2023 ಅಕ್ಟೋಬರ್ನಲ್ಲಿ ನಿರ್ಮಾಣ ಕಾರ್ಯ ಪೂರ್ಣ
ಸುಮಾರು 1800-2000 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ
ದೀಪಾವಳಿಗೆ ಉದ್ಘಾಟನೆಗೊಂಡರೂ ಅಚ್ಚರಿ ಇಲ್ಲ
ಕೋಟಿ ಕೋಟಿ ರಾಮ ಭಕ್ತರಿಗೆ ಇದು ಶುಭ ಸುದ್ದಿ. ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣ ಆಗುತ್ತಿರುವ ರಾಮ ಮಂದಿರದ ಭವ್ಯ ದೇಗುಲದ ನಿರ್ಮಾಣ ಕೊನೆಯ ಹಂತಕ್ಕೆ ಬಂದು ತಲುಪಿದೆ. ಎಲ್ಲವೂ ಅಂದುಕೊಂಡತೆ ಆದರೆ ಅಕ್ಟೋಬರ್ ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದ್ದು, ದೀಪಾವಳಿಗೆ ರಾಮ ಭಕ್ತರು ಅದ್ದೂರಿಯಾಗಿ ಪಟಾಕಿ ಹೊಡೆಯಲಿದ್ದಾರೆ.
ಮೂರು ಅಂತಸ್ತು ಹೊಂದಿರುವ ಭವ್ಯ ರಾಮಮಂದಿರದ ನಿರ್ಮಾಣ ಕಾರ್ಯ ಅಂತಿಮಘಟ್ಟ ತಲುಪಿದೆ. ಈ ಹಿನ್ನೆಲೆಯಲ್ಲಿ ರಾಮ ಮಂದಿರ ನಿರ್ಮಾಣದ ಸಮಿತಿಯು ಉನ್ನತ ಮಟ್ಟದಲ್ಲಿ ಸಭೆ ನಡೆಸಿದೆ. ಈ ಸಭೆಯು ರಾಮಮಂದಿರ ನಿರ್ಮಾಣ ಸಮಿತಿಯ ನ್ರಿಪೇಂದ್ರ ಮಿಶ್ರಾ ನೇತೃತ್ವದಲ್ಲಿ ನಡೆದಿದೆ.
ಮಾಹಿತಿಗಳ ಪ್ರಕಾರ, ದಿನ ನಿತ್ಯದಂತೆ ರಾಮಮಂದಿರ ನಿರ್ಮಾಣದ ಕಾರ್ಯ ಭರದಿಂದ ಸಾಗಿದೆ. ಹಿರಿಯ ಅಧಿಕಾರಿಗಳು ಹೆಚ್ಚು ಮುತುವರ್ಜಿ ವಹಿಸಿ ಸ್ಥಳದಲ್ಲೇ ಬೀಡು ಬಿಟ್ಟು ಪರಿಶೀಲಿಸುತ್ತಿದ್ದಾರೆ. ದೇವರ ಗರ್ಭಗುಡಿಯ ಗೋಲ್ಡ್ ಫಿನಿಶ್ ಹೊಂದಿರಲಿದೆ.
ಈ ದೇಗುವು 392 ಪಿಲ್ಲರ್ಸ್, 43 ವುಡನ್ ಬಾಗಿಲುಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. ಮಂದಿರವು 380 ಫೀಟ್ ಉದ್ದ 250 ಫೀಟ್ ಅಗಲ ಹೊಂದಿದೆ. 161 ಫೀಟ್ ಎತ್ತರ ಹೊಂದಿರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ