newsfirstkannada.com

ವೈದ್ಯನ ಯಡವಟ್ಟು, ಹೆರಿಗೆ ವೇಳೆ ಮಗುವಿನ ಮರ್ಮಾಂಗವೇ ಕಟ್​.. ದಾವಣಗೆರೆಯಲ್ಲೊಂದು ಬೆಚ್ಚಿ ಬೀಳಿಸಿದ ಘಟನೆ

ಸಾಂದರ್ಭಿಕ ಚಿತ್ರ

Share :

Published July 5, 2024 at 2:00pm

Update July 5, 2024 at 2:01pm

    ವೈದ್ಯನ ಯಡವಟ್ಟಿನಿಂದ ಪುಟಾಣಿ ಕಂದಮ್ಮ ಸಾವು

    ಸಿಸರಿನ್ ಮಾಡಿಸುವ ವೇಳೆ ನಡೆದ ದುರ್ಘಟನೆ

    ವೈದ್ಯನನ್ನ ಅಮಾನತು ಮಾಡುವಂತೆ ಪೋಷಕರ ಒತ್ತಾಯ

ದಾವಣಗೆರೆ: ವೈದ್ಯರ ಯಡವಟ್ಟಿನಿಂದ ಮಗುವಿನ ಮರ್ಮಾಂಗವೇ ಕತ್ತರಿಸಿದ ಹೋದ ಆರೋಪವೊಂದು ದಾವಣಗೆರೆಯಲ್ಲಿ ನಡೆದಿದೆ. ಇಲ್ಲಿನ ಜಿಲ್ಲಾಸ್ಪತ್ರೆಯ ವೈದ್ಯರೊಬ್ಬರಿಂದ ಹೆರಿಗೆ ಮಾಡಿಸುವ ವೇಳೆ ಈ ದುರ್ಘಟನೆ ನಡೆದಿದೆ.

ದಾವಣಗೆರೆ ಕೊಂಡಜ್ಜಿ ರಸ್ತೆಯಲ್ಲಿರೋ ಮಹಿಳೆಯೊಬ್ಬರು ಹೆರಿಗೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಹೆರಿಗೆ ವೇಳೆ ಮಹಿಳೆಗೆ ಸಿಸರಿನ್ ಮಾಡಿಸಲು ಮುಂದಾದರು. ಆದರೆ ಈ ವೇಳೆ ಅವಘಡ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದು: ಎಮ್ಮೆ ನಿನಗೆ ಸಾಟಿಯಿಲ್ಲ.. ತಲೆ ಕೆಡಿಸಿದ್ದ ಪ್ರಕರಣದ ನಿರ್ಧಾರವನ್ನು ಕೊನೆಗೆ ಎಮ್ಮೆಗೆ ಬಿಟ್ಟ ಪೊಲೀಸರು!

ಜೂನ್ 27 ರಂದು ಈ ಘಟನೆ ನಡೆದಿದೆ. ವೈದ್ಯ ನಿಜಾಮುದ್ದೀನ್ ಎಂಬವರು ಮಹಿಳೆಗೆ ಸಿಸರಿನ್​ ಮಾಡಿಸುವ ವೇಳೆ ಮಗುವಿನ ಮರ್ಮಾಂಗ ಕತ್ತರಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಬಳಿಕ ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದು, ಕೊನೆಗೆ ಮಗುವನ್ನ ಬಾಪುಜಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಆದರೆ ಬೇಸರದ ಸಂಗತಿ ಎಂದರೆ ಸತತ ಚಿಕಿತ್ಸೆ ನಂತರ ಮಗು ಸಾವನ್ನಪ್ಪಿದೆ.

ಇದನ್ನೂ ಓದು:  ಕಬಿನಿ ಭರ್ತಿಯಾಗಲು 3 ಅಡಿ ಬಾಕಿ! ಆಲಮಟ್ಟಿಗೆ ಬಂತು ನೀರೇ ನೀರೂ; ಜಲಾಶಯಗಳ ನೀರಿನ ಮಟ್ಟ ಹೀಗಿದೆ

ಸದ್ಯ ಮಗುವಿನ ಸಾವಿಗೆ ವೈದ್ಯರು ಕಾರಣ ಅಂತ ಪೋಷಕರ ಆರೋಪಿಸಿದ್ದಾರೆ. ಜೊತೆಗೆ ಆಕ್ರೋಶ ಹೊರಹಾಕಿದ್ದಾರೆ. ಜಿಲ್ಲಾಸ್ಪತ್ರೆ ಮುಂದೆ ಪೋಷಕರ ಪ್ರತಿಭಟನೆ ಮಾಡಿದ್ದಾರೆ. ಮಗುವಿನ ಸಾವಿಗೆ ಕಾರಣನಾದ ವೈದ್ಯನನ್ನ ಅಮಾನತು ಮಾಡುವಂತೆ ಪೋಷಕರು ಒತ್ತಾಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೈದ್ಯನ ಯಡವಟ್ಟು, ಹೆರಿಗೆ ವೇಳೆ ಮಗುವಿನ ಮರ್ಮಾಂಗವೇ ಕಟ್​.. ದಾವಣಗೆರೆಯಲ್ಲೊಂದು ಬೆಚ್ಚಿ ಬೀಳಿಸಿದ ಘಟನೆ

https://newsfirstlive.com/wp-content/uploads/2024/06/OT.jpg

Load More