ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಕೂಗು
ಮತ್ತೆ ಪುಟಿದೇಳಲು ಕೇಸರಿಪಾಳಯ ಕಸರತ್ತು
ಬಿಎಸ್ವೈ ತೆರೆಮರೆಗೆ ಸರಿದ ಮೇಲೆ ಸೊರಗುತ್ತಿದೆ ಬಿಜೆಪಿ
ವಿಧಾನಸಭೆ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ಹೀನಾಯವಾಗಿ ಸೋತು ಸುಣ್ಣವಾಗಿದೆ. ಯಡಿಯೂರಪ್ಪ ತೆರೆಮರೆಗೆ ಸರಿದ ಮೇಲೆ ಸಮರ್ಥ ನಾಯಕತ್ವ ಇಲ್ಲದೇ ಸೊರಗುತ್ತಿದೆ. ರಾಜ್ಯಾಧ್ಯಕ್ಷರ ಬದಲಾವಣೆ ಸುದ್ದಿ ನಡುವೆ ಬಿಎಸ್ವೈ ಪುತ್ರ ವಿಜಯೇಂದ್ರಗೆ ಸ್ಥಾನ ನೀಡಬೇಕು ಅನ್ನೋ ಕೂಗು ಬಲವಾಗಿ ಕೇಳಿ ಬರ್ತಿದೆ.
ಬೂಕನಕೆರೆ ಯಡಿಯೂರಪ್ಪ ವಿಜಯೇಂದ್ರ 2020ರಿಂದ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸ್ತಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಪುತ್ರರಾಗಿರೋ ಬಿ.ವೈ.ವಿಜಯೇಂದ್ರ ಈ ಹಿಂದೆ ಬಿಜೆಪಿ ಯುವ ಮೋರ್ಚಾದ ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ವಕೀಲರಾಗಿ ವೃತ್ತಿ ಆರಂಭಿಸಿದ್ದ ವಿಜಯೇಂದ್ರ ಬಳಿಕ ರಾಜಕೀಯಕ್ಕೆ ಧುಮುಕಿದ್ದರು. ಪಕ್ಷ ಸಂಘಟನೆ, ಚುನಾವಣೆ ಗೆಲ್ಲುವ ಚಾಣಾಕ್ಷತನ, ಎಲ್ಲಾ ಸಮುದಾಯ ಸೆಳೆಯುವ ವ್ಯಕ್ತಿತ್ವ ಇರುವ ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕು ಎಂಬ ಒತ್ತಾಯ ಕೇಳಿಬರ್ತಿದೆ.
ಪಕ್ಷಕ್ಕೆ ಮೇಜರ್ ಸರ್ಜರಿ!
2022ರ ಆಗಸ್ಟ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ರಾಜ್ಯಾಧ್ಯಕ್ಷ ಅವಧಿ ಮುಗಿದಿತ್ತು. ಆದ್ರೆ ಚುನಾವಣೆ ದೃಷ್ಟಿಯಿಂದ ಅವರನ್ನೇ ಮುಂದುವರಿಸಲಾಗಿತ್ತು.. ಈ ನಡುವೆ ಪಕ್ಷ ಸಂಘಟನೆ ಮಾಡಲು ವಿಫಲರಾಗಿರುವ ಕಟೀಲ್ ಬದಲಾವಣೆ ಬಗ್ಗೆ ಮಾತು ಕೇಳಿ ಬಂದಿತ್ತು. ಮುಂದಿನ ವರ್ಷ ಲೋಕಸಭಾ ಚುನಾವಣೆ ಇದ್ದು 25 ಸ್ಥಾನಗಳನ್ನು ಉಳಿಸಿಕೊಳ್ಳಲು ಬಿಜೆಪಿ ಕಸರತ್ತು ನಡೆಸ್ತಿದೆ. ಹೀಗಾಗಿ ಪಕ್ಷವನ್ನು ಮುನ್ನಡೆಸುವ ಹಾಗೂ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಲ್ಲಬಲ್ಲ ಬೆಸ್ಟ್ ಕ್ಯಾಪ್ಟನ್ಗಾಗಿ ಹುಡುಕುತ್ತಿದೆ. ಮತ್ತೊಂದೆಡೆ ಮಾಜಿ ಸಿಎಂ ಯಡಿಯೂರಪ್ಪರನ್ನು ಸೈಡ್ಲೈನ್ ಮಾಡಿದ್ದೇ ಪಕ್ಷದ ಸೋಲಿಗೆ ಕಾರಣ ಎಂಬ ಮಾತುಗಳು ಕೇಳಿಬಂದಿವೆ. ಯಡಿಯೂರಪ್ಪ ಗರಡಿಯಲ್ಲಿ ಬೆಳೆದಿದ್ದ ಆಪ್ತ ವಲಯದ ನಾಯಕರು ಈ ಬಾರಿ ಹೀನಾಯವಾಗಿ ಸೋತಿದ್ದಾರೆ. ಬಿಎಸ್ವೈ ಮೇಲೆ ನಂಬಿಕೆ ಇಟ್ಟು ಸೋತ ನಾಯಕರು ಗಂಭೀರ ಚರ್ಚೆ ನಡೆಸ್ತಿದ್ದು ಮುಂದಿನ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಬಿಎಸ್ವೈ ಪುತ್ರ ವಿಜಯೇಂದ್ರಗೆ ಕೊಡಬೇಕು ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಕ್ಷದಲ್ಲಿ ಯುವಕರಿಗೆ ಆದ್ಯತೆ ಸಿಗಬೇಕು, ಹೀಗಾಗಿ ವಿಜಯೇಂದ್ರ ಹೆಸರು ಪ್ರಸ್ತಾವನೆಗೆ ಬಿಎಸ್ವೈ ಬಣ ಪ್ಲಾನ್ ಮಾಡಿದೆ ಎನ್ನಲಾಗ್ತಿದೆ.
ಬಿ.ವೈ.ವಿಜಯೇಂದ್ರಗೆ ಯಾಕೆ ರಾಜ್ಯಾಧ್ಯಕ್ಷ ಪಟ್ಟ ನೀಡಬೇಕು, ವಿಜಯೇಂದ್ರಗೆ ಈ ಸ್ಥಾನ ನೀಡೋದ್ರಿಂದ ಪಕ್ಷಕ್ಕೆ ಏನು ಲಾಭ ಆಗಲಿದೆ ಎಂಬ ಬಗ್ಗೆ ಬಿಎಸ್ವೈ ಬಣ ಚರ್ಚೆ ಮಾಡಿ ಅಭಿಪ್ರಾಯ ಮಂಡಿಸಿದೆ. ಪಕ್ಷದಲ್ಲಿ ಯುವಕರಿಗೆ ಆದ್ಯತೆ ನೀಡಬೇಕು ಅನ್ನೋದು ಯಡಿಯೂರಪ್ಪ ಆಪ್ತರ ಮಧ್ಯೆ ಚರ್ಚೆಯಾಗ್ತಿದೆ. ಬಿಎಸ್ವೈ ರೀತಿ ಪಕ್ಷ ಕಟ್ಟುವ ವರ್ಚಸ್ಸು ವಿಜಯೇಂದ್ರಗೆ ಇದೆ, ಬಿಜೆಪಿ ಪರ ಲಿಂಗಾಯತ ಹಾಗೂ ಇತರೆ ಸಮುದಾಯಗಳ ಜನಬೆಂಬಲ ಸಿಗಬಹುದು. ಈ ಬಾರಿ ಯಡಿಯೂರಪ್ಪ ನಾಯಕತ್ವ ಇಲ್ಲದೇ ಸೋತಿದ್ದೇವೆ, ಮುಂಬರುವ ಚುನಾವಣೆಯಲ್ಲಿ ಪಕ್ಷ ಕಟ್ಟುವ ಸಾಮರ್ಥ್ಯ ಇರುವ ನಾಯಕ ಬೇಕು, ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಹೋಗುವ ಶಕ್ತಿ ವಿಜಯೇಂದ್ರಗೆ ಇದೆ. ಬಿಎಸ್ವೈ ಕೈಬಿಟ್ಟರೂ ಪುತ್ರನಿಗೆ ಪಕ್ಷ ಅಧಿಕಾರ ಎಂಬ ಸಂದೇಶ ನೀಡಬೇಕು ಜೊತೆಗೆ ಸಿಎಂ ಸ್ಥಾನದಿಂದ ಯಡಿಯೂರಪ್ಪ ಕೆಳಗಿಳಿಸಿದ ಡ್ಯಾಮೇಜ್ ಕೂಡ ಕಂಟ್ರೋಲ್ ಮಾಡಬಹುದು ಅನ್ನೋ ಚರ್ಚೆ ನಡೆದಿದೆ ಎನ್ನಲಾಗಿದೆ.
ಒಂದ್ಕಡೆ ಯಡಿಯೂರಪ್ಪ ಸೈಡ್ಲೈನ್ ಆಗಿದ್ದಾರೆ. ಮತ್ತೊಂದೆಡೆ ನಮ್ಮ ಭವಿಷ್ಯ ಏನು ಅನ್ನೋ ಚಿಂತೆಯೂ ಬಿಎಸ್ವೈ ಆಪ್ತರಿಗೆ ಕಾಡುತ್ತಿದೆ. ಹೀಗಾಗಿ ಯಡಿಯೂರಪ್ಪ ಪುತ್ರರಾಗಿರೋ ವಿಜಯೇಂದ್ರಗೆ ಅಧ್ಯಕ್ಷ ಪಟ್ಟ ಸಿಕ್ಕಿದ್ರೆ ಮುಂದೆ ನಮಗೆ ಅನುಕೂಲ ಆಗಲಿದೆ. ಪಕ್ಷದಲ್ಲಿ ಸ್ಥಾನ ಸಿಗಲಿದೆ ಅನ್ನೋದು ಬಿಎಸ್ವೈ ಆಪ್ತರಲ್ಲಿ ಚರ್ಚೆಯಾಗಿದೆ, ಹೀಗಾಗಿ ವಿಜಯೇಂದ್ರಗೆ ಮಣೆ ಹಾಕಬೇಕು ಅಂತ ಒತ್ತಾಯಿಸ್ತಿದ್ದಾರೆ ಎನ್ನಲಾಗಿದೆ. ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿದ ದಿನದಿಂದಲೇ ಪಕ್ಷದಲ್ಲಿ ವಿಜಯೇಂದ್ರ ಸ್ಥಾನ ಗಟ್ಟಿ ಮಾಡಬೇಕು ಅಂತ ಒದ್ದಾಡಿದ್ದರು.
ಕೊನೆಗೂ ಅಪ್ಪನ ವರ್ಚಸ್ಸಿನ ಲಾಭ ಪಡೆದಿದ್ದ ವಿಜಯೇಂದ್ರ ಶಿಕಾರಿಪುರದಲ್ಲಿ ಟಿಕೆಟ್ ಪಡೆದು ಗೆದ್ದು ಶಾಸಕರೂ ಕೂಡ ಆಗಿದ್ದಾರೆ. ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ರೇಸ್ನಲ್ಲಿ ಮಾಜಿ ಡಿಸಿಎಂ ಆರ್.ಅಶೋಕ್, ಮಾಜಿ ಸಚಿವ ಅಶ್ವತ್ಥ್ ನಾರಾಯಣ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೂಡ ಇದ್ದಾರೆ. ಸಿ.ಟಿ.ರವಿ ಹೆಸರೇ ಹೈಕಮಾಂಡ್ ವಲಯದಲ್ಲಿ ಹೆಚ್ಚು ಓಡಾಡ್ತಿದೆ ಎನ್ನಲಾಗಿದೆ. ಅಂತಿಮವಾಗಿ ಯಾರಿಗೆ ಕ್ಯಾಪ್ಟನ್ ಪಟ್ಟ ಅನ್ನೋದನ್ನು ಹೈಕಮಾಂಡ್ ನಿರ್ಧರಿಸಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ