ಬೆಂಗಳೂರಿನಲ್ಲಿ ಪಿಜಿ, ಹಾಸ್ಟೆಲ್ ಎಲ್ಲವೂ ದುಬಾರಿ
ಹಾಸ್ಟೆಲ್ ಹುಡುಗರಿಗೆ ಮೋದಿ ಸರ್ಕಾರದಿಂದ ಶಾಕ್
ಪಿಜಿಯಲ್ಲಿ ಇರೋರಿಗೂ ಬಿಗ್ ಟೆನ್ಶನ್! ಕಾರಣವೇನು?
ಬೆಂಗಳೂರು: ದುಬಾರಿ ದುನಿಯಾದಲ್ಲಿ ರಾಜ್ಯದ ಜನತೆಗೆ ಮತ್ತೊಂದು ಶಾಕಿಂಗ್ ನ್ಯೂಸ್ ಇದೆ. ಸದ್ಯದಲ್ಲೇ ಪಿಜಿ, ಹಾಸ್ಟೆಲ್ ಬಾಡಿಗೆ ಬೆಲೆಯಲ್ಲೂ ಏರಿಕೆಯಾಗಲಿದ್ದು, ಅದರಲ್ಲೂ ಇದು ಬ್ಯಾಚುಲರ್ಸ್ ಮತ್ತು ವಿದ್ಯಾರ್ಥಿಗಳ ಮೇಲೆ ಬರೆ ಎಳೆಯಲಿದೆ.
ಹೌದು, ಇನ್ನು ಮುಂದೆ ಪಿಜಿ, ಹಾಸ್ಟೆಲ್ನಲ್ಲಿ ವಾಸಿಸೋ ಎಲ್ಲರೂ ಜಿಎಸ್ಟಿ ಕಟ್ಟಬೇಕಂತೆ. ದಿನದ ಬಾಡಿಗೆ 1000 ರೂಕ್ಕಿಂತ ಕಡಿಮೆಯಿದ್ರೇ ಶೇಕಡಾ 12% ಜಿಎಸ್ಟಿ ಹಾಗೂ ಸಾವಿರಕ್ಕಿಂತ ಹೆಚ್ಚಿದ್ರೇ ಶೇಕಡಾ 18% ಜಿಎಸ್ಟಿ ವಿಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಜೊತೆಗೆ ಬೆಂಗಳೂರಿನ ಜಿಎಸ್ಟಿ ಅಡ್ವಾನ್ಸ್ ರೂಲಿಂಗ್ ಪೀಠ ಈ ಬಗ್ಗೆ ಆದೇಶ ನೀಡಿದ್ದು, ಇದು ವಿದ್ಯಾರ್ಥಿ ಹಾಗೂ ಬ್ಯಾಚುಲರ್ಸ್, ಉದ್ಯೋಗಿಗಳಿಗೆ ಹೊರೆಯಾಗಿದೆ.
ಇನ್ನೂ ಈ ಜಿಎಸ್ಟಿ ವಿಧಿಸುವ ನಿರ್ಧಾರದಿಂದಾಗಿ ಬೆಂಗಳೂರಲ್ಲಿ ಪಿಜಿಗಳ ದರ ಏರಿಕೆ ಅನಿವಾರ್ಯ ಎಂದು ಬೆಂಗಳೂರು ಪಿಜಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಮಾಹಿತಿ ನೀಡಿದೆ.
ಒಟ್ಟಾರೆ ಈ ಜಿಎಸ್ಟಿ ಏರಿಕೆ ನಿರ್ಧಾರ ವಿದ್ಯಾರ್ಥಿಗಳಿಗೆ ಕುಟುಂಬದಿಂದ ಬರೋ ಪಾಕೆಟ್ ಮನಿ ಮೇಲೂ ಪರಿಣಾಮ ಬೀರಲಿದೆ. ಜೊತೆಗೆ ನಗರದಲ್ಲಿ ಪಿಜಿ ರೇಟ್ ಕೂಡ ಜಾಸ್ತಿ ಆಗಲಿದ್ದು ಬ್ಯಾಚುಲರ್ಸ್ಗೆ ಹೊರೆಯಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ