newsfirstkannada.com

×

Morocco: ಭೂಕಂಪಕ್ಕೂ ಮುನ್ನ ಮಗುವಿಗೆ ಜನ್ಮ ನೀಡಿದ ತಾಯಿ.. ಖದೀಜಾಳ ಕಥೆ ಕೇಳಿದ್ರೆ ನಿಜಕ್ಕೂ ಕರುಳು ಹಿಂಡುತ್ತೆ  

Share :

Published September 11, 2023 at 11:01am

    ಶುಕ್ರವಾರದಂದು ಮೊರಾಕ್ಕೊದಲ್ಲಿ ಕಂಪಿಸಿದ ಭೂಮಿ

    ಭೂಕಂಪನದಲ್ಲಿ ಸತ್ತವರ ಸಂಖ್ಯೆ 2,122 ಏರಿಕೆ, ಹಲವರಿಗೆ ಗಾಯ

    ಬೀದಿ ಪಾಲಾದ ಹಲವು ಕುಟುಂಬ, ಕಣ್ಣೀರಿಡುತ್ತಿರುವ ತಾಯಂದಿರು

ಖದೀಜಾ ತನ್ನ ಮಗಳಿಗೆ ಇನ್ನೂ ಹೆಸರಿಟ್ಟಿಲ್ಲ. ಕಾರಣ ಭೂಕಂಪನ ಶಾಕ್​​ಗಿಂತ ಕೊಂಚ ಹೊತ್ತಿನ ಮುಂಚೆ ಮುದ್ದಾದ ಮಗುವಿಗೆ ಜನ್ಮ ನೀಡಿದ ಖದೀಜಾಗಳಿಗೆ ಒಂದೇಡೆ ಸಂತಸ ವಿಷಯವಾದರೆ, ಮತ್ತೊಂದೆಡೆ ತನ್ನನ್ನು ಬೀದಿ ಪಾಲು ಮಾಡಿದ ಭೂಕಂಪಕ್ಕೆ ಈ ತಾಯಿ ಹಿಡಿಶಾಪ ಹಾಕುತ್ತಿದ್ದಾಳೆ.

ಇದು ಮೊರಾಕ್ಕೋದ ಕರುಳು ಹಿಂಡುವ ಘಟನೆ. ಅಕ್ಷರಶಃ ಸ್ಮಶಾನದಂತಾಗಿದೆ ಮೊರಾಕ್ಕೊ. ಶುಕ್ರವಾರದಂದು ನಲುಗಿದ ಭೂಮಿಗೆ ಲೆಕ್ಕವಿಲ್ಲದಷ್ಟು ಜನರು ಅಸುನೀಡಿದ್ದಾರೆ. ಸದ್ಯ ಬೆರಳೆಣಿಕೆಗೆ ಸಿಕ್ಕಿದ್ದು ಮಾತ್ರ 2,122 ಅಷ್ಟೆ.

ಭೂಮಿ ಕಂಪಿಸೋದಕ್ಕೂ ಕೊಂಚ ಮೊದಲು ಖದೀಜಾ ತನ್ನ ಬಸುರಿನಲ್ಲಿದ್ದ ಮುದ್ದಾದ ಮಗುವಿಗೆ ಜನ್ಮ ನೀಡಿದ್ದಳು. ತಾನೊಂದು ಪುಟ್ಟ ಹೃದಯಕೆ ಜನ್ಮ ನೀಡಿದೆ ಎಂಬ ಖುಷಿಯಲ್ಲಿದ್ದಾಗೇ ಭೂಮಿ ಕಂಪಿಸಿದೆ. ತಕ್ಷಣವೇ ಖದೀಜಾ ತನ್ನ ಮಗುವನ್ನು ರಕ್ಷಿಸಿಕೊಂಡಿದ್ದಾಳೆ.

ಸದ್ಯ ಖದೀಜಾ ಮತ್ತು ಆಕೆಯ ಪತಿ ಭೂಕಂಪದಿಂದ ಮನೆ ಕಳೆದುಕೊಂಡಿದ್ದಾರೆ. ರಸ್ತೆ ಬದಿ ಪುಟ್ಟ ಜೀವದೊಂದಿಗೆ ಈ ದಂಪತಿ ವಾಸಿಸುತ್ತಿದ್ದಾರೆ. ಮಗುವನ್ನು ಹೊರಗಿನ ವಾತವರಣದಿಂದ ರಕ್ಷಿಸಿಕೊಳ್ಳಲು ಗ್ರಾಮದ ಕೆಲವರಲ್ಲಿ ಕಂಬಳಿ ಬೇಡುತ್ತಿದ್ದಾರಂತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Morocco: ಭೂಕಂಪಕ್ಕೂ ಮುನ್ನ ಮಗುವಿಗೆ ಜನ್ಮ ನೀಡಿದ ತಾಯಿ.. ಖದೀಜಾಳ ಕಥೆ ಕೇಳಿದ್ರೆ ನಿಜಕ್ಕೂ ಕರುಳು ಹಿಂಡುತ್ತೆ  

https://newsfirstlive.com/wp-content/uploads/2023/09/Khadija.jpg

Load More