newsfirstkannada.com

×

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬ್ಯಾಡ್​ನ್ಯೂಸ್​​; ಭಾನುವಾರ 2 ಗಂಟೆ ಕಾಲ ಸಂಚಾರ ಸ್ಥಗಿತ

Share :

Published June 30, 2023 at 7:50pm

    ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬ್ಯಾಡ್​​ನ್ಯೂಸ್​..!

    ಈ ಮಾರ್ಗದಲ್ಲಿ ಜುಲೈ 2ಕ್ಕೆ ಮೆಟ್ರೋ ಸಂಚಾರ ಸ್ಥಗಿತ

    ಅಧಿಕೃತ ಪ್ರಕಟಣೆ ಹೊರಡಿಸಿದ ಬಿಎಂಆರ್​ಸಿಎಲ್!

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬ್ಯಾಡ್​​ನ್ಯೂಸ್​ ಒಂದಿದೆ. ನೇರಳೆ ಮಾರ್ಗದಲ್ಲಿ ಜುಲೈ 2ನೇ ತಾರೀಕಿನಂದು ನಮ್ಮ ಮೆಟ್ರೋ ಸಂಚಾರ ತಾತ್ಕಾಲಿಕವಾಗಿ 2 ಗಂಟೆಗಳ ಕಾಲ ಸ್ಥಗಿತವಾಗಲಿದೆ.

ಈ ಸಂಬಂಧ ಪ್ರಕಟಣೆ ಹೊರಡಿಸಿದ ಬಿಎಂಆರ್​ಸಿಎಲ್, ಟ್ರಿನಿಟಿ-ಎಂ.ಜಿ ರಸ್ತೆ ಮೆಟ್ರೋ ಮಧ್ಯೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದೇವೆ. ಹೀಗಾಗಿ MG ರೋಡ್​​ ಮೆಟ್ರೋದಿಂದ ಬೈಯಪ್ಪನಹಳ್ಳಿ ನಿಲ್ದಾಣದವರೆಗೆ ಭಾನುವಾರ 2 ಗಂಟೆಗಳ ಕಾಲ ನಮ್ಮ ಮೆಟ್ರೋ ಸಂಚರಿಸುವುದಿಲ್ಲ ಎಂದು ತಿಳಿಸಿದೆ.

ಇನ್ನು, ಈ ಹಿಂದೆಯೇ ಜುಲೈ 2ನೇ ತಾರೀಕು ಟ್ರಿನಿಟಿ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಕಾಮಗಾರಿ ಕೈಗೊಳ್ಳುತ್ತಿರುವುದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ಹೇಳಿತ್ತು. ಈಗ ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ಬೆಳಗ್ಗೆ 7 ಗಂಟೆಯಿಂದ 9 ಗಂಟೆವರೆಗೂ ಮೆಟ್ರೋ ಸಂಚಾರ ಇರುವುದಿಲ್ಲ ಎಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬ್ಯಾಡ್​ನ್ಯೂಸ್​​; ಭಾನುವಾರ 2 ಗಂಟೆ ಕಾಲ ಸಂಚಾರ ಸ್ಥಗಿತ

https://newsfirstlive.com/wp-content/uploads/2023/06/Metro.jpg

Load More