newsfirstkannada.com

ರಾಮಮಂದಿರ ಬ್ಲಾಸ್ಟ್ ಮಾಡೋದಾಗಿ ಉಗ್ರರು ಬೆದರಿಕೆ.. ಭಯೋತ್ಪಾದಕರ ಆಡಿಯೋದಲ್ಲಿ ಏನಿದೆ?

Share :

Published June 15, 2024 at 6:19am

  ಆಡಿಯೋದಲ್ಲಿ ಹಳೆಯ ಸ್ಟೋರಿಯೊಂದನ್ನು ಕೆದಕಿದ ಉಗ್ರರು

  ಭಯೋತ್ಪಾದಕರ ಬೆದರಿಕೆಯಿಂದ ಎಚ್ಚೆತ ಯೋಗಿ ಸರ್ಕಾರ

  ವಾಲ್ಮೀಕಿ ವಿಮಾನ ನಿಲ್ದಾಣಕ್ಕೂ ಬೆದರಿಕೆ ಹಾಕಲಾಗಿದೆಯಾ.?

ಲಕ್ನೋ: ಇತ್ತೀಚೆಗೆ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ನೂತನ ರಾಮಮಂದಿರವನ್ನು ಸ್ಫೋಟಿಸುವುದಾಗಿ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್‌ (JeM) ಸಂಘಟನೆ ಆಡಿಯೋ ಮೂಲಕ ಬೆದರಿಕೆ ಹಾಕಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆ ಮಂದಿರದ ಸುತ್ತ ಭದ್ರತೆಯನ್ನು ಇನ್ನಷ್ಟು ಬಿಗಿ ಬಂದೋಬಸ್ತ್​ ಮಾಡಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಕೊಹ್ಲಿಯ ಬ್ಯಾಟಿಂಗ್ ಸ್ಲಾಟ್ ಚೇಂಜ್ ಮಾಡಿ ತಮಾಷೆ ನೋಡ್ತಿದ್ದಾರಾ.. ವಿರಾಟ್​ ವೈಫಲ್ಯಕ್ಕೆ ಕಾರಣವೇನು?

ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್‌ ಸಂಘಟನೆ ರಾಮಮಂದಿರ ಸ್ಫೋಟಿಸುವುದಾಗಿ ಆಡಿಯೋ ಮೂಲಕ ಬೆದರಿಕೆ ಹಾಕಿದ್ದರಿಂದ ಸಿಎಂ ಯೋಗಿ ಸರ್ಕಾರ ಎಚ್ಚೆತ್ತುಕೊಂಡಿದೆ. ರಾಮಮಂದಿರ ಸುತ್ತ ಹೆಚ್ಚಿನ ಭದ್ರತೆ ನಿಯೋಜನೆ ಮಾಡಿ ಶಂಕಿತರ ಮೇಲೆ ನಿಗಾ ಇರಿಸಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತಾ ಪಡೆಗಳು ಹದ್ದಿನ ಕಣ್ಣು ನೆಟ್ಟಿವೆ. ರಾಮ ಮಂದಿರದ ಜೊತೆಗೆ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣದಲ್ಲೂ ಭದ್ರತಾ ವ್ಯವಸ್ಥೆ ಹೆಚ್ಚಿಸಲಾಗಿದೆ.

ಇದನ್ನೂ ಓದಿ: ‘ಕ್ರೂರತ್ವ, ಮೃಗಿಯ ಗುಣಗಳು ದರ್ಶನ್​ನಲ್ಲಿವೆ’.. ಶಿಕ್ಷೆ ಹೇಗಿರಬೇಕಂತ ಮಾಜಿ ಸಚಿವ ಹೇಳಿದ್ರು?

ಅಯೋಧ್ಯೆಯಲ್ಲಿ ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ. ಇದರಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯು ಸೇರಿದೆ. ರಾಮ ಮಂದಿರದ ಹೊರತಾಗಿ ಪ್ರಮುಖ ಸ್ಥಳಗಳಿಗೂ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಜೈಶ್-ಎ-ಮೊಹಮ್ಮದ್ ಸಂಘಟನೆಯ ಆಡಿಯೋದಲ್ಲಿ ರಾಮಮಂದಿರ-ಬಾಬರಿ ಮಸೀದಿ ವಿವಾದ ಇದ್ದಾಗ ನಮ್ಮವರನ್ನ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ. ಆದ್ದರಿಂದ ಮಂದಿರ ಸ್ಫೋಟಿಸಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಮೈಸೂರಲ್ಲಿ ದರ್ಶನ್ ಅರೆಸ್ಟ್ ಆಗಿದ್ದೆ ರೋಚಕ.. ಪೊಲೀಸರ ಕಾರ್ಯಕ್ಕೆ ನಟಿ ರಮ್ಯಾ ಮೆಚ್ಚುಗೆ

ಅಯೋಧ್ಯೆಯ ರಾಮಮಂದಿರಕ್ಕೆ ಜೆಇಎಂ ಬೆದರಿಕೆ ಒಡ್ಡುತ್ತಿರುವುದು ಇದೇ ಮೊದಲೇನೂ ಅಲ್ಲ. 2005 ಜುಲೈ 5 ರಂದು ಆಗಿನ ವಿವಾದಿತ ರಾಮ ಜನ್ಮಭೂಮಿ-ಬಾಬರಿ ಮಸೀದಿ ಸಂಕೀರ್ಣದ ಮೇಲೆ 5 ಭಯೋತ್ಪಾದಕರು ದಾಳಿ ಮಾಡಿದ್ದರು. ಆಗ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಕದನದಲ್ಲಿ ಎಲ್ಲ ಐವರು ಉಗ್ರರನ್ನ ಹೊಡೆದುರುಳಿಸಲಾಗಿತ್ತು. ಇದೇ ಸೇಡನ್ನು ಈಗ ತೀರಿಸಿಕೊಳ್ಳಲು ಜೈಶ್-ಎ-ಮೊಹಮ್ಮದ್ ಸಂಘಟನೆ ಮುಂದಾಗಿದೆ ಎಂದು ಹೇಲಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮಮಂದಿರ ಬ್ಲಾಸ್ಟ್ ಮಾಡೋದಾಗಿ ಉಗ್ರರು ಬೆದರಿಕೆ.. ಭಯೋತ್ಪಾದಕರ ಆಡಿಯೋದಲ್ಲಿ ಏನಿದೆ?

https://newsfirstlive.com/wp-content/uploads/2024/01/AYODHYA-4-1.jpg

Load More