newsfirstkannada.com

ವಾಚ್​, ಪಂಚೆ ಹಾಕ್ಕೊಂಡ್ರೆ ಸಮಾಜವಾದ ಎಂದು ಹೇಳಲು ಆಗಲ್ಲ; ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದ ಬಿ.ಕೆ ಹರಿಪ್ರಸಾದ್​

Share :

09-09-2023

  ನಾನು ಸಚಿವನಾಗಿದ್ರೆ ನಿಮ್ಮನ್ನೆಲ್ಲಾ ಭೇಟಿ ಮಾಡಲು ಆಗುತ್ತಿರಲಿಲ್ಲ

  ದೇವರಾಜ​ ಅರಸು​ ಕಾರಲ್ಲಿ ಕುಳಿತುಕೊಂಡ್ರೆ ನೀವು ದೇವರಾಜ​ ಅರಸು​ ಆಗೋದಿಲ್ಲ

  ಸಮುದಾಯದ ಯಾರೂ ನಾನು ಸಚಿವನಾಗ್ತೇನೆ ಅಂತಾ ಅಂದುಕೊಳ್ಳಬೇಡಿ

ನನ್ನನ್ನ ಮಂತ್ರಿ ಮಾಡದೆ ಇರುವುದಕ್ಕೆ ಸಿಎಂಗೆ ಧನ್ಯವಾದ ತಿಳಿಸುತ್ತೇನೆ, ನಾನು ಸಚಿವನಾಗಿದ್ರೆ ನಿಮ್ಮನ್ನೆಲ್ಲಾ ಭೇಟಿ ಮಾಡಲು ಆಗುತ್ತಿರಲಿಲ್ಲ ಅಂತಾ ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಬಿ.ಕೆ ಹರಿಪ್ರಸಾದ್ ಮತ್ತೊಮ್ಮೆ ಅಸಮಧಾನ ಹೊರಹಾಕಿದ್ದಾರೆ.

ಬೆಂಗಳೂರು ಅರಮನೆ ಮೈದಾನದಲ್ಲಿ ಈಡಿಗ, ಬಿಲ್ಲವ, ನಾಮಧಾರಿ, ದೀವರು ಮತ್ತು ಅತಿ ಹಿಂದುಳಿದ ವರ್ಗಗಳ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಈ ಸಭೆಗೆ ಆಗಮಿಸಿದ ಮಾತನಾಡಿದ ಬಿ.ಕೆ ಹರಿಪ್ರಸಾದ್, ಸಮುದಾಯದ ಯಾರೂ ನಾನು ಸಚಿವನಾಗ್ತೇನೆ ಅಂತಾ ಅಂದುಕೊಳ್ಳಬೇಡಿ. ವೋಟ್ ಹಾಕೋಕೆ ನೀವು. ಆದರೆ ರಾಜ್ಯಭಾರ ಮಾಡೋರು ಬೇರೆಯವರು ಅಂತಾ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಪ್ರಸಾದ್​ ಕಿಡಿಕಾರಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಬಿ.ಕೆ ಹರಿಪಸ್ರಾದ್ ಅವರು, ದೇವರಾಜ​ ಅರಸು​ ಕಾರಲ್ಲಿ ಕುಳಿತುಕೊಂಡ್ರೆ ನೀವು ದೇವರಾಜ​ ಅರಸು​ ಆಗೋದಿಲ್ಲ. ದೇವರಾಜ್​ ಅರಸ್​ ಚಿಂತೆ, ವಿಚಾರಗಳು ಅದನ್ನು ಅನುಷ್ಠಾನಕ್ಕೆ ತರುವಂತಹ ಕೆಲಸ ಆಗಬೇಕು. ನೀವೇನು ಮಾಡ್ತಾ ಇದ್ದೀರಾ ಅಂತ ಕೇಳ್ಬೋದು. ದೇವರಾಜ್​ ಅರಸು ಮೊಮ್ಮಗ ಇಲ್ಲೇ ಕುಳಿತ್ತಿದ್ದಾರೆ. ಸ್ಕ್ರೀನ್​ ಕಮಿಟಿನಲ್ಲಿ ನಾನು ನೇರವಾಗಿ ಹೇಳಿದೆ. ಯಾವುದೇ ಮೊಟ್ಟ ಮೊದಲ ಅವಕಾಶ ಸಿಕ್ಕಿದಾಗ ಸೂರಜ್​ ಅವರನ್ನು ಎಂಎಲ್​ಸಿ ಮಾಡಬೇಕು ಎಂದು. ಅದರಿಂದ ನನ್ನ ಜವಾಬ್ದಾರಿ ಮಾಡಿದ್ದೇನೆ. ಬೇರೆಯವರು ಮಾಡಿದ್ದಾರೋ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಬಳಿಕ ಮಾತನಾಡಿದ ಅವರು, ಜನಾರ್ಧನ ಪೂಜಾರಿಯವರು ಲೋನ್​ ಮಾಡುವಾಗ ಕೇವಲ ಈಡಿಗರಿಗೆ, ನಾಮಧಾರಿಗಳಿಗೆ ಮಾತ್ರ ಮಾಡಿರಲಿಲ್ಲ. ಬಿಲ್ಲವರಿಗೆ ಮಾತ್ರ ಮಾಡಿರಲಿಲ್ಲ. ಈ ರಾಷ್ಟ್ರದ ಖಜಾನೆ ಬಡವರದ್ದು, ಈ ಖಜಾನೆ ಇಟ್ಟಿರತಕ್ಕಂತಹ ಎಲ್ಲಾ ಬ್ಯಾಂಕ್​ನಲ್ಲೂ ಸಹ ಬಡವರಿಗೆ ಅವಕಾಶ ಕೊಡಬೇಕು ಎಂದು ಬ್ಯಾಂಕ್​ನ ಬಾಗಿಲು ತೆಗೆದವರು. ಯಾವತ್ತು ಜಾತಿ ರಾಜಕಾರಣ ಮಾಡಿದವರಲ್ಲ ಎಂದಿದ್ದಾರೆ.

ವಾಚ್​, ಪಂಚೆ ಹಾಕ್ಕೊಂಡು.. ಸಮಾಜವಾದ ಎಂದು ಹೇಳಲು ಆಗಲ್ಲ

ಬಡವರ ಬಂದು ಬಂಗಾರಪ್ಪ ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ. ಕಾಗೋಡು ತಿಮ್ಮಪ್ಪ ಅವರು ಸಮಾಜವಾದಿಯಾಗಿದ್ದರು, ಕಾಗೋಡು ಹೋರಾಟದಲ್ಲಿ ಮುಂಚೆನೇ ಇದ್ದವರು ಸಮಾಜವಾದಿಯಾಗಿದ್ರು, ಮಜವಾದಿ ಆಗಿರಲಿಲ್ಲ. ಇವತ್ತು ಸಹ ಸರಿಯಾದ ಕಾರು ಇಲ್ಲ ಅವರಲ್ಲಿ. ಯಾರೋ ಕೆಲವರು ವಾಚ್​ ಹಾಕ್ಕೊಂಡು, ಪಂಚೆ ಹಾಕ್ಕೊಂಡು, ಒಳಗಡೆ ಕಾಕಿ ಚಡ್ಡಿ ಹಾಕ್ಕೊಂಡು ಸಮಾಜವಾದ ಎಂದು ಹೇಳಲು ಆಗಲ್ಲ. ಸಮಾಜ ವಾದ ಅಂದ್ರೆ ಎಲ್ಲರಿಗೂ ಸಮಾನವಾದ ಹಕ್ಕು ಎಂದು ಹೇಳಬೇಕಾಗುತ್ತೆ ಎಂದು ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾಚ್​, ಪಂಚೆ ಹಾಕ್ಕೊಂಡ್ರೆ ಸಮಾಜವಾದ ಎಂದು ಹೇಳಲು ಆಗಲ್ಲ; ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದ ಬಿ.ಕೆ ಹರಿಪ್ರಸಾದ್​

https://newsfirstlive.com/wp-content/uploads/2023/09/Siddaramaiah.jpg

Load More