newsfirstkannada.com

‘ಆದಿಪುರುಷ’ನ ಮತ್ತೆ ಮತ್ತೆ ಕಾಡಿದೆ ಕೆಟ್ಟ ದಿನಗಳು’ ಪ್ರಭಾಸ್ ಚಿತ್ರಕ್ಕೆ ಯಾಕೆ ಹೀಗೆ ಆಯಿತು..?

Share :

29-06-2023

    ದೇಶದಲ್ಲಿ ಬ್ಯಾನ್ ಆಗುತ್ತಾ ಆದಿಪುರುಷ್ ಚಿತ್ರ..?

    ಇವತ್ತು ಸುಮ್ಮನಿದ್ದರೆ ಇಂತವೆಲ್ಲ ಹೆಚ್ಚಾಗುತ್ತವೆ-ಕೋರ್ಟ್

    ಸೆನ್ಸಾರ್ ಮಂಡಳಿಗೂ ಕ್ಲಾಸ್, ನಿರ್ಮಾಪಕರಿಗೂ ತರಾಟೆ

ಆದಿಪುರುಷನಿಗೆ ಒಂದಲ್ಲ ಒಂದು ಟೀಕೆಗಳು ಬರುತ್ತಲೇ ಇವೆ. ಇಷ್ಟು ದಿನ ಸಿನಿಮಾ ವೀಕ್ಷಿಸಿದವರು, ತುಣುಕುಗಳನ್ನ ನೋಡಿದವರು ಹಿಗ್ಗಾಮುಗ್ಗಾ ಜಾಡಿಸಿದ್ದರು. ಈಗ ಹೈಕೋರ್ಟ್ ಸರದಿ. ಚಿತ್ರತಂಡಕ್ಕೆ ಅಲಹಬಾದ್‌ ಹೈಕೋರ್ಟ್‌ ನಿಜಕ್ಕೂ ಚಳಿಬಿಡಿಸಿದೆ.

ಆದಿಪುರುಷ್‌ ಯಾಕೆ ಟ್ರೋಲ್ ಆಯ್ತು ಅನ್ನೋ ವಿಚಾರ ತುಂಬಾ ಗಂಭೀರವಾದದ್ದು. ನಾವು ಕೇಳದ, ನಾವು ನೋಡದ ರಾಮಾಯಣದ ಪಾತ್ರಗಳ ಪೋಷಣೆ, ರಚನೆ, ಸಂಭಾಷಣೆಗಳು ಈ ಚಿತ್ರದ ತುಂಬಾ ಇದ್ದಿದ್ದು ದೇಶವ್ಯಾಪಿ ಟೀಕೆಗೆ ಕಾರಣವಾಯ್ತು. ಅದರಲ್ಲೂ ರಾವಣ ಮತ್ತು ಸೀತೆ ಅಪಹರಣ ದೃಶ್ಯಗಳಂತೂ ಟ್ರೋಲ್‌ನಲ್ಲಿ ಕಿಕ್ಕಿರಿದ್ದು ತುಂಬಿದ್ದವು.

ಇದು ವೀಕ್ಷಕರ ಕೋಪಕ್ಕೆ ತಾಪಕ್ಕೆ ಮಾತ್ರ ಒಳಗಾಗಿಲ್ಲ. ಈಗ ಕೋರ್ಟ್‌ ಕೂಡ ಆದಿಪುರುಷ್‌ಗೆ ಛೀಮಾರಿ ಹಾಕಿದೆ. ಅದು ಯಾವ ಮಟ್ಟಿಗೆ ಅಂದ್ರೆ, ಬಹುಶಃ ಆದಿಪುರುಷ್‌ ಟೀಮ್‌ಗೆ ಕಾನೂನಿನ ತೊಡಕು ಎದುರಾಗುವ ಸಾಧ್ಯತೆ ಅಂತೂ ದಟ್ಟವಾಗಿದೆ. ಇಡೀ ತಂಡ ಈಗ ನೆಮ್ಮದಿಯಿಂದ ಇಲ್ಲ ಅನ್ನೋದು ಖಚಿತವಾಗಿ ಹೇಳ್ಬಹುದು. ಆ ರೀತಿಯಿದೆ ಕೋರ್ಟ್‌ನ ಅಭಿಪ್ರಾಯಗಳು. ಎರಡು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರಾಜೇಶ್‌ ಸಿಂಗ್‌ ಚೌವ್ಹಾಣ್‌ ಮತ್ತು ಶ್ರೀಪ್ರಕಾಶ್‌ ಸಿಂಗ್‌, ಇಡೀ ತಂಡಕ್ಕೆ ಛೀಮಾರಿ ಹಾಕಿಬಿಟ್ಟಿದೆ.

ಡೈಲಾಗ್ಸ್ ವಿರುದ್ಧ ಅಸಮಾಧಾನ

‘ಚಿತ್ರದಲ್ಲಿನ ಸಂಭಾಷಣೆಗಳ ಸ್ವರೂಪವು ಒಂದು ದೊಡ್ಡ ಸಮಸ್ಯೆಯಾಗಿದೆ. ರಾಮಾಯಣವು ನಮಗೆ ಒಂದು ಮಾದರಿಯಾಗಿದೆ. ಜನರು ಮನೆಯಿಂದ ಹೊರಡುವ ಮೊದಲು ರಾಮಚರಿತಮಾನಗಳನ್ನು ಓದುತ್ತಾರೆ. ಸಿನಿಮಾ ನೋಡಿದ ಜನರು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರದಿರುವುದು ಒಳ್ಳೆಯದು. ಹನುಮಂತ ಮತ್ತು ಸೀತೆಯನ್ನು ಅವಹೇಳನಕಾರಿಯಾಗಿ ತೋರಿಸಲಾಗಿದೆ. ಈ ವಿಷಯಗಳನ್ನು ಆರಂಭದಲ್ಲೇ ತೆಗೆದುಹಾಕಬೇಕಾಗಿತ್ತು. ಅಂತಹ ಚಲನಚಿತ್ರಗಳನ್ನು ವೀಕ್ಷಿಸುವುದು ತುಂಬಾ ಕಷ್ಟ’ ಎಂದು ಕೋರ್ಟ್​ ಹೇಳಿದೆ.

ಸೆನ್ಸಾರ್‌ ಮಂಡಳಿಗೂ ಅಲಹಾಬಾದ್ ಹೈಕೋರ್ಟ್‌ ತರಾಟೆ

ಇಷ್ಟೆ ಅಲ್ಲ, ಚಿತ್ರತಂಡದ ಲೋಪವನ್ನೂ ಎತ್ತಿಹಿಡಿದಿದೆ. ‘ಜನರು, ದೇಶವಾಸಿಗಳು ಮತ್ತು ಯುವಕರನ್ನು ಬುದ್ಧಿಹೀನರು ಎಂದು ಚಿತ್ರ ತಯಾರಕರು ಪರಿಗಣಿಸಿದ್ದಾರೆಯೇ? ನೀವು ಭಗವಾನ್ ರಾಮ, ಲಕ್ಷ್ಮಣ, ಹನುಮಂತ ದೇವರನ್ನು ತೋರಿಸುತ್ತೀರಿ. ಅದು ರಾಮಾಯಣವಲ್ಲ ಎಂಬುದಾಗಿ ಹೇಳುತ್ತೀರಿ. ಜನರು ಥಿಯೇಟರ್‌ಗಳಿಗೆ ಹೋಗಿ ಚಿತ್ರವನ್ನು ಸ್ಥಗಿತಗೊಳಿಸುವ ಯತ್ನ ಮಾಡುತ್ತಿದ್ದಾರೆ ಎಂದು ನಾವು ಸುದ್ದಿಯಲ್ಲಿ ನೋಡಿದ್ದೇವೆ. ಆದರೆ, ಇನ್ನೂ ಯಾರೂ ಸಿನಿಮಾ ಮಂದಿರವನ್ನು ಧ್ವಂಸಗೊಳಿಸುವ ಪ್ರಯತ್ನ ಮಾಡಿಲ್ಲ. ಇದು ಒಳ್ಳೆಯದು. ಕೇವಲ ಸಿನಿಮಾ ತಂಡಕ್ಕೆ ಮಾತ್ರವಲ್ಲ, ಸೆನ್ಸಾರ್‌ ಮಂಡಳಿಗೂ ಅಲಹಾಬಾದ್ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.

ಸಿನಿಮಾ ಸಮಾಜದ ಕನ್ನಡಿ, ಮುಂದಿನ ಪೀಳಿಗೆಗೆ ಏನು ಕಲಿಸಲು ಬಯಸುತ್ತೀರಿ? ಸೆನ್ಸಾರ್ ಮಂಡಳಿಗೆ ತನ್ನ ಜವಾಬ್ದಾರಿ ಅರ್ಥವಾಗುತ್ತಿಲ್ಲವೇ?’ ರಾಮಾಯಣ ಮಾತ್ರವಲ್ಲದೆ ಪವಿತ್ರ ಕುರಾನ್, ಗುರು ಗ್ರಂಥ ಸಾಹಿಬ್ ಮತ್ತು ಗೀತೆಯಂತಹ ಧಾರ್ಮಿಕ ಗ್ರಂಥಗಳನ್ನಾದರೂ ಬಿಟ್ಟುಬಿಡಿ. ಉಳಿದೆಲ್ಲವನ್ನು ಈಗಾಗಲೇ ಮಾಡುತ್ತಲೇ ಇರುವಿರಿ ಅಲ್ವೇ’ ಎಂದು ಕೋರ್ಟ್ ತೀವ್ರ ತರಾಟೆಗೆ ತೆಗುದಕೊಂಡಿದೆ.

ಇದಿಷ್ಟೆ ಅಲ್ಲದೇ, ಚಿತ್ರದ ಸಂಭಾಷಣೆಕಾರ ಮನೋಜ್ ಮಂತೀಶರ್ನ ಕಕ್ಷಿದಾರನನ್ನಾಗಿ ಮಾಡಲು ಕೋರ್ಟ್ ಸೂಚಿಸಿದೆ. ಸೆನ್ಸಾರ್ ಮಂಡಳಿಗೂ ವಾರ್ನಿಂಗ್ ಕೊಟ್ಟ ನ್ಯಾಯಾಲಯ, ಒಂದು ವಾರದೊಳಗೆ ಪ್ರತಿಕ್ರಿಯೆ ನೀಡಬೇಕು ಎಂದು ನಿರ್ದೇಶನ ನೀಡಿದೆ. ನ್ಯಾಯಾಲಯ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನ ಅವಲೋಕಿಸಿದಾಗ ಸಿನಿಮಾ ತಂಡದ ಲೋಪಗಳು ಕಣ್ಣಿಗೆ ಕಟ್ಟುವಂತೆ ಕಾಣುತ್ತಿದೆ. ಒಂದು ಸಿನಿಮಾದ ಕೆಲ ದೃಶ್ಯಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವ ಘಟನೆಗಳು ಈ ಹಿಂದೆ ನಡೆದಿವೆ. ಆದ್ರೆ, ಆದಿಪುರುಷ್‌ ಸಿನಿಮಾದ ಬಹುತೇಕ ಸೀನ್‌ಗಳು ಹಾಗೂ ಸಂಭಾಷಣೆ ಬಗ್ಗೆ ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿರುವುದು ಗಮನಾರ್ಹ.

ಜನರ ಮನಸ್ಸಿನಲ್ಲಿ ಪೂಜ್ಯನೀಯ ಭಾವನೆಯಿರುವ ವಿಚಾರಗಳನ್ನ ತೆರೆಯ ಮೇಲೆ ತರುವಾಗ ಮೈಯೆಲ್ಲಾ ಕಣ್ಣಾಗಿರಬೇಕು. ಸೂಕ್ಷಾತಿ ಸೂಕ್ಷ ವಿಚಾರಗಳನ್ನ ಮೊದಲೇ ಅವಲೋಕಿಸಿ, ಸಿನಿಮಾ ಮಾಡಬೇಕು. ಆದ್ರೆ, ಆದಿಪುರುಷ್ ಚಿತ್ರತಂಡ ಈ ವಿಚಾರಗಳಲ್ಲಿ ಎಡವಿದೆ ಅನ್ನೋದು ನೀಟಾಗಿ ಕಾಣ್ತಿದೆ. ಇನ್ನೊಂದೆಡೆ, ಪ್ರಭಾಸ್ ಮೇಲೂ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿನಿಮಾ ಮತ್ತು ಚಿತ್ರತಂಡದ ಆಯ್ಕೆಗಳ ಬಗ್ಗೆ ಮುತುವರ್ಜಿವಹಿಸ್ಬೇಕು ಅಂತಾ ಅಭಿಮಾನಿಗಳು ಸೇರಿದಂತೆ ಹಲವರು ಸಲಹೆ ನೀಡಿದ್ದಾರೆ. ಇಡೀ ವಿವಾದವನ್ನ ಸೂಕ್ಷವಾಗಿ ಗಮನಿಸಿದಾಗ, ಇದೊಂದು ಬ್ಲಂಡರ್ ಅಂತಾನೇ ಹೇಳ್ಬಹುದು. ಇಂತಹ ತಪ್ಪುಗಳು ಮುಂದೆ ಆಗದಂತೆ ಸೆನ್ಸಾರ್ ಮಂಡಳಿ ಕಟ್ಟುನಿಟ್ಟಿನ ಕ್ರಮಕೈಗೊಳ್ಬೇಕು ಅಷ್ಟೇ.

ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಫಿಲ್ಮಿ ಫಸ್ಟ್​’ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

‘ಆದಿಪುರುಷ’ನ ಮತ್ತೆ ಮತ್ತೆ ಕಾಡಿದೆ ಕೆಟ್ಟ ದಿನಗಳು’ ಪ್ರಭಾಸ್ ಚಿತ್ರಕ್ಕೆ ಯಾಕೆ ಹೀಗೆ ಆಯಿತು..?

https://newsfirstlive.com/wp-content/uploads/2023/06/AADIPURUSH-2.jpg

Load More