newsfirstkannada.com

ಸತ್ತ ಮಗು ಜೀವಂತ.. ಸ್ಮಶಾನಕ್ಕೆ ಕರೆದೊಯ್ದಾಗ ಉಸಿರಾಡಿದ ಕಂದಮ್ಮ

Share :

18-08-2023

    ಇದು ಕರುಳು ಹಿಂಡುವ ವಿದ್ರಾವಕ ಘಟನೆ

    ಸ್ಮಶಾನದಲ್ಲಿ ಇದ್ದಕ್ಕಿದ್ದಂತೆಯೇ ಉಸಿರಾಡಿದ ಹಸುಗೂಸು

    ಹೈಡ್ರೋ ಸೇಫಲಸ್ ಕಾಯಿಲೆಯಿಂದ ಬಳಲುತ್ತಿರುವ ಮಗು

ಹುಬ್ಬಳ್ಳಿ: ಮೃತಪಟ್ಟಿದೆ ಎಂದು ಸ್ಮಶಾನಕ್ಕೆ ತೆಗೆದುಕೊಂಡು ಹೋದ ಮಗು ಇದ್ದಕ್ಕಿದ್ದಂತೆಯೇ ಉಸಿರಾಡಿದ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಬಸಾಪೂರ‌ ಗ್ರಾಮದಲ್ಲಿ ನಡೆದಿದೆ. ಬಸವರಾಜ್ ಎಂಬ ಒಂದುವರೆ ವರ್ಷದ ಮಗು ಜೀವಂತವಾಗಿರೋದನ್ನು ಕಂಡು ನೆರೆದಿದ್ದವರು ಬೆಚ್ಚಿಬಿದ್ದಿದ್ದಾರೆ.

ಬಸವರಾಜ್ ಹೈಡ್ರೋ ಸೇಫಲಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದ. ಇದೇ ಆಗಸ್ಟ್ 13 ರಂದು ಮಗುವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿತ್ತು. ಆಕ್ಸಿಜನ್ ತೆಗೆದರೆ‌ ಮಗು ಸಾವನ್ನಪ್ಪಬಹುದು ಎಂದು ವೈದ್ಯರು ಹೇಳಿದ್ದರು.

ನಿನ್ನೆ ಮಗು ಸತ್ತಿದೆ ಎಂದು ಪೋಷಕರು ಮಗುವನ್ನ ತಮ್ಮ ಗ್ರಾಮಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಮಗು ಅಂತ್ಯಕ್ರಿಯೆ ಮಾಡುವಾಗ ಬಾಯಿಗೆ ನೀರು ಹಾಕಿದ್ದೇ ತಡ ಮಗು ಜೀವಂತ ಇರೋದು ಗೊತ್ತಾಗಿದೆ.

ಮಗು ಸಾವಿನಪ್ಪಿದೆ ಎಂದು ಹೇಳಿಲ್ಲ

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಕಿಮ್ಸ್ ನಿರ್ದೇಶಕ ಡಾ ರಾಮಲಿಂಗಪ್ಪ, ಆಸ್ಪತ್ರೆಯಲ್ಲಿ ಮಗು ಸಾವಿನಪ್ಪಿರುವ ಬಗ್ಗೆ ನಾವು ಹೇಳಿಲ್ಲ. ನಮ್ಮ ಆಸ್ಪತ್ರೆಯಿಂದ ಬಿಡುಗಡೆಯಾದಾಗ ಮಗು ಇನ್ನೂ ಬದುಕೇ ಇದ್ದ. ಆದರೆ ಮಗುನ ಮೆದುಳಿನಲ್ಲಿ ನೀರು ತುಂಬಿಕೊಂಡಿತ್ತು. ಮಗು ಚಿಕಿತ್ಸೆ ಸ್ಪಂದನೆ ಮಾಡುತ್ತಿರಲಿಲ್ಲ. ನಾವು ಮಗುವಿನ ಪರಿಸ್ಥಿತಿ ವಿವರಣೆ ಮಾಡಿ ಬದುಕುವುದು ಕಷ್ಟ ಅಂತ ಹೇಳಿದ್ದೆವು. ಹೀಗಾಗಿ ಸ್ವ-ಇಚ್ಛೆಯಿಂದ ಮಗುವಿನ ಪಾಲಕರು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗಿದ್ದರು ಎಂದು ಹೇಳಿದ್ದಾರೆ.

ಗೊಂದಲ ಸೃಷ್ಟಿ ಮಾಡಿದ್ದಾರೆ

ಬಳಿಕ ಮಾತನಾಡಿದ ಅವರು, ಕಿಮ್ಸ್ ಆಸ್ಪತ್ರೆಯಿಂದ ಮಗು ಬಿಡುಗಡೆಯಾದಾಗ ಮೃತಪಟ್ಟಿರಲಿಲ್ಲ. ಮನೆಗೆ ಹೋಗಿ ಕೆಲವು ಗಂಟೆಗಳ ಬಳಿಕ ಬಾಲಕನನ್ನು ಮತ್ತೆ ಕರೆದುಕೊಂಡು ಬಂದರು. ನಾವು ಅಡ್ಮಿಟ್ ಮಾಡಿ ಎಂದು ಹೇಳಿದ್ದೇವೆ ಆದರೆ ಅವರು ಬೇಡ ಅಂತ ಮತ್ತೆ ವಾಪಸ್ಸು ಕರೆದುಕೊಂಡು ಹೋಗಿದ್ದಾರೆ. ಕಿಮ್ಸ್ ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿರಿಲ್ಲ. ಸುಮ್ಮನೆ ಮದ್ಯೆ ಇರೋರು ಗೊಂದಲ ಸೃಷ್ಟಿ ಮಾಡಿದ್ದಾರೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸತ್ತ ಮಗು ಜೀವಂತ.. ಸ್ಮಶಾನಕ್ಕೆ ಕರೆದೊಯ್ದಾಗ ಉಸಿರಾಡಿದ ಕಂದಮ್ಮ

https://newsfirstlive.com/wp-content/uploads/2023/08/Dharwad.jpg

Load More