ಹೈಕಮಾಂಡ್ ನಾಯಕರ ಜೊತೆ ನಡೆಯಲಿದೆ ಮೈತ್ರಿ ಮಂಥನ!
ಜೆಡಿಎಸ್ ಜೊತೆ ಮೈತ್ರಿ ಕುರಿತು ಬೀಳುತ್ತಾ ಅಂತಿಮ ಮುದ್ರೆ?
ಪ್ರಧಾನಿ ಆಹ್ವಾನಕ್ಕೆ ಮಾಜಿ ಸಿಎಂ ಹೆಚ್ಡಿಕೆ ವೇಟಿಂಗ್
ರಾಜ್ಯದಲ್ಲಿ ಮೈತ್ರಿ ಪರ್ವ ಆರಂಭ ಆಗ್ತಿದೆ. ಜೆಡಿಎಸ್ ಜೊತೆಗಿನ ಮೈತ್ರಿ ಬಗ್ಗೆ ಇವತ್ತು ಅಧಿಕೃತ ತೀರ್ಮಾನ ಆಗುವ ಸಾಧ್ಯತೆ ಇದೆ. ಇವತ್ತು ದೆಹಲಿಯತ್ತ ಪ್ರಯಾಣ ಬೆಳೆಸಲಿರುವ ಯಡಿಯೂರಪ್ಪ, ವರಿಷ್ಠರ ಜೊತೆ ಚರ್ಚೆ ನಡೆಸಲಿದ್ದಾರೆ. ಇತ್ತ, ರಾಜ್ಯ ಸರ್ಕಾರ ವಿರುದ್ಧ ಹೋರಾಟಕ್ಕೆ ರೂಪುರೇಷೆ ಸಿದ್ದವಾಗ್ತಿದೆ. ದೆಹಲಿ ಪ್ರಯಾಣಕ್ಕೂ ಮುನ್ನವೇ ಬಿಜೆಪಿ ಪದಾಧಿಕಾರಿಗಳ ಸಭೆ ಕೂಡ ನಡೆದಿದೆ.
2024 ಇಡೀ ರಾಷ್ಟ್ರದ ದಿಕ್ಕುದೆಸೆಗಳನ್ನ ಬದಲಿಸುವ ವರ್ಷ. ಲೋಕಸಭೆ ಚುನಾವಣೆಗೆ ಏಳು ತಿಂಗಳು ಬಾಕಿ ಇರುವ ಹೊತ್ತಿಗೆ ರಾಜಕೀಯ ಪಕ್ಷಗಳು ಬತ್ತಳಿಕೆಯ ಅಸ್ತ್ರಗಳಿಗೆ ಸಾಣೆ ಹಿಡಿಯುತ್ತಿವೆ. ತಮ್ಮ ಸಾಂಪ್ರದಾಯಿಕ ಎದುರಾಳಿಗಳನ್ನ ಮತದ ಮೂಲಕ ಮಟ್ಟ ಹಾಕಲು ಮೈತ್ರಿ ಮಂತ್ರ ಪಠಿಸ್ತಿವೆ. ಹೀಗಾಗಿ ರಾಜ್ಯದಲ್ಲೂ ಕೂಡ ಲೋಕಸಭೆ ಚುನಾವಣೆಗೆ ಮೈತ್ರಿ ಮಂಥನ ಶುರುವಾಗಿ ಹೋಗಿದೆ.
ಹೆಚ್ಡಿಕೆ ದೆಹಲಿ ಭೇಟಿಗೂ ಮುನ್ನವೇ ಬಿಎಸ್ವೈಗೆ ಆಹ್ವಾನ!
ದಳದ ಜತೆ ಮೈತ್ರಿಗಾಗಿ ಬಿಜೆಪಿ ಹೈಕಮಾಂಡ್ ಆಸಕ್ತಿ ಹೊಂದಿದೆ. ಇತ್ತ ರಾಜ್ಯ ನಾಯಕರಲ್ಲೂ ಇದೇ ಅಭಿಪ್ರಾಯ ಇದೆ. ಕಳೆದ ಬಾರಿ ಎದ್ದ ಅಲೆಯಲ್ಲಿ ತೇಲಿದ್ದ ಬಿಜೆಪಿ, ಈ ಬಾರಿ ಆ ನಿರೀಕ್ಷೆಯಲ್ಲಿ ಇದ್ದಂತಿಲ್ಲ. ಹೀಗಾಗಿ ಜೆಡಿಎಸ್ ಜೊತೆಗೆ ಚುನಾವಣೆ ಪೂರ್ವ ಮೈತ್ರಿ ಮಾಡಿಕೊಳ್ಳಲು ಒಡಂಬಡಿಕೆ ಸಿದ್ಧಪಡಿಸ್ತಿದೆ. ಈ ಬೆನ್ನಲ್ಲೆ ರಾಜ್ಯ ಬಿಜೆಪಿ ಭೀಷ್ಮ, ಮಾಜಿ ಸಿಎಂ ಯಡಿಯೂರಪ್ಪ ರಾಷ್ಟ್ರ ರಾಜಧಾನಿ ದೆಹಲಿಗೆ ಹಾರಲು ಸಜ್ಜಾಗಿದ್ದಾರೆ.
ಇವತ್ತು ದೆಹಲಿಗೆ ತೆರಳಲಿದ್ದಾರೆ ಮಾಜಿ ಸಿಎಂ ಯಡಿಯೂರಪ್ಪ!
ಹೌದು, ಮಾಜಿ ಸಿಎಂ ಬಿಎಸ್‌ವೈ ಇವತ್ತು ದೆಹಲಿಗೆ ಹಾರ್ತಿದ್ದಾರೆ. ಮೈತ್ರಿ ಸಂಬಂಧ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಕೇಂದ್ರ ನಾಯಕತ್ವದ ಜೊತೆ ಸಮಾಲೋಚನೆಗೆ ಕೂರಲಿದ್ದಾರೆ. ಪಕ್ಷದ ಚುನಾವಣಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳ್ತಿರೋದಾಗಿ ಸ್ವತಃ ಯಡಿಯೂರಪ್ಪ ಹೇಳಿದ್ದಾರೆ. ಇವತ್ತು ಬೆಳಗ್ಗೆ 11:30ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನನಿಲ್ದಾಣದಿಂದ ಬಿಎಸ್‌ವೈ ದೆಹಲಿಗೆ ತೆರಳಲಿದ್ದಾರೆ. ಇನ್ನು ಸಂಜೆಯ ಸಭೆಯಲ್ಲಿ ಭಾಗಿಯಾಗಿ, ದೆಹಲಿಯ ಕರ್ನಾಟಕ ಭವನದಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಅಲ್ಲದೇ ಇಂದು ಕೇಂದ್ರ ಚುನಾವಣಾ ಮಂಡಳಿ ಹಾಗೂ ಸಂಸದೀಯ ಮಂಡಳಿಯ ಸಭೆ ನಿಗದಿಯಾಗಿದೆ. ಈ ಸಭೆಯಲ್ಲಿ ಬಿಎಸ್‌ವೈ ಮೈತ್ರಿ ಕುರಿತ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಗೊತ್ತಾಗಿದೆ.
ಮೈತ್ರಿ ಬಗ್ಗೆ ತಮ್ಮ ಅಭಿಪ್ರಾಯ ಹೇಳಲಿರುವ ಬಿಎಸ್‌ವೈ
ಮಾಜಿ ಸಿಎಂ ಹೆಚ್ಡಿಕೆ ಜೊತೆಗೆ ಫೈನಲ್ ಮೀಟಿಂಗ್ ಮುನ್ನವೇ ಬಿಎಸ್ವೈಗೆ ವರಿಷ್ಠರು ಆಹ್ವಾನ ನೀಡಿದ್ದಾರೆ.. ಲೋಕಸಭಾ ಕ್ಷೇತ್ರಗಳ ಚೌಕಾಸಿ ಬಗ್ಗೆ ಯಡಿಯೂರಪ್ಪರಿಂದ ಗ್ರೌಂಡ್ ಮಾಹಿತಿ ಪಡೆಯಲಿದ್ದಾರೆ. ಸದ್ಯ ರಾಜ್ಯ ರಾಜಕೀಯ ಪರಿಸ್ಥಿತಿ ಬಗ್ಗೆ ವರಿಷ್ಠರ ಜೊತೆ ಸಭೆಯಲ್ಲಿ ಚರ್ಚಿಸಲಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ತಮ್ಮ ಅಭಿಪ್ರಾಯಗಳನ್ನ ಹೇಳಲಿರುವ ಯಡಿಯೂರಪ್ಪ, ಎಷ್ಟು ಕ್ಷೇತ್ರಗಳನ್ನ ಜೆಡಿಎಸ್ಗೆ ಬಿಟ್ಟುಕೊಡಬೇಕು. ಯಾವ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ಅವಕಾಶಗಳಿವೆ ಅನ್ನೋ ಮಾಹಿತಿಯನ್ನ ವರಿಷ್ಠರಿಗೆ ತಲುಪಿಸಲಿದ್ದಾರೆ.
ಇನ್ನು, ದೆಹಲಿಗೆ ತೆರಳ್ತಿರುವ ಮಾಜಿ ಸಿಎಂ ಬಿಎಸ್‌ವೈ, ತಮ್ಮ ಭೇಟಿಯ ಮುಖ್ಯ ಅಜೆಂಡಾ ಮೈತ್ರಿ ವಿಚಾರವನ್ನೆ ಹೊಂದಿದಂತೆ ಕಾಣಿಸ್ತಿದೆ. ಇವತ್ತು ಪ್ರಧಾನಿ ಮೋದಿ, ಅಮಿತ್ ಶಾ, ನಡ್ಡಾ, ಬಿ.ಎಲ್ ಸಂತೋಷ್‌ರನ್ನ ಭೇಟಿ ಆಗ್ತಿರುವ ಯಡಿಯೂರಪ್ಪ, ಜೆಡಿಎಸ್ ಜೊತೆಗಿನ ಮೈತ್ರಿ ಬಗ್ಗೆ ಹೆಚ್ಚಾಗಿ ಮಾತನಾಡದೆ, ಅಂತಿಮ ತೀರ್ಮಾನ ಕೇಂದ್ರ ನಾಯಕರಿಗೆ ಬಿಟ್ಟಿದ್ದಾರೆ.
‘ದೆಹಲಿ ನಾಯಕರ ತೀರ್ಮಾನ’ ‘ದೆಹಲಿಗೆ ಪ್ರಯಾಣ’
ದೆಹಲಿ ಭೇಟಿಗೂ ಮುನ್ನ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಸಿದ ಬಿಎಸ್‌ವೈ, ಮುಂದಿನ ಹೋರಾಟದ ರೂಪರೇಷೆ ಸಿದ್ಧಪಡಿಸ್ತಿದ್ದಾರೆ.. ಗಣೇಶ ಚತುರ್ಥಿ ನಂತರ ರಾಜ್ಯ ಪ್ರವಾಸ ಕೈಗೊಳ್ತಿರುವ ಬಗ್ಗೆ ಘೋಷಣೆ ಮಾಡಿದ್ದಾರೆ..
ದೋಸ್ತಿ ಮಾತುಕತೆಗಾಗಿ ಕಾಯುತ್ತಿರುವ ಕುಮಾರಸ್ವಾಮಿ!
ಇತ್ತ, ಪ್ರಧಾನಿ ಮೋದಿ ಆಹ್ವಾನಕ್ಕಾಗಿ ಜೆಡಿಎಸ್ ಉಪ ವರಿಷ್ಠ ಕುಮಾರಸ್ವಾಮಿ ವೇಟ್ ಮಾಡ್ತಿದ್ದಾರೆ. ನಿನ್ನೆಯೇ ದೆಹಲಿಗೆ ತೆರಳಬೇಕಿದ್ದ ಹೆಚ್ಡಿಕೆ, ಬೆಂಗಳೂರಲ್ಲಿ ಉಳಿದಿದ್ದಾರೆ. ಈವರೆಗೂ ಪ್ರಧಾನಿ ಮೋದಿಯಿಂದ ಕರೆ ಬಂದಿಲ್ಲ. ಆಹ್ವಾನ ಬಂದ್ರೆ ಕೂಡಲೇ ದೆಹಲಿಗೆ ಪಯಣ ಬೆಳೆಸಲಿದ್ದಾರೆ.
ಒಟ್ಟಾರೆ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಯಡಿಯೂರಪ್ಪ ಕಳೆದ ವಾರ ಲೋಕಸಭೆ ಚುನಾವಣೆಗೆ ಜೆಡಿಎಸ್‌ನೊಂದಿಗೆ ತಮ್ಮ ಪಕ್ಷವು ಒಪ್ಪಂದ ಮಾಡಿಕೊಳ್ಳಲಿದೆ ಅಂತ ಹೇಳಿದ್ದರು. ನಾಲ್ಕು ಕ್ಷೇತ್ರಗಳಲ್ಲಿ ದಳ ಸ್ಪರ್ಧಿಸಲಿದೆ ಎಂಬ ಹೇಳಿಕೆ ಸಂಚಲನ ಸೃಷ್ಟಿಸಿತ್ತು. ಈಗ ತಮ್ಮ ಹೇಳಿಕೆ ಬಗ್ಗೆ ಮೌನವಾಗಿರುವ ಬಿಎಸ್‌ವೈ, ವರಿಷ್ಠರ ತೀರ್ಮಾನಕ್ಕೆ ಬಿಟ್ಟಿದ್ದಾರೆ. ಅಷ್ಟಕ್ಕೂ ಎಷ್ಟು ಕ್ಷೇತ್ರಗಳಲ್ಲಿ ಮೈತ್ರಿ ಆಗಲಿದೆ ಅನ್ನೋದು ಹೆಚ್ಡಿಕೆ ನಡೆಸುವ ಮೀಟಿಂಗ್ ಮೇಲೆ ನಿಂತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ