆ, ಸೋಮಶೇಖರ್​​ಗೆ ಕಾಂಗ್ರೆಸ್​​ ಲೋಕಸಭೆ ಟಿಕೆಟ್​​ ಆಫರ್​​ ನೀಡಿತ್ತು ಅಂತ ರಿವೀಲ್​​ ಮಾಡಿದ್ರು. ಇನ್ನು, ಇಬ್ಬರೂ ನಾಯಕರು ಪಕ್ಷ ಬಿಡಲ್ಲ ಅಂತ ತಿಳಿಸಿದ್ದಾರೆ.

ಒಟ್ಟಾರೆ, ಲೋಕಸಭೆ ಚುನಾವಣೆಗೆ ಹೈಕಮಾಂಡ್​​ ಕೊಟ್ಟ ಗುರಿ ಮುಟ್ಟಲು ಡಿಕೆಶಿ, ಆಪರೇಷನ್​​ ರೇಸ್​​ಗೆ ಇಳಿದಿದ್ದಾರೆ. ಅಲ್ಲದೆ, ಕ್ಷೇತ್ರವಾರು ಪಕ್ಷದ ಶೇಕಡಾವಾರು ಮತ ಹೆಚ್ಚಿಸಿಕೊಳ್ಳಲು ಪಣ ತೊಟ್ಟಿದ್ದು, ಜಿಲ್ಲಾ ನಾಯಕರಿಗೆ ಫರ್ಮಾನು ಹೊರಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಆಪರೇಷನ್​ ಹಸ್ತ ರಣವೇಗ ಪಡೆಯೋದು ಖಚಿತವಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜಕೀಯ ಅಸ್ತಿತ್ವದ ಹುಡುಕಾಟದಲ್ಲಿದ್ದ ಆಯನೂರುಗೆ ಸಿಕ್ಕಿದೆ ದೊಡ್ಡ ವೇದಿಕೆ; ಮಂಜುನಾಥ್ ಕಣ್ಣು ಯಾವ ಸ್ಥಾನದ ಮೇಲಿದೆ ಗೊತ್ತಾ?

https://newsfirstlive.com/wp-content/uploads/2023/08/AYANURU.jpg

Load More