ಎಷ್ಟೇ ಹೋರಾಟ ಮಾಡಿದ್ರೂ ICC ಟ್ರೋಫಿ ದೂರ
ನಿರಾಸೆಯ ಕಡಲಲ್ಲಿ ಮುಳುಗಿದ ಟೀಮ್ ಇಂಡಿಯಾ
ಕೊನೆಗೂ ಈಡೇರಲಿಲ್ಲ.. ರೋಹಿತ್, ಕೊಹ್ಲಿ ಕನಸು
ಇವರಿಬ್ಬರು ಕ್ರಿಕೆಟ್ ಲೋಕದ ಬಿಗ್ಗೆಸ್ಟ್ ಸೂಪರ್ ಸ್ಟಾರ್ಸ್. ದಾಖಲೆಗಳ ಒಡೆಯರು. ಕ್ರಿಸ್ಗೆ ಕಚ್ಚಿ ನಿಂತು ರನ್ಭೂಮಿಯಲ್ಲಿ ಘರ್ಜಿಸಿದ್ರೆ ಎದುರಾಳಿ ಪಡೆ ಅಕ್ಷರಶಃ ಬೆಚ್ಚಿ ಬೀಳುತ್ತೆ. ಇವರಿಬ್ಬರ ಆಟ ಗತ್ತೇ ಬೇರೆ. ಸಾಲಿಡ್ ಆಟ ಇವರಿಬ್ಬರಿಗೂ ಅದೃಷ್ಟವೇ ಕೈ ಹಿಡಿಯಲ್ಲ. ಎಷ್ಟೇ ಹೋರಾಟ ಮಾಡಿದ್ರೂ ಅಲ್ಟಿಮೇಟ್ ಕನಸು ಈಡೆರ್ತಿಲ್ಲ.
ನಮೋ ಮೈದಾನದಲ್ಲಿ ಟೀಮ್ ಇಂಡಿಯಾ ಮುಗ್ಗರಿಸಿ ದಿನ ಕಳೆದ್ರೂ ಆ ಸೋಲಿನ ಆಘಾತ ಇಡೀ ಭಾರತವನ್ನು ಆವರಿಸಿದೆ. ಟೂರ್ನಿಯುದ್ದಕ್ಕೂ ಅಜೇಯ ಓಟ ನಡೆಸಿದ ಟೀಮ್ ಇಂಡಿಯಾ, ಫೈನಲ್ನಲ್ಲಿ ಸೋತಿದ್ದು ಅಭಿಮಾನಿಗಳನ್ನು ತೀವ್ರ ನಿರಾಸೆಗೆ ದೂಡಿದೆ. ಆಟಗಾರರೂ ಕೂಡ ಇದರಿಂದ ಹೊರತಾಗಿಲ್ಲ.
ನಿರಾಸೆಯ ಕಡಲಲ್ಲಿ ಮುಳುಗಿದ ಟೀಮ್ ಇಂಡಿಯಾ
ಆಸಿಸ್ ವಿರುದ್ಧದ ಪಂದ್ಯದಲ್ಲಿ ಈ ಫಲಿತಾಂಶವನ್ನು ಟೀಮ್ ಇಂಡಿಯಾದ ಯಾವೊಬ್ಬ ಆಟಗಾರ ಕೂಡ ನಿರೀಕ್ಷೆ ಮಾಡಿರಲಿಲ್ಲ. ಕಪ್ ಗೆದ್ದೇ ಗೆಲ್ಲುವ ವಿಶ್ವಾಸ ಡ್ರೆಸ್ಸಿಂಗ್ ರೂಮ್ನಲ್ಲಿತ್ತು. ಅದೇ ಆತ್ಮವಿಶ್ವಾಸದಲ್ಲಿ ಕಣಕ್ಕಿಳಿದ ಆಟಗಾರರಿಗೆ ಆನ್ಫೀಲ್ಡ್ನಲ್ಲಿ ಆಗಿದ್ದು ನಿರಾಸೆ. ಸೋಲಿನ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ. ಮನದಾಳದ ನೋವನ್ನ ಪದಗಳಲ್ಲಿ ಹೇಳಲು ಸಾಧ್ಯವೇ ಇಲ್ಲ.
ಕೊನೆಗೂ ಈಡೇರಲಿಲ್ಲ.. ರೋಹಿತ್ ಕನಸು..!
2011ರಲ್ಲಿ ತವರಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿ ತಂಡದಿಂದ ಹೊರ ಬಿದ್ದಿದ್ದ ರೋಹಿತ್ ಶರ್ಮಾ, ಈ ಬಾರಿಯಲ್ಲಿ ತವರಿನಲ್ಲೆ ತನ್ನ ನಾಯಕತ್ವದಲ್ಲಿ ಕಪ್ ಗೆಲ್ಲಿಸಿಕೊಡೋ ಪಣ ತೊಟ್ಟಿದ್ರು. ಕ್ಯಾಪ್ಟೆನ್ಸಿ, ಬ್ಯಾಟಿಂಗ್ ಎಲ್ಲದರಲ್ಲೂ ಅದ್ಭುತ ಪರ್ಫಾಮೆನ್ಸ್ ಕೂಡ ನೀಡಿದ್ರು. ಕಪ್ ಗೆಲ್ಲೋ ಕನಸನ್ನು ನನಸು ಮಾಡುಕೊಳ್ಳುವಲ್ಲಿ ಫೇಲ್ ಆದರು.
ಐಸಿಸಿ ಟೂರ್ನಮೆಂಟ್ನಲ್ಲಿ ರೋಹಿತ್ಗೆ ಅನ್ಲಕ್!
2015 ವಿಶ್ವಕಪ್ನಲ್ಲಿ 47.14ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದ ರೋಹಿತ್, 2019ರಲ್ಲಿ 5 ಶತಕ ಸಹಿತ, 81ರ ಎವರೇಜ್ನಲ್ಲಿ ಬ್ಯಾಟಿಂಗ್ ನಡೆಸಿದ್ರು. ಈ ವಿಶ್ವಕಪ್ನಲ್ಲೂ ಹಿಟ್ಮ್ಯಾನ್ ದರ್ಬಾರ್ ನಡೆಸಿದ್ರು. ಆದ್ರೆ ಕಪ್ ಮಾತ್ರ ನಮ್ಮದಾಗಲಿಲ್ಲ.. ಈ ವಿಶ್ವಕಪ್ ಮಾತ್ರವಲ್ಲ.. 2022ರ ವಿಶ್ವಕಪ್, 2023ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲೂ ರೋಹಿತ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಸೋಲುಂಡಿತು.
ವಿರಾಟ್ ಕೊಹ್ಲಿಯ ಬೆನ್ನುಬಿದ್ದ ದುರಾದೃಷ್ಟ..!
ಅಂಡರ್ 19 ವಿಶ್ವಕಪ್ ಗೆದ್ದ ಬಳಿಕ ವಿಶ್ವ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟ ಕೊಹ್ಲಿ, 2011ರಲ್ಲಿ ವಿಶ್ವಕಪ್, 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಜಯಿಸಿದ್ರು. ಆ ಬಳಿಕ ದುರಾದೃಷ್ಟ ಬೆನ್ನುಬಿದ್ದಿದೆ. 2014ರ ಟಿ20 ವಿಶ್ವಕಪ್, 2016 ಟಿ20 ವಿಶ್ವಕಪ್, ಮತ್ತು ಈ ಬಾರಿ ಏಕದಿನ ವಿಶ್ವಕಪ್ನಲ್ಲಿ ಅಮೋಘ ಆಟವಾಡಿ ಪ್ಲೇಯರ್ ಆಫ್ ದ ಟೂರ್ನಮೆಂಟ್ ಅನ್ನಿಸಿಕೊಂಡ ಕೊಹ್ಲಿಗೆ ಐಸಿಸಿ ಟ್ರೋಫಿ ಗೆಲ್ಲಲಾಗಲಿಲ್ಲ.
‘ನಾಯಕ’ ಕೊಹ್ಲಿಗೂ ಐಸಿಸಿ ಟೂರ್ನಿಯಲ್ಲಿ ಬ್ಯಾಡ್ಲಕ್
ನಾಯಕನಾಗಿಯೂ ಐಸಿಸಿ ಟೂರ್ನಿಗಳಲ್ಲಿ ಕೊಹ್ಲಿ ಹಿನ್ನಡೆ ಅನುಭವಿಸಿದ್ದಾರೆ. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಸೋಲುಂಡರೆ, 2019 ವಿಶ್ವಕಪ್ ಸೆಮಿಸ್ನಲ್ಲಿ ವಿರಾಟ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಸೋಲುಂಡಿತು. 2021ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲೂ ಕ್ಯಾಪ್ಟನ್ ಕೊಹ್ಲಿ ಅನುಭವಿಸಿದ್ದು ನಿರಾಸೆಯನ್ನೇ.
ಒಟ್ಟಿನಲ್ಲಿ, ವಿಶ್ವ ಕ್ರಿಕೆಟ್ ಲೋಕದ ಸೂಪರ್ ಸ್ಟಾರ್ಗಳು ಅನಿಸಿಕೊಂಡರೂ ಕೊಹ್ಲಿ, ರೋಹಿತ್ಗೆ ಐಸಿಸಿ ಟೂರ್ನಿಯ ಹಿನ್ನಡೆಯ ಕೊರಗು ತೀವ್ರವಾಗಿ ಕಾಡ್ತಿದೆ. ಮುಂದಿನ ವರ್ಷ ನಡೆಯೋ ಟಿ20 ವಿಶ್ವಕಪ್ನಲ್ಲಾದ್ರೂ ಈ ಕೊರಗಿಗೆ ಫುಲ್ಸ್ಟಾಫ್ ಬೀಳಲಿ. ಸೀನಿಯರ್ ಆಟಗಾರರಿಗೆ ಟ್ರೊಫಿಯ ಗೌರವ ಸಿಗಲಿ ಅನ್ನೋದು ಫ್ಯಾನ್ಸ್ ಆಶಯವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್