newsfirstkannada.com

ಆಹಾ.. ನನ್ನ ಮದುವೆಯಂತೆ! ವಿಶ್ವಕಪ್​ ನಡುವೆ ಭಾರತದಲ್ಲಿ 7 ಲಕ್ಷದ ಶೇರ್ವಾನಿ ಖರೀದಿಸಿದ್ದ ಪಾಕ್​ ನಾಯಕ?

Share :

05-11-2023

    ನನ್ನ ಮದುವೆಯಂತೆ, ಪಾಕ್​​ ನಾಯಕ ಬಾಬರ್​​ ಅಜಂ ಫುಲ್ ಖುಷಿ?

    ಭಾರತೀಯ ಸಾಂಪ್ರದಾಯಿಕ ಉಡುಗೆಯ ಮೊರೆ ಹೋದ ಬಾಬರ್

    7 ಲಕ್ಷದ ದುಬಾರಿ ಶೇರ್ವಾನಿ ಖರೀದಿಸಿದ್ದಕ್ಕೆ ಫ್ಯಾನ್ಸ್​ ಕೋಪಗೊಂಡ್ರಾ?

ಪಾಕ್​ ತಂಡದ ನಾಯಕ ಬಾಬರ್​ ಅಜಂ ಈ ವರ್ಷದ ಕೊನೆಯಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಜೊತೆಗೆ ಮದುವೆಗಾಗಿ 7 ಲಕ್ಷ ರೂಪಾಯಿ ಬೆಲೆಯ ಶೇರ್ವಾನಿ ಖರೀದಿಸಿದ್ದಾರೆ ಎಂಬ ಸುದ್ದಿ ವೈರಲ್​ ಆಗಿದೆ.

ಅಚ್ಚರಿಯ ಸಂಗತಿ ಎಂದರೆ ಬಾಬರ್​ ಭಾರತದ ಸಂಪ್ರದಾಯಿಕ ಉಡುಪಾದ ಶೇರ್ವಾನಿಯನ್ನು ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸಬ್ಯಸಾಚಿ ಎಂಬ ಭಾರತೀಯ ಹೆಸರಾಂತ ವಿನ್ಯಾಸಕರಿಂದ ಶೇರ್ವಾನಿ ಖರೀದಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ.

ಪಾಕಿಸ್ತಾನ ತಂಡ

ಸದ್ಯ ವಿಶ್ವಕಪ್​ನಲ್ಲಿ ಪಾಕ್​ ತಂಡ 5ನೇ ಸ್ಥಾನದಲ್ಲಿದೆ. ಆಡಿರುವ 8 ಪಂದ್ಯದಲ್ಲಿ 4 ಪಂದ್ಯ ಮಾತ್ರ ಗೆದ್ದಿದೆ. ಹೀಗಿರುವಾಗ ನಾಯಕ ಬಾಬರ್​ ವಿಶ್ವಕಪ್​ ನಡುವೆ ತಮ್ಮ ಮದುವೆಯ ಶಾಪಿಂಗ್​ನಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಸುದ್ದಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಜೊತೆಗೆ ಬಾರತೀಯ ಸಾಂಪ್ರದಾಯಿಕ ಉಡುಗೆಯನ್ನು ಬಾಬರ್​ ಖರೀದಿಸಿರುವ ಬಗ್ಗೆ ಫ್ಯಾನ್ಸ್​ ಮಾತನಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಹಾ.. ನನ್ನ ಮದುವೆಯಂತೆ! ವಿಶ್ವಕಪ್​ ನಡುವೆ ಭಾರತದಲ್ಲಿ 7 ಲಕ್ಷದ ಶೇರ್ವಾನಿ ಖರೀದಿಸಿದ್ದ ಪಾಕ್​ ನಾಯಕ?

https://newsfirstlive.com/wp-content/uploads/2023/10/Babar-Azam-1.jpg

Load More