/newsfirstlive-kannada/media/post_attachments/wp-content/uploads/2024/11/Actor-Subbaraju.jpg)
ಡಾರ್ಲಿಂಗ್ ಪ್ರಭಾಸ್ ನಟನೆಯ ಬಾಹುಬಲಿ ಸಿನಿಮಾದಲ್ಲಿ ನಟಿಸಿದ್ದ ಕುಮಾರ ವರ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತೆಲುಗಿನ ಖ್ಯಾತ ನಟ ಸುಬ್ಬರಾಜು ಅವರು ತಮ್ಮ 47ನೇ ವಯಸ್ಸಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪತ್ನಿಯೊಂದಿಗೆ ಮುದ್ದಾದ ಫೋಟೋವನ್ನು ನಟ ಸುಬ್ಬರಾಜು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:2025ರ ಜ.22ಕ್ಕೆ ರಾಮ ಮಂದಿರ ಪ್ರಾಣ ಪ್ರತಿಷ್ಠೆ ದಿನಾಚರಣೆ ಇಲ್ಲ; ಕಾರಣವೇನು?
/newsfirstlive-kannada/media/post_attachments/wp-content/uploads/2024/11/Actor-Subbaraju1.jpg)
ಹೌದು, ಕನ್ನಡದ ನಮ್ಮಣ್ಣ, ಗಜ, ಸತ್ಯ ಇನ್ ಲವ್, ಸಂಚಾರಿ, ರೋಗ್ ಸಿನಿಮಾಗಳಲ್ಲಿ ಸುಬ್ಬರಾಜು ನಟಿಸಿದ್ದಾರೆ. ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ನಾಯಕರಾಗಿರುವ ಬುಡ್ಡ ಹೋಗ ತೇರ ಬಾಪ್ ಎಂಬ ಸಿನಿಮಾದಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತೆಲುಗಿನ ನಟ ಸುಬ್ಬರಾಜು, ಕನ್ನಡ, ಹಿಂದಿ, ತಮಿಳು, ಮಲಯಾಳಂ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ವರ್ಷಕ್ಕೆ ಸರಿ ಸುಮಾರು 10 ರಿಂದ 12 ಸಿನಿಮಾಗಳಲ್ಲಿ ನಟಿಸುತ್ತಿದ್ದ ಸುಬ್ಬರಾಜು ಈಗ ತಮ್ಮ 47ನೇ ವಯಸ್ಸಿನಲ್ಲಿ ಮದುವೆ ಆಗಿದ್ದಾರೆ.
/newsfirstlive-kannada/media/post_attachments/wp-content/uploads/2024/11/Actor-Subbaraju2.jpg)
ಸದ್ಯ ಫೋಟೋವನ್ನು ನಟ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೋಗೆ ಕೊನೆಗೂ ಮದುವೆಯಾದೆ ಎಂಬ ಕ್ಯಾಪ್ಶನ್ ಹಾಕಿದ್ದಾರೆ. ಇನ್ನೂ ಸುಬ್ಬರಾಜು ಅವರು ಮದುವೆಯಾದ ಹುಡುಗಿ ಹೆಸರು ಶ್ರವಂತಿ. ಕಡಲತೀರದ ಬಳಿ ಮದುವೆಯ ಉಡುಪಿನಲ್ಲಿ ಫೋಟೋಗಳನ್ನು ಶೇರ್​ ಮಾಡಿ ಅಚ್ಚರಿ ಮೂಡಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/11/Actor-Subbaraju3.jpg)
ಭೀಮಾವರಂ ಮೂಲದ ಸುಬ್ಬರಾಜು ಪೆಣ್ಮೆತ್ಸ ಮೂಲತಃ ಸಾಫ್ಟ್‌ವೇರ್ ಇಂಜಿನಿಯರ್. ಅದೊಂದು ದಿನ ಕಂಪ್ಯೂಟರ್ ರಿಪೇರಿ ಕೆಲಸಕ್ಕಾಗಿ ನಿರ್ದೇಶಕ ಕೃಷ್ಣ ವಂಶಿ ಅವರ ಮನೆಗೆ ಹೋದ ಅವರು ನಟನಾಗುವ ಹಂತಕ್ಕೆ ಬಂದರು. ಇದಾದ ಬಳಿಕ 2003ರಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಹಲವಾರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಖಳನಾಯಕನ ಪಾತ್ರಗಳನ್ನು ನಿರ್ವಹಿಸಿದ್ದರೆ, ಇತ್ತೀಚಿನ ವರ್ಷಗಳಲ್ಲಿ, ಅವರು ಹಾಸ್ಯ ಪಾತ್ರಗಳೊಂದಿಗೆ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us