newsfirstkannada.com

ಅಯೋಧ್ಯೆ ರಾಮಮಂದಿರಕ್ಕೆ ಬರ್ತಿದೆ ಉಗ್ರರಿಂದ ಬೆದರಿಕೆ; ಏಳು ಸುತ್ತಿನ ಭದ್ರಕೋಟೆ ನಿರ್ಮಿಸಲು ಪ್ಲಾನ್ ರೆಡಿ..!

Share :

20-08-2023

  ಯುಪಿ ಸರ್ಕಾರ, ರಾಮಜನ್ಮ ಭೂಮಿ ಟ್ರಸ್ಟ್‌ನಿಂದ ಪ್ಲಾನ್

  ರಕ್ಷಣಾ ಸಾಮಗ್ರಿ, ಗೆಜೆಟ್ಸ್ ಖರೀದಿ 31.41 ಕೋಟಿ ವೆಚ್ಚ

  ಸಿಸಿ ಕ್ಯಾಮೆರಾ, ಡ್ರೋಣ್ ಕ್ಯಾಮೆರಾಗಳ ಮಾನಿಟರಿಂಗ್

ರಾಮಮಂದಿರ ಲಕ್ಷಾಂತರ ರಾಮನ ಭಕ್ತರ ಬಹುದಿನಗಳ ಕನಸು. ಸೀತಾರಾಮ ಇದೀಗ ಅಯೋಧ್ಯೆಯಲ್ಲಿ ಶ್ರೀರಾಮನ ಬೃಹತ್ ಮಂದಿರ ನಿರ್ಮಾಣವಾಗುತ್ತಿದೆ. ಶ್ರೀರಾಮನ ದರ್ಶನ ಪಡೆಯೋ ಭಾಗ್ಯ ಕೆಲವೇ ದಿನಗಳಲ್ಲಿ ಸನ್ನಿಹಿತವಾಗಲಿದೆ. ಆದರೆ ಈ ಮಧ್ಯೆ ಶ್ರೀರಾಮನ ಮೇಲೆ ಆಗಾಗ ಉಗ್ರರ ಬೆದರಿಕೆಗಳು ಬರ್ತಾನೆ ಇವೆ.

ಹೀಗಾಗಿ ಶ್ರೀರಾಮನ ಮಂದಿರಕ್ಕೆ ಹೈಟೆಕ್ ಭದ್ರತೆ ನೀಡಲು ಪ್ಲಾನ್ ರೂಪಿಸಲಾಗಿದೆ. ಅಯೋಧ್ಯೆ ಕೋಟಿ ಕೋಟಿ ಹಿಂದೂಗಳ ಆರಾಧ್ಯ ದೈವ ಶ್ರೀರಾಮಚಂದ್ರನ ಪಾದಸ್ಪರ್ಶವಾದ ಪುಣ್ಯ ಭೂಮಿ. ಹಿಂದೂ ಧರ್ಮಕ್ಕೆ ಕಿರೀಟದಂತಿರೋ ಮರ್ಯಾದ ಪುರುಷ ಶ್ರೀರಾಮ ಆಡಿ ಬೆಳೆದಿರೋ ಭೂಮಿ. ಇದಕ್ಕೆ ಸಾಕ್ಷಿಯಾಗಿ ಉತ್ತರ ಪದೇಶದ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ತಲೆ ಎತ್ತುತ್ತಿದೆ. ಇದೀಗ ರಾಮ ಮಂದಿರದ ಮೇಲೆ ಉಗ್ರರ ಕರಿನೆರಳು ಬೀಳದಂತೆ ಸುಭದ್ರವಾದ ಸೆಕ್ಯೂರಿಟಿ ನೀಡಲು ಪ್ಲಾನ್ ಕಾರ್ಯಗತವಾಗುತ್ತಿದೆ.

ಅಯೋಧ್ಯೆಯ ರಾಮ ಮಂದಿರಕ್ಕೆ ಫುಲ್ ಹೈಟೆಕ್ ಭದ್ರತೆ
ಏಳು ಸುತ್ತಿನ ಭದ್ರಕೋಟೆ ನಿರ್ಮಿಸುವುದಕ್ಕೆ ಪ್ಲಾನ್ ರೆಡಿ

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಮೇಲೆ ಉಗ್ರರು ದಾಳಿ ನಡೆಸಲು ಸ್ಕೆಚ್ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಭಯೋತ್ಪಾದನಾ ದಾಳಿ ನಡೆಸುವ ಬೆದರಿಕೆ ಬಂದಿದೆ. ಹೀಗಾಗಿ ಅಯೋಧ್ಯೆಯ ರಾಮ ಮಂದಿರಕ್ಕೆ ಫುಲ್ ಹೈಟೆಕ್ ಭದ್ರತೆ ನೀಡಲಾಗಿದೆ. ಏಳು ಸುತ್ತಿನ ಭದ್ರಕೋಟೆ ನಿರ್ಮಿಸುವುದಕ್ಕೆ ಯುಪಿ ಸರ್ಕಾರ ಮತ್ತು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮುಂದಾಗಿದೆ. ಮೊದಲಿಗೆ ಜನ ದಟ್ಟಣೆಯ ನಿರ್ವಹಣೆ ಮಾಡುವುದಕ್ಕೆ ಪ್ಲಾನ್ ರೂಪಿಸಲಾಗಿದೆ. ಎಟಿಎಸ್‌ ಅಂದ್ರೆ ಭಯೋತ್ಪಾದನಾ ನಿಗ್ರಹ ಪಡೆ ನಿಯೋಜನೆ ಮಾಡಲಾಗುತ್ತದೆ. ಇದರ ಜೊತೆಗೆ ಭದ್ರತೆಗಾಗಿಯೇ ಸ್ಪೆಷಲ್ ಟಾಸ್ಕ್ ಫೋರ್ಸ್ ರಚನೆ ಮಾಡಲು ಚಿಂತನೆ ನಡೆದಿದೆ. ಅಯೋಧ್ಯೆಯಲ್ಲೇ ವಿಪತ್ತು ನಿರ್ವಹಣಾ ತಂಡ ನಿಯೋಜನೆ ಮಾಡಲಾಗುತ್ತದೆ.

ಇನ್ನೂ ರಕ್ಷಣಾ ಸಿಬ್ಬಂದಿಗೆ ಬುಲೆಟ್ ಫ್ರೂಫ್ ಜಾಕೆಟ್​ಗಳ ವ್ಯವಸ್ಥೆ, ಬುಲೆಟ್ ಪ್ರೂಫ್ ವಾಹನ, ಡ್ರ್ಯಾಗನ್ ಲೈಟ್ಸ್, ಬೈನಾಕ್ಯುಲರ್ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನೂ ಅಯೋಧ್ಯೆಯಲ್ಲಿ ವಾಹನಗಳ ನಂಬರ್ ಪ್ಲೇಟ್ ಗುರುತಿಸುವ ಹೈಟೆಕ್ ವ್ಯವಸ್ಥೆ ಅಳವಡಿಸಲು ಚಿಂತನೆ ನಡೆದಿದೆ. ಸಿಸಿ ಕ್ಯಾಮೆರಾ, ಡ್ರೋಣ್ ಕ್ಯಾಮೆರಾಗಳಿಂದ ಪ್ರತಿಯೊಂದು ಚಟುವಟಿಕೆಗಳ ಮಾನಿಟರಿಂಗ್, ಸುಪೀರಿಯರ್ ರೆಸಲ್ಯೂಷನ್ ಹೈ ಡೆಫಿಷನಿಷನ್ ಬುಲೆಟ್ ಕ್ಯಾಮೆರಾ, ಎಕ್ಸ್​ರೇ ಬ್ಯಾಗೇಜ್ ಸ್ಕ್ಯಾನರ್, ಮೆಟಲ್ ಡಿಟೆಕ್ಟರ್​ಗಳ ಅಳವಡಿಸಲಾಗುತ್ತಿದೆ.

ಸೈರನ್ ಸಹಿತ ಎಮರ್ಜೆನ್ಸಿ ಅಲಾರ್ಮ್ ವ್ಯವಸ್ಥೆಯ ಅಳವಡಿಸಲು ಪ್ಲಾನ್ ರೂಪಿಸಲಾಗಿದೆ. ಇನ್ನೂ ಸಿಸಿಕ್ಯಾಮೆರಾ ಅಳವಡಿಕೆಗೆ 10.97 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಌಕ್ಸೆಸ್ ಕಂಟ್ರೋಲ್ ಸಿಸ್ಟಮ್ ಆಳವಡಿಕೆಗೆ 8.56 ಕೋಟಿ ರೂಪಾಯಿ ವೆಚ್ಚವಾಗಲಿದೆ. ರಕ್ಷಣಾ ಸಾಮಗ್ರಿಗಳು, ಗೆಜೆಟ್ಸ್ ಖರೀದಿಗೆ ಒಟ್ಟಾರೆ 31.41 ಕೋಟಿ ರೂಪಾಯಿ ಖರ್ಚಾಗುವ ಲೆಕ್ಕಾಚಾರ ಹಾಕಲಾಗಿದೆ. ಒಟ್ಟಾರೆ, ಮುಂದಿನ ವರ್ಷ ಜನವರಿಯ ವೇಳೆಗೆ ರಾಮ ಮಂದಿರ ಭಕ್ತರ ದರ್ಶನಕ್ಕೆ ಮುಕ್ತವಾಗಲಿದೆ.. ಹೀಗಾಗಿ ದೇವಸ್ಥಾನ ಉದ್ಘಾಟನೆಯಾದ ಬಳಿಕ ಇದೆಲ್ಲಾ ಭದ್ರತೆ ಜಾರಿಗೆ ಬರಲಿದೆ. ಈ ಮೂಲಕ ಟೈಟ್ ಸೆಕ್ಯೂರಿಟಿ ಮೂಲಕ ಶ್ರೀರಾಮ ಮಂದಿರವನ್ನ ಭದ್ರವಾಗಿಸೋದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ಲಾನ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯೋಧ್ಯೆ ರಾಮಮಂದಿರಕ್ಕೆ ಬರ್ತಿದೆ ಉಗ್ರರಿಂದ ಬೆದರಿಕೆ; ಏಳು ಸುತ್ತಿನ ಭದ್ರಕೋಟೆ ನಿರ್ಮಿಸಲು ಪ್ಲಾನ್ ರೆಡಿ..!

https://newsfirstlive.com/wp-content/uploads/2023/08/ayodhaya-1.jpg

Load More