ಕೇರಳದ ಅನಂತ ಪದ್ಮನಾಭನ ಕ್ಷೇತ್ರದಲ್ಲಿ ಮತ್ತೊಂದು ವಿಸ್ಮಯ
ದೇವರ ಪ್ರತಿಬಿಂಬ ಎಂದೇಳುವ ಮೊಸಳೆ ಕಂಡು ಭಕ್ತರ ಸಂತಸ
1 ವರ್ಷದ ಬಳಿಕ ಅದೇ ಕೆರೆಯಲ್ಲಿ ದೈವ ಮೊಸಳೆ ಮರಿ ಪ್ರತ್ಯಕ್ಷ
ಬಬಿಯಾ.. ದೇವರ ಮತ್ತೊಂದು ರೂಪ. ಪೂಜೆ ನಂತರ ದೇವರ ನೈವೇದ್ಯ ಸೇವಿಸ್ತಿದ್ದ ಸಸ್ಯಹಾರಿ ಬಬಿಯಾ ಹೆಸರಿನ ಮೊಸಳೆ ಕಳೆದ ಒಂದು ವರ್ಷದ ಹಿಂದೆ ಇಹಲೋಕ ತ್ಯಜಿಸಿತ್ತು. ಇದೀಗ ಬಬಿಯಾ ಕಳ್ಕೊಂಡಿದ್ದ ಭಕ್ತಾಧಿಗಳಿಗೆ ಸಂತಸದ ಸುದ್ದಿಯೊಂದು ಸಿಕ್ಕಿದೆ. ಅನಂತ ಪದ್ಮನಾಭನ ಸನ್ನಿಧಿಯಲ್ಲಿ ಮತ್ತೊಂದು ವಿಸ್ಮಯ ನಡೆದಿದೆ. ಅನಂತಪದ್ಮನಾಭ ಕ್ಷೇತ್ರದಲ್ಲಿ ಬಬಿಯಾ ಹೆಸರಿನ ಸಸ್ಯಹಾರಿ ಮೊಸಳೆ ಪ್ರಸಿದ್ಧವಾಗಿತ್ತು. ವರ್ಷದ ಹಿಂದೆ ಬಬಿಯಾ ಇಹಲೋಕ ತ್ಯಜಿಸಿದ್ದರಿಂದ ಭಕ್ತರದಲ್ಲಿ ಬೇಸರದ ಛಾಯೆ ಮೂಡಿತ್ತು. ಇದೀಗ ದೇವರ ಪವಾಡವೋ, ಕಾರಣಿಕ ಶಕ್ತಿಯೋ ಎಂಬಂತೆ ಕ್ಷೇತ್ರದ ಕೆರೆಯಲ್ಲಿ ಮತ್ತೊಂದು ಮೊಸಳೆ ಮರಿ ಪತ್ತೆಯಾಗಿದೆ.
ಇತಿಹಾಸ ಪ್ರಸಿದ್ಧ ಅನಂತ ಪದ್ಮನಾಭ ಕ್ಷೇತ್ರದಲ್ಲಿ ಪವಾಡ
ಒಂದು ವರ್ಷದ ಬಳಿಕ ಮತ್ತೆ ದೇವರ ಮೊಸಳೆ ಪ್ರತ್ಯಕ್ಷ
ಕೇರಳದ ಇತಿಹಾಸ ಪ್ರಸಿದ್ಧ ಅನಂತಪುರ ದೇವಾಲಯದಲ್ಲಿ ಪವಾಡವೊಂದು ನಡೆದಿದೆ. ದೇವರ ಬಿಂಬ ಎಂದು ಕರೆಯಲ್ಪಟ್ಟಿದ್ದ ಬಬಿಯಾ ಮೊಸಳೆ ಸಾವನ್ನಪ್ಪಿದ ಒಂದು ವರ್ಷದ ಬಳಿಕ ದೇವಾಲಯದ ಕೆರೆಯಲ್ಲಿ ಮತ್ತೊಂದು ಮೊಸಳೆ ಮರಿ ಪ್ರತ್ಯಕ್ಷವಾಗಿದೆ. ದೇವಸ್ಥಾನಕ್ಕೆ ಬಂದಿದ್ದ ಕುಟುಂಬವೊಂದಕ್ಕೆ ಮೊಸಳೆ ಮರಿ ಕಂಡಿತ್ತು. ಆದನ್ನ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದರು. ಮಂಡಳಿ ಗಮನ ಕೊಟ್ಟಿರಲಿಲ್ಲ. ಆದರೆ ಇದೀಗ ಕ್ಷೇತ್ರದ ಆಡಳಿತ ಮಂಡಳಿ ಮೊಸಳೆ ಇರೋದನ್ನ ಖಚಿತಪಡಿಸಿದೆ. ಕಳೆದ ವರ್ಷದ ಅಕ್ಟೋಬರ್ 10ರಂದು ಬಬಿಯಾ ಮೊಸಳೆ ಸಾವನ್ನಪ್ಪಿತ್ತು. ಕ್ಷೇತ್ರದ ಇತಿಹಾಸದಂತೆ ಒಂದು ಮೊಸಳೆ ಮರೆಯಾದ್ರೆ ಮತ್ತೊಂದು ತನ್ನಿಂದ ತಾನೇ ಆಗಮಿಸುತ್ತೆ ಅನ್ನೋದು ಅಲ್ಲಿನ ಪ್ರತೀತಿಯಾಗಿದೆ.
ಹೀಗಾಗಿ ಭಕ್ತಾಧಿಗಳು ಹೊಸ ಮೊಸಳೆಯ ನಿರೀಕ್ಷೆಯಲ್ಲಿದ್ದರು. ದೇವರ ಪ್ರತಿಬಿಂಬ ಎಂದೇ ಹೇಳಲ್ಪಡುತ್ತಿರೋ ಮೊಸಳೆ ಈಗ ಕಂಡಿದ್ದು ಭಕ್ತಾಧಿಗಳಲ್ಲಿ ಖುಷಿ ತಂದಿದೆ. ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಕಾವಲುಗಾರ, ಭಕ್ತಾದಿಗಳ ಪಾಲಿನ ಪ್ರತ್ಯಕ್ಷ ದೇವರು ಎಂದೇ ಬಬಿಯಾ ಪ್ರಸಿದ್ಧಿಯಾಗಿತ್ತು. ಈ ಮೊಸಳೆ ಸ್ವಾತಂತ್ರ್ಯ ಪೂರ್ವದಲ್ಲೇ ಸರೋವರದಲ್ಲಿ ಕಾಣಿಸಿಕೊಂಡಿತ್ತು. ನಿತ್ಯ ದೇವಸ್ಥಾನದ ನೈವೇದ್ಯ ಸೇವಿಸುವ ಮೂಲಕ ದೇವಸ್ಥಾನದ ಸರೋವರದಲ್ಲಿ ಜೀವಿಸುತ್ತಿತ್ತು. ಪೂಜೆ ಬಳಿಕ ನೈವೇದ್ಯಕ್ಕೆ ಹಾಜರಾಗುವ ಭಕ್ತರು ಮೊಸಳೆಯಲ್ಲಿ ದೈವೀ ಶಕ್ತಿಯನ್ನು ಕಾಣುತ್ತಿದ್ದರು.
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಅಧಿಕಾರಿಯೊಬ್ಬ ಶ್ರೀ ಕ್ಷೇತ್ರದ ಕೆರೆಯಲ್ಲಿದ್ದ ಮೊಸಳೆಯನ್ನು ಗುಂಡಿಟ್ಟು ಕೊಂದಿದ್ದ. ಆ ಬಳಿಕ 1942ರಲ್ಲಿ ಮೊಸಳೆಯೊಂದು ಕ್ಷೇತ್ರದ ಕೆರೆಯಲ್ಲಿ ಪ್ರತ್ಯಕ್ಷವಾಗಿದ್ದು, ಅದೇ ಮೊಸಳೆ ‘ಬಬಿಯಾ’ ಎಂಬ ನಾಮದಿಂದ ಪ್ರಸಿದ್ಧಿ ಪಡೆದಿತ್ತು. ಇದೀಗ ಬಬಿಯಾ ಇಹಲೋಕ ತ್ಯಜಿಸಿ ಒಂದು ವರ್ಷದ ಬಳಿಕ ಅದೇ ಕೆರೆಯಲ್ಲಿ ಮೊಸಳೆ ಮರಿ ಪ್ರತ್ಯಕ್ಷವಾಗಿದೆ. ಬಬಿಯಾ ನಂತ್ರ ಯಾವುದೇ ಮೊಸಳೆ ಪ್ರತ್ಯಕ್ಷ ಆಗಿಲ್ಲ ಎಂದು ಬೇಸರಗೊಂಡಿದ್ದ ಭಕ್ತಾಧಿಗಳು ಕೆರೆಯಲ್ಲಿ ಮೊಸಳೆ ಮರಿ ಕಂಡು ಸಂತಸಗೊಂಡಿದ್ದಾರೆ. ನಿಜವಾಗಲೂ ನಮ್ಮ ನಂಬಿಕೆ ಸುಳ್ಳಾಗಿಲ್ಲ ಅಂತ ಪವಾಡ ಕಂಡು ನಿಬ್ಬೆರಗಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ