newsfirstkannada.com

ಜಗತ್ತಿನ ನಿದ್ದೆಗೆಡಿಸಿದ ಬಾಬಾ ವಂಗಾ ಭವಿಷ್ಯವಾಣಿ.. 2024ರ ಬಗ್ಗೆ ಇವ್ರು ಹೇಳಿದ್ದೇನು..?

Share :

08-11-2023

    2024ರ ಬಗ್ಗೆ ಬಾಬಾ ವಂಗಾ ಹೇಳಿರುವ ಮಾತುಗಳು ಆತಂಕಕ್ಕೆ ಕಾರಣವಾದ

    ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಅಕಾಲಿಕ ಮಳೆ ಜೊತೆಗೆ ಬಿರುಗಾಳಿ

    2024ರ ಬಾಬಾ ವಂಗಾ ಭವಿಷ್ಯ ತಿಳಿಯಬೇಕು ಎಂದರೆ ಇದನ್ನು ಪೂರ್ತಿ ಓದಿ

ಬಾಬಾ ವಂಗಾ ಈ ಹೆಸರು ಕೇಳಿದ್ರೆ ಸಾಕು ಭವಿಷ್ಯವಾಣಿಗಳು ನೆನಪಿಗೆ ಬರುತ್ತೆ. ಇನ್ನೇನು ಹೊಷ ವರ್ಷಕ್ಕೆ ಇನ್ನೊಂದೆ ತಿಂಗಳು ಬಾಕಿಯಿದೆ. ಅಷ್ಟರಲ್ಲೇ 2024ರ ಬಗ್ಗೆ ಬಾಬಾ ವಂಗಾ ನುಡಿದಿರುವ ಭವಿಷ್ಯವಾಣಿಗಳು ಜಗತ್ತಿನ ನಿದ್ದೆಗೆಡಿಸಿದೆ. ಅಷ್ಟಕ್ಕೂ 2024 ರಲ್ಲಿ ಏನೇನು ಅಗುತ್ತೆ? ಯಾರೆಲ್ಲ ಸಾಯ್ತಾರೆ? ಈ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.

ತಮ್ಮ ಭವಿಷ್ಯದಿಂದಲೇ ಹೆಸರುವಾಸಿಯಾಗಿರುವ ಬಲ್ಗೇರಿಯಾದ ಪ್ರವಾದಿ ಬಾಬಾ ವಂಗಾ 2024ರ ವರ್ಷ ಹೇಗಿರಲಿದೆ ಎನ್ನುವ ಬಗ್ಗೆ ಭಯಾನಕ ಭವಿಷ್ಯ ನುಡಿದಿದ್ದಾರೆ. 2024 ರಲ್ಲಿ ಏನೆಲ್ಲ ನಡೆಯುತ್ತೆ ಅನ್ನೋ ರೋಚಕ ವಿಚಾರಗಳ ಬಗ್ಗೆ ಬಾಬಾ ವಂಗಾ ಅವರ ಅನುಯಾಯಿಗಳು ಪಟ್ಟಿ ಬಿಡುಗಡೆ ಮಾಡಿದ್ದಾರೆ.

ಜಗತ್ತಿನ ನಿದ್ದೆಗೆಡಿಸಿದ ಬಾಬಾ ವಂಗಾ ಭವಿಷ್ಯವಾಣಿ

ಬಾಬಾ ವಂಗಾ 2022 ಮತ್ತು 2023 ರ ಕುರಿತ ನುಡಿದಿದ್ದ ಭವಿಷ್ಯವಾಣಿಗಳು ನಿಜವಾಗಿದ್ವು. ಹೀಗಾಗಿ 2024 ರ ಬಗ್ಗೆ ಬಾಬಾ ವಂಗಾ ಹೇಳಿರುವ ಮಾತುಗಳು ಆತಂಕಕ್ಕೆ ಕಾರಣವಾಗಿದೆ. 2024 ರ ಬಗ್ಗೆ ಬಾಬಾ ವಂಗಾ ನುಡಿದ ಭವಿಷ್ಯವೇನು? ಏನೆಲ್ಲ ಅನಾಹುತ ಸಂಭವಿಸುತ್ತೆ? ಅದಕ್ಕೂ ಮೊದಲು 2023ರ ಬಗ್ಗೆ ಬಾಬಾ ವಂಗಾ ಭವಿಷ್ಯವೇನಿತ್ತು?.

2023 ರ ಬಗ್ಗೆ ಬಾಬಾ ವಂಗಾ ಹೇಳಿದ್ದೇನು?

2023ರ ವರ್ಷದ ಕುರಿತಂತೆ ಬಾಬಾ ವಂಗಾ ಭಯಾನಕ ಭವಿಷ್ಯ ಹೇಳಿದ್ದರು. 2023ರ ವರ್ಷದಲ್ಲಿ ವಿಜ್ಞಾನಿಗಳು ಹಲವು ವಿಷಯಗಳನ್ನು ಕಂಡುಹಿಡಿಯುತ್ತಾರೆ ಎಂದು ಹೇಳಿದ್ದರು. ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಅಕಾಲಿಕ ಮಳೆ ಮತ್ತು ಬಿರುಗಾಳಿ ಬೀಸಲಿದೆ ಎಂದು ಹೇಳಿದ್ದರು. ಅಲ್ಲದೆ ಇದೇ ವರ್ಷ ಮೂರನೇ ಮಹಾಯುದ್ಧ ಸಂಭವಿಸುತ್ತದೆ ಎಂದು ಭವಿಷ್ಯ ನುಡಿಯುವ ಮೂಲಕ ಆತಂಕ ಮೂಡಿಸಿದ್ದರು. ಅದ್ರಂತೆ ಭಾರತ ಚಂದ್ರಯಾನ- 3 ರ ಮೂಲಕ ದಕ್ಷಿಣ ಧ್ರುವದಲ್ಲಿ ಹೊಸ ಸಾಧನೆ ಮಾಡಿದೆ. ಇದ್ರ ಜೊತೆ ಇಸ್ರೆಲ್ ಹಮಾಸ್​ ಯುದ್ಧದ ಭೀಕರತೆ ಇನ್ನೂ ಕಡಿಮೆಯಾಗಿಲ್ಲ.

ಇನ್ನು ಪ್ರಕೃತಿಗೆ ಸಂಬಂಧಿಸಿದಂತೆ ನೋಡಿದ್ರೆ, ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಬಿಸಿಲು ತೀವ್ರವಾಗಿ ಹಲವು ಜನ ಸಾವನ್ನಪ್ಪಿದ್ದರು. ಉತ್ತರಾಖಂಡ, ಹಿಮಾಚಲ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾದ ಕಾರಣ ನೂರಾರು ಜನ ಸಾವನ್ನಪ್ಪಿದ್ದರು. ಮನೆಗಳು, ಕಟ್ಟಡಗಳು ಕುಸಿದು ಸಾವಿರಾರು ಕೋಟಿ ರೂಪಾಯಿ ನಷ್ಟ ಕೂಡ ಉಂಟಾಗಿತ್ತು. ಹೀಗಾಗಿ ಇದೀಗ 2024ರ ಬಗ್ಗೆ ಬಾಬಾ ವಂಗಾ ನುಡಿದ ಭವಿಷ್ಯವಾಣಿ ಭೀತಿ ಹುಟ್ಟಿಸಿದೆ.

2024ರ ಬಾಬಾ ವಂಗಾ ಭವಿಷ್ಯ?

  • ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಹತ್ಯೆಗೆ ಕೆಲ ರಷ್ಯಾ ಪ್ರಜೆಗಳಿಂದ ಯತ್ನ
  • ಯುರೋಪ್ ಸೇರಿದಂತೆ ದೊಡ್ಡ ದೇಶಗಳಲ್ಲಿ ಭಯೋತ್ಪಾದಕ ದಾಳಿ
  • 2024ರಲ್ಲಿ ಜಾಗತಿಕವಾಗಿ ಆರ್ಥಿಕ ಸಂಕಷ್ಟ. ಸಾಲದ ಪ್ರಮಾಣ ಏರಿಕೆ ಆಗಲಿದೆ
  • ಸಾಕಷ್ಟು ಪ್ರಾಕೃತಿಕ ದುರಂತಗಳು ಸಂಭವಿಸುವ ಸಾಧ್ಯತೆ ಹವಾಮಾನ ವೈಪರಿತ್ಯ ಎದುರಾಗಲಿದೆ
  • ಸೈಬರ್ ಕ್ರೈಂ ಪ್ರಮಾಣದ ಹೆಚ್ಚಳ ಆಗಲಿದೆ. ಹ್ಯಾಕರ್‌ಗಳಿಂದ ಸೈಬರ್ ದಾಳಿ ನಡೆಯಲಿದೆ. ವಿದ್ಯುತ್ ಗ್ರಿಡ್‌ಗಳು, ಜಲ ಸಂಸ್ಕರಣಾ ಘಟಕಗಳು ಹಾಗೂ ರಾಷ್ಟ್ರೀಯ ಭದ್ರತೆಗೆ ಧಕ್ಕೆ
  • ಕ್ಯಾನ್ಸರ್, ಅಲ್ಜೈಮರ್ ಸೇರಿದಂತೆ ಹಲವು ರೋಗಗಳಿಗೆ ಹೊಸ ಚಿಕಿತ್ಸೆ ಸಿಗಲಿದೆ
  • ಕ್ವಾಂಟಂ ಕಂಪ್ಯೂಟರ್‌ನಲ್ಲೂ ಹೊಸ ಸಂಶೋಧನೆಗಳು ನಡೆಯಲಿವೆ
  • ಪ್ರಪಂಚದ ಹಲವು ಭಾಗಗಳಲ್ಲಿ ದೊಡ್ಡ ಪ್ರವಾಹಗಳು ಸಂಭವಿಸಲಿವೆ
  • ಚೀನಾದಿಂದ ಮತ್ತಷ್ಟು ಸಂಕಷ್ಟಗಳು ಎದುರಾಗಲಿವೆ
  • ಚೀನಾ ಜತೆ ನೌಕಾ ಸಮರ ನಡೆಯಲಿದೆ. ಹಿಂದೂ ಮಹಾಸಾಗರದಲ್ಲಿ ಕೆಂಪು ಎದುರಾಳಿ ಭಯ ಹುಟ್ಟಿಸಲಿದೆ.
ಬಾಬಾ ವಂಗಾ ಮತ್ತು ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್

ಬಾಬಾ ವಂಗಾ ಭಯಾನಕ ವಿಚಾರಗಳನ್ನ ಭವಿಷ್ಯವಾಣಿಯಲ್ಲಿ ನುಡಿದಿದ್ದು, ಭವಿಷ್ಯ ವಾಣಿ ಹೊರ ಬೀಳ್ತಿದ್ದಂತೆ ಘಟಾನುಘಟಿಗಳು ಸೇರಿದಂತೆ ಜಗತ್ತಿನ ಅನೇಕ ನಾಯಕರ ನಿದ್ದಿಗೆಡಿಸಿದೆ. 2023ರಲ್ಲಿ ಬಾಬಾ ಹೇಳಿದ ಕೆಲ ಮಾತುಗಳು ನಿಜವಾಗಿದ್ದು, 2024 ರ ಬಗ್ಗೆ ಕೆಲ ಆತಂಕಕಾರಿ ವಿಚಾರದ ಬಗ್ಗೆ ಭವಿಷ್ಯ ನುಡಿದಿರೋದು ಸದ್ಯ ಜನರಲ್ಲಿ ಭೀತಿ ಹುಟ್ಟಿಸಿರೋದಂತು ಸುಳ್ಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಗತ್ತಿನ ನಿದ್ದೆಗೆಡಿಸಿದ ಬಾಬಾ ವಂಗಾ ಭವಿಷ್ಯವಾಣಿ.. 2024ರ ಬಗ್ಗೆ ಇವ್ರು ಹೇಳಿದ್ದೇನು..?

https://newsfirstlive.com/wp-content/uploads/2023/11/BABA_VANGA_1.jpg

Load More