ರಿಯಲ್ ಎಸ್ಟೇಟ್ನಲ್ಲಿಯೇ ಹೆಚ್ಚು ಹೂಡಿಕೆ ಮಾಡುತ್ತಿರುವ ಬಚ್ಚನ್ ಕುಟುಂಬ
ಮುಂಬೈನ ಮುಲುಂಡ್ನಲ್ಲಿ ಖರೀದಿಯಾದ ಮತ್ತೆ ಎರಡು ಐಶಾರಾಮಿ ಮನೆಗಳು
2020 ರಿಂದ ಬಚ್ಚನ್ ಕುಟುಂಬ ರಿಯಲ್ ಎಸ್ಟೇಟ್ನಲ್ಲಿ ಮಾಡಿದ ಹೂಡಿಕೆ ಎಷ್ಟು?
ಬಾಲಿವುಡ್ನ ಸೂಪರ ಐಕಾನಿಕ್ಸ್ ಅಮಿತಾಬ್ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಆಗಾಗ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೂಡಿಕೆ ಮಾಡಿರುವ ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಈಗ ಮತ್ತೊಮ್ಮೆ ಈ ಅಪ್ಪ ಮಗನ ಜೋಡಿ ಅದೇ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಮುಂಬೈನ ಪಶ್ಚಿಮ ಸುಬರ್ಬ್ನ ಮುಲುಂಡ್ನಲ್ಲಿ 24.95 ಕೋಟಿ ರೂಪಾಯಿಯ ಆಸ್ತಿ ಖರೀದಿ ಮಾಡುವ ಮೂಲಕ ಮತ್ತೆ ಸುದ್ದಿಮಾಧ್ಯಮಗಳಲ್ಲಿ ಮುನ್ನೆಲಗೆ ಬಂದಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ಗಾಯಕನಿಗೆ ಡೂಡಲ್ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ ಗೂಗಲ್: ಯಾರು ಈ ಕೆಕೆ?
ಒಬಿರಾಯ್ ರಿಯಾಲಿಟಿ ಪ್ರಿಮಿಯಮ್ ರೆಸೆಡೆನ್ಷಿಯಲ್ ಪ್ರಾಜೆಕ್ಟ್ನಲ್ಲಿ ಸಿದ್ಧಗೊಂಡಿರುವ ಅಪಾರ್ಟ್ಮೆಂಟ್ನಲ್ಲಿ 3ಬಿಹೆಚ್ಕೆ ಹಾಗೂ 4 ಬಿಹೆಚ್ಕೆ ಮನೆಗಳನ್ನು ಖರೀದಿ ಮಾಡಿರುವ ಬಚ್ಚನ್ ಕುಟುಂಬ ಸದ್ಯದಲ್ಲಿಯೇ ಆ ಐಷಾರಾಮಿ ಬಂಗಲೆಗಳಿಗೆ ಸ್ಥಳಾಂತರವಾಗಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.
ಬಚ್ಚನ್ ಕುಟುಂಬ ಇಲ್ಲಿಯವರೆಗೂ ಒಟ್ಟು 10 ಅಪಾರ್ಟ್ಮೆಂಟ್ಗಳನ್ನು ಖರೀದಿ ಮಾಡಿದೆ. ಒಪ್ಪಂದದಲ್ಲಿ ಅಪಾರ್ಟ್ಮೆಂಟ್ನಲ್ಲಿ ತಮಗೆ ಎರಡು ಪಾರ್ಕಿಂಗ್ ಜಾಗ ಬೇಕು ಎಂದು ಷರತ್ತಿನೊಂದಿಗೆ ಖರೀದಿಯಾಗಿವೆ. ಇಲ್ಲಿಯವರೆಗೂ ಖರೀದಿ ಮಾಡಿದ ಆಸ್ತಿಗಳಲ್ಲಿ ಬಚನ್ ಕುಟುಂಬ ಸ್ಟಾಂಪ್ ಡ್ಯೂಟಿಗಾಗಿಯೇ 1.50 ಕೋಟಿ ರೂಪಾಯಿ ಖರ್ಚು ಮಾಡಿದೆ. ಅಭಿಷೇಕ್ ಬಚ್ಚನ್ ಒಟ್ಟು 6 ನಿವಾಸಗಳನ್ನು 14.77 ಕೋಟಿ ರೂಪಾಯಿಗಳಿಗೆ ಖರೀದಿಸಿದ್ದರೆ. ಅಮಿತಾಬ್ ಬಚ್ಚನ್ ಒಟ್ಟು 4 ನಿವಾಸಗಳನ್ನು ಖರೀದಿ ಮಾಡಿದ್ದಾರೆ.
ಇದನ್ನೂ ಓದಿ: ಪುಷ್ಪ ಮಾದರಿ ಸ್ಮಗ್ಲಿಂಗ್.. ಆಯಿಲ್ ಟ್ಯಾಂಕರ್ನಲ್ಲಿ 200 ಬಾಕ್ಸ್ ಮದ್ಯ ಸಾಗಾಟ; ಆಮೇಲೇನಾಯ್ತು?
ಸದ್ಯ ಈಗ ಖರೀದಿ ಮಾಡಿರುವ ಆಸ್ತಿ , ಬಚ್ಚನ್ ಕುಟುಂಬಕ್ಕೆ ಮತ್ತೊಂದು ಬಂಗಲೆಯಾಗಿ ಸೇರ್ಪಡೆಗೊಂಡಿದೆ. 2020 ರಿಂದ ಅಮಿತಾಬ್ ಬಚ್ಚನ್ ತಮ್ಮ ಗಳಿಕೆಯಲ್ಲಿ ಶೇಕಡಾ 25ರಷ್ಟು ಆಸ್ತಿ ಖರೀದಿಗಾಗಿಯೇ ಮೀಸಲಿಡುತ್ತಿದ್ದಾರೆ. ಅವರು ಇಲ್ಲಿಯವರೆಗೆ 219 ಕೋಟಿ ರೂಪಾಯಿಯ ಆಸ್ತಿ ಖರೀದಿ ಮಾಡಿದ್ದು ಕಂಡು ಬಂದಿದೆ. ಇತ್ತೀಚೆಗೆ ಅಯೋಧ್ಯ ರಾಮಮಂದಿರ ನಿರ್ಮಾಣವಾದ ಬಳಿಕ ಅಲ್ಲಿಯ ಭೂಮಿ ಖರೀದಿ ಮಾಡಲು ಸುಮಾರು 14.5 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು ಅಮಿತಾಬ್ ಬಚ್ಚನ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ