/newsfirstlive-kannada/media/post_attachments/wp-content/uploads/2024/11/max.jpg)
ಸ್ಯಾಂಡಲ್​ವುಡ್​ ಸ್ಟಾರ್​ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಡೆಯಿಂದ ಅಭಿಮಾನಿಗಳಿಗೆ ಗುಡ್​ನ್ಯೂಸ್​ವೊಂದು ಸಿಕ್ಕಿದೆ.​ ಮೊನ್ನೆಯಷ್ಟೇ ಮ್ಯಾಕ್ಸ್ ಸಿನಿಮಾ ತಂಡ ಚಿತ್ರತಂಡ ಪೋಸ್ಟರ್​ವೊಂದನ್ನು ಬಿಡುಗಡೆ ಮಾಡಿ ದೊಡ್ಡ ಅನೌನ್ಸ್‌ಮೆಂಟ್ ನೀಡುತ್ತೇವೆ ಅಂತ ಹೇಳಲಾಗಿತ್ತು. ಇದೀಗ ಮ್ಯಾಕ್ಸ್ ಸಿನಿಮಾ ರಿಲೀಸ್​ ಡೇಟ್​ ಅನ್ನು ಅನೌನ್ಸ್​ ಮಾಡಲಾಗಿದೆ.
/newsfirstlive-kannada/media/post_attachments/wp-content/uploads/2024/11/kiccha-sudeep1.jpg)
ಹೌದು, ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ಡಿಸೆಂಬರ್ 25ರಂದು ರಿಲೀಸ್​ ಆಗುತ್ತಿದೆ. ‘ವಿಕ್ರಾಂತ್ ರೋಣಾ’ ಸಿನಿಮಾದ ಬಳಿಕ ಸುದೀಪ್ ಅವರ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಹಾಗಾಗಿ ಅವರ ಅಭಿಮಾನಿಗಳಲ್ಲಿ ‘ಮ್ಯಾಕ್ಸ್’ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ.
/newsfirstlive-kannada/media/post_attachments/wp-content/uploads/2024/11/max2.jpg)
ಇನ್ನೂ, ಕಿಚ್ಚ ಸುದೀಪ್​ ಅಭಿನಯದ ಮ್ಯಾಕ್ಸ್ ಪಕ್ಕಾ ಮಾಸ್ ಆಕ್ಷನ್ ಸಿನಿಮಾ ಇದಾಗಿದೆ. ಈ ಸಿನಿಮಾವನ್ನು ವಿಜಯ್ ಕಾರ್ತಿಕೇಯ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ, ಕಲೈಪುಲಿ ಎಸ್ ಥಾನು, ವಿ ಕ್ರಿಯೇಷನ್ಸ್ ಬ್ಯಾನರ್ ಮತ್ತು ಕಿಚ್ಚ ಸುದೀಪ್ ಅವರ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.
ಈ ಸಿನಿಮಾದಲ್ಲಿ ಕಿಚ್ಚ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ ಸೇರಿ ಇನ್ನೂ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಕನ್ನಡದ ಮಾತ್ರವಲ್ಲದೇ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಮ್ಯಾಕ್ಸ್​ ಸಿನಿಮಾ ಆಗಲಿದೆ. ಅಲ್ಲದೇ ಬಾಲಿವುಡ್​ನ​ ಟಾಪ್​ B4U Motion Pictures ಹಕ್ಕುಗಳನ್ನು ಪಡೆದುಕೊಂಡಿದೆ. ಸದ್ಯ ಮುಂದಿನ ತಿಂಗಳು ಅಂದರೆ ಡಿಸೆಂಬರ್ 25ರಂದು ಮ್ಯಾಕ್ಸ್ ಸಿನಿಮಾ ರಿಲೀಸ್​ ಆಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us