ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ದಾಖಲೆ ನಿರ್ಮಿಸಿದ ಪಾಕಿಸ್ತಾನ ತಂಡದ ಕ್ಯಾಪ್ಟನ್
ಟೀಂ ಇಂಡಿಯಾದ ಕೊಹ್ಲಿ, ಆಸ್ಟ್ರೇಲಿಯಾದ ಸ್ಮಿತ್ ದಾಖಲೆ ಮುರಿದ ಬಾಬರ್
ಟೆಸ್ಟ್ ಕ್ರಿಕೆಟ್ ಮಾದರಿಯಲ್ಲೀಗ ಪಾಕಿಸ್ತಾನದ ಕ್ಯಾಪ್ಟನ್ ನಂಬರ್ 1 ಬ್ಯಾಟರ್
ಟೆಸ್ಟ್ ಕ್ರಿಕೆಟ್ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಕ್ಯಾಪ್ಟನ್ ಬಾಬರ್ ಅಜಂ ಹೊಸ ದಾಖಲೆಯೊಂದು ಬರೆದಿದ್ದಾರೆ. ಈ ಮೂಲಕ ಟೀಂ ಇಂಡಿಯಾದ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾದ ಅನುಭವಿ ಆಟಗಾರ ಸ್ಟೀವ್ ಸ್ಮಿತ್ ದಾಖಲೆ ಮುರಿದು ಮೊದಲ ಸ್ಥಾನ ಆಕ್ರಮಿಸಿಕೊಂಡಿದ್ದಾರೆ.
ಬಾಬರ್ ಅಜಂ ತಮ್ಮ ಕೊನೆಯ 20 ಇನ್ನಿಂಗ್ಸ್‌ಗಳಲ್ಲಿ 69.10 ಸರಾಸರಿ ಬ್ಯಾಟಿಂಗ್ ಹೊಂದುವ ಮೂಲಕ ವಿಶ್ವದ ಪ್ರಮುಖ ಆಟಗಾರರನ್ನೇ ಹಿಂದಿಕ್ಕಿದ್ದಾರೆ. ಇದೇ ವೇಳೆ 20 ಇನ್ನಿಂಗ್ಸ್‌ಗಳಲ್ಲಿ ಬಾಬರ್ ಅಜಂ ನಾಲ್ಕು ಶತಕ ಮತ್ತು 8 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದರೊಂದಿಗೆ ಬಾಬರ್ ಮೊದಲ ಸ್ಥಾನದಲ್ಲಿದ್ದಾರೆ.
ಇನ್ನು, ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ಸ್ಟೀವ್ ಸ್ಮಿತ್ ಕಳೆದ 30 ಇನ್ನಿಂಗ್ಸ್‌ಗಳಲ್ಲಿ 55.40 ಸರಾಸರಿ ಬ್ಯಾಟಿಂಗ್‌ನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಜತೆಗೆ ನಾಲ್ಕು ಶತಕ ಮತ್ತು 6 ಅರ್ಧಶತಕಗಳನ್ನು ಸಿಡಿಸಿದ್ದಾರೆ. 3ನೇ ಸ್ಥಾನದಲ್ಲಿ ಜೋ ರೂಟ್, 4ನೇ ಸ್ಥಾನದಲ್ಲಿ ಶ್ರೀಲಂಕಾದ ಅನುಭವಿ ಬ್ಯಾಟರ್ ಏಂಜೆಲೊ ಮ್ಯಾಥ್ಯೂಸ್ ಇದ್ದಾರೆ.
ಐದನೇ ಸ್ಥಾನದಲ್ಲಿ ಕೊಹ್ಲಿ..!
ಐದನೇ ಸ್ಥಾನದಲ್ಲಿ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಇದ್ದಾರೆ. ತನ್ನ ಕೊನೇ 27 ಇನ್ನಿಂಗ್ಸ್‌ಗಳಲ್ಲಿ 34.65ರ ಸರಾಸರಿ ಬ್ಯಾಟಿಂಗ್ ಹೊಂದಿದ್ದಾರೆ. ಕೊಹ್ಲಿ ಬ್ಯಾಟ್ನಿಂದ ಒಂದು ಶತಕ ಮತ್ತು 3 ಅರ್ಧಶತಕಗಳು ಬಂದಿವೆ. ಕಳಪೆ ಪ್ರದರ್ಶನ ನೀಡಿಯೂ ಕೊಹ್ಲಿ ಟಾಪ್ 5ರಲ್ಲಿ ಇರೋದು ಗಮನಾರ್ಹ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ