ಎಲ್ಲರ ಮುಂದೆ ಪೇಚಿಗೆ ಸಿಲುಕಿಬಿಟ್ಟಿದ್ದ ಜಾವಗಲ್ ಶ್ರೀನಾಥ್
ಸಚಿನ್ ಮಾಡಿದ ಒಂದು ತಮಾಷೆಯಿಂದ ಶ್ರೀನಾಥ್ ಗಾಬರಿ
ಮೈಸೂರಿನ ವೇಗಿ ಭಾರತ ತಂಡದ ವಿನ್ನಿಂಗ್ ಬೌಲರ್ ಆಗಿದ್ರು
ಟೀಮ್ ಇಂಡಿಯಾ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಅವರ ಕ್ರಿಕೆಟ್ ಜರ್ನಿ ಬಲು ರೋಚಕ. ಕ್ರಿಕೆಟ್ ಆಡುವಾಗ ಮೈಸೂರ್ ಎಕ್ಸ್ಪ್ರೆಸ್ ಡೆಡ್ಲಿ ದಾಳಿಗೆ, ಎದುರಾಳಿಗಳು ಪತರುಗುಟ್ಟುತ್ತಿದ್ರು. ಶ್ರೀನಾಥ್ ಬೌಲಿಂಗ್ ಅಂದ್ರೆ ಬ್ಯಾಟ್ಸ್ಮನ್ಗಳಿಗೆ ಅಷ್ಟೊಂದು ಭಯ. ಇಂತಹ ಸ್ಟೀಡ್ಸ್ಟರ್ ವಿದಾಯದ ಕೊನೆ ಸರಣಿ ಕಾಮಿಡಿಯಲ್ಲಿ ಕೊನೆಗೊಂಡಿತ್ತು. ಆ ಫನ್ನಿ ಸ್ಟೋರಿ ಏನು ಅನ್ನೋದನ್ನ ನೋಡೋಣ ಇವತ್ತಿನ ಸಖತ್ ಸ್ಟೋರಿಯಲ್ಲಿ.
ಜಾವಗಲ್ ಶ್ರೀನಾಥ್ ಟೀಮ್ ಇಂಡಿಯಾಗೆ ಅದೆಷ್ಟೋ ಪಂದ್ಯಗಳನ್ನ ಗೆಲ್ಲಿಸಿಕೊಟ್ಟ ವೇಗಿ. ಇಂತಹ ಮ್ಯಾಚ್ ವಿನ್ನಿಂಗ್ ಬೌಲರ್ ಒಮ್ಮೆ ಸಚಿನ್ ತೆಂಡೂಲ್ಕರ್ ಮಾಡಿದ ತಮಾಷೆಯಿಂದ ಎಲ್ಲರ ಮುಂದೆ ಪೇಚಿಗೆ ಸಿಲುಕಿಬಿಟ್ಟಿದ್ದರು. 2002ರಲ್ಲಿ ಇಂಗ್ಲೆಂಡ್ ವಿರುದ್ಧ ಜಾವಗಲ್ ಶ್ರೀನಾಥ್ ವೃತ್ತಿ ಜೀವನದ ಕೊನೆ ಏಕದಿನ ಸರಣಿಯನ್ನ ಆಡುತ್ತಿದ್ದರು. ಆಗ ಶ್ರೀನಾಥ್, ಅದ್ಯಾಕೋ ಸಿಕ್ಕಾಪಟ್ಟೆ ನರ್ವಸ್ ಆಗಿದ್ರಂತೆ. ಆಗ ಶ್ರೀನಾಥ್ ಮುಖ ಗಮನಿಸಿದ ತೆಂಡೂಲ್ಕರ್ ಸಹ ಆಟಗಾರನನ್ನ ನಗಿಸಲು ಫ್ರಾಂಕ್ ಮಾಡ್ತಾರೆ.
ಶ್ರೀನಾಥ್ ಕಿಟ್ಬ್ಯಾಕ್ನಲ್ಲಿ ತನ್ನ ಟ್ರ್ಯಾಕ್ ಪ್ಯಾಂಟ್ ಇಟ್ಟು, ಸುಮ್ಮನಾಗ್ತಾರೆ. ಗಡಿಬಿಡಿಯಲ್ಲಿ ಶ್ರೀನಾಥ್, ತೆಂಡೂಲ್ಕರ್ ಟ್ರ್ಯಾಕ್ ಪ್ಯಾಂಟ್ ಧರಿಸಿ, ಪ್ರಾಕ್ಟೀಸ್ಗೂ ಹೋಗ್ತಾರೆ. ನೆಟ್ಸ್ನಲ್ಲಿ ಒಂದು ಬಾಲ್ ಬೌಲಿಂಗ್ ಮಾಡಿದ ಮೇಲೆ ಶ್ರೀನಾಥ್ರನ್ನ ನೋಡಿ ಎಲ್ರೂ ನಗುತ್ತಿರುತ್ತಾರೆ. ಯಾಕಂದ್ರೆ ಶ್ರೀನಾಥ್ ಅವರಿಗೆ ಸಚಿನ್ ಪ್ಯಾಂಟ್, ಮೊಣಕಾಲಿನ ತನಕ ಆಗಿರುತ್ತಿತ್ತು . ಈ ವಿಷ್ಯ ತಿಳಿತ್ತಿದ್ದಂತೆ ಜಾವಗಲ್ ಶ್ರೀನಾಥ್, ಕೂಡಲೇ ಡ್ರೆಸ್ಸಿಂಗ್ ರೂಮ್ನತ್ತ ಓಡಿ ಹೋಗ್ತಾರೆ. ನಂತರ ಟ್ರ್ಯಾಕ್ ಪ್ಯಾಂಟ್ ಚೇಂಜ್ ಮಾಡಿ ಮತ್ತೆ ನೆಟ್ ಪ್ರಾಕ್ಟೀಸ್ಗೆ ವಾಪಾಸಾಗ್ತಾರೆ. ಈ ವಿಷಯವನ್ನ ಹೇಮಂಗ್ ಬದಾನಿ ರಿವೀಲ್ ಮಾಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ