newsfirstkannada.com

ವಿಶ್ವಕಪ್​​ ಸೋಲಿಗೆ ಕೊನೆಗೂ ತಲೆದಂಡ.. ಕ್ಯಾಪ್ಟನ್ಸಿ ಸ್ಥಾನದಿಂದ ಕೆಳಗಿಳಿದ ಪಾಕಿಸ್ತಾನದ ಬಾಬರ್ ಅಜಂ..!

Share :

16-11-2023

    ವಿಶ್ವಕಪ್​​ನಲ್ಲಿ ಪಾಕಿಸ್ತಾನ ತಂಡ ಕಳಪೆ ಪ್ರದರ್ಶನ

    9 ಪಂದ್ಯಗಳಲ್ಲಿ ಐದರಲ್ಲಿ ಸೋತಿರುವ ಪಾಕಿಸ್ತಾನ ತಂಡ

    ಸೆಮಿಫೈನಲ್ ಪ್ರವೇಶಿಸುವಲ್ಲಿ ವಿಫಲ, ಭಾರೀ ಆಕ್ರೋಶ

ವಿಶ್ವಕಪ್​​ ಸೋಲಿನ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ನಾಯಕತ್ವ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ. ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ ಕ್ಯಾಪ್ಟನ್ಸಿಗೆ ಅವರು ಗುಡ್​ಬೈ ಹೇಳಿದ್ದಾರೆ.

ವಿಶ್ವಕಪ್ ಸೋಲಿನ ಬೆನ್ನಲ್ಲೇ ಭಾರತದಿಂದ ತಂಡ ಪಾಕ್​ಗೆ ತೆರಳಿತ್ತು. ಈ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಬೋರ್ಡ್​ ಮಹತ್ವದ ಸಭೆ ನಡೆಸಿತ್ತು. ಸಭೆ ನಂತರ ಬಾಬರಂ ಅಜಂ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದಾರೆ.

ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಆದರೆ ಪಾಕಿಸ್ತಾನದ ಪರವಾಗಿ ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡಲಿದ್ದೇನೆ ಎಂದು ಬಾಬರ್ ಅಜಂ ತಿಳಿಸಿದ್ದಾರೆ. ಇವತ್ತು ನಾನು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕತ್ವ ಸ್ಥಾನದಿಂದ ಕೆಳಗೆ ಇಳಿಯುತ್ತಿದ್ದೇನೆ. ತುಂಬಾ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇನೆ. ಅಲ್ಲದೇ ಅದಕ್ಕೆ ಇದು ಸರಿಯಾದ ಸಮಯ ಎಂದು ಭಾವಿಸಿದ್ದೇನೆ. ಜೊತೆಗೆ ಪಾಕಿಸ್ತಾನ ಪರ ಕ್ರಿಕೆಟ್ ಆಡೋದನ್ನು ಮುಂದುವರಿಸುತ್ತೇನೆ. ಮುಂದಿನ ನಾಯಕನಿಗೆ ನನ್ನಿಂದ ಎಲ್ಲಾ ಸಹಕಾರ ಸಿಗಲಿದೆ. ತಂಡ ನಡೆಸಿದ ಅನುಭವನ್ನು ಅವರಿಗೆ ಧಾರೆ ಎರೆಯಲಿದ್ದೇನೆ ಎಂದಿದ್ದಾರೆ.

2019ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಗೆ ಬಾಬರ್ ಅಜಂ ಮೊದಲ ಬಾರಿಗೆ ಕ್ಯಾಪ್ಟನ್ ಆದರು. ನಂತರದ ದಿನಗಳಲ್ಲಿ ಏಕದಿನ ಮತ್ತು ಟೆಸ್ಟ್​ ಪಂದ್ಯಗಳಿಗೂ ಕ್ಯಾಪ್ಟನ್ ಆಗಿ ಬಾಬರ್ ಅಜಂ ಮುಂದುವರಿದಿದ್ದರು. ಈ ಮೂಲಕ ನಾಲ್ಕು ವರ್ಷಗಳ ಕಾಲ ಬಾಬರಂ ಅಜಂ ಪಾಕ್ ತಂಡದ ಕ್ಯಾಪ್ಟನ್ ಆಗಿ ಮುಂದುವರಿದ್ದರು. 2022ರಲ್ಲಿ ಪಾಕಿಸ್ತಾನ ಏಷ್ಯಾ ಕಪ್​​ನಲ್ಲಿ ರನ್ನರ್​ ಅಪ್ ಆಗಿ ಹೊರ ಹೊಮ್ಮಿತ್ತು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ವಿಶ್ವಕಪ್​​ ಸೋಲಿಗೆ ಕೊನೆಗೂ ತಲೆದಂಡ.. ಕ್ಯಾಪ್ಟನ್ಸಿ ಸ್ಥಾನದಿಂದ ಕೆಳಗಿಳಿದ ಪಾಕಿಸ್ತಾನದ ಬಾಬರ್ ಅಜಂ..!

https://newsfirstlive.com/wp-content/uploads/2023/11/BABAR-AZAM.jpg

Load More