/newsfirstlive-kannada/media/post_attachments/wp-content/uploads/2024/12/PV-SINDHU.jpg)
ಪಿವಿ ಸಿಂಧು ತಮ್ಮ ಬದುಕಿನ ಹೊಸ ಪಯಣಕ್ಕೆ ಸಿದ್ಧರಾಗಿದ್ದಾರೆ. ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತರಾಗಿರುವ ಬ್ಯಾಡ್ಮಿಂಟನ್ ತಾರೆ, ಶೀಘ್ರದಲ್ಲೇ ವಿವಾಹ ಆಗಲಿದ್ದಾರೆ.
ಸಿಂಧು ಅವರ ತಂದೆ ಪಿವಿ ರಾಮಣ್ಣ ಈ ಶುಭ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಡಿಸೆಂಬರ್ 22 ರಂದು ರಾಜಸ್ಥಾನದ ‘ಲೇಕ್ ಸಿಟಿ’ ಉದಯಪುರದಲ್ಲಿ ವಿವಾಹ ಸಮಾರಂಭ ನಡೆಯಲಿದೆ ಎಂದು ತಿಳಿಸಿದ್ದಾರೆ. ಸಿಂಧು ಮದುವೆ ಸುದ್ದಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಪಿವಿ ಸಿಂಧು ತೆಲಂಗಾಣದ ಯುವತಿಯಾಗಿದ್ದು, ವೆಂಕಟ ದತ್ತ ಸಾಯಿ (Venkata Datta Sai) ಎಂಬ ಉದ್ಯಮಿಯನ್ನು ಮದುವೆಯಾಗಲಿದ್ದಾರೆ. ಇವರು ಪ್ರಮುಖ ವ್ಯಾಪಾರೋದ್ಯಮ ಕುಟುಂಬಕ್ಕೆ ಸೇರಿದವರು.
ಇದನ್ನೂ ಓದಿ:Pushpa 2 The Rule ಸಿನಿಮಾದ ಟಿಕೆಟ್ ಬೆಲೆ ಭಾರೀ ಏರಿಕೆ.. ಅಲ್ಲು ಅರ್ಜುನ್ ಫ್ಯಾನ್ಸ್​ ಬೇಸರ
ಡಿಸೆಂಬರ್ 20 ರಿಂದ ವಿವಾಹ ಕಾರ್ಯಕ್ರಮಗಳು ಆರಂಭವಾಗಲಿದೆ. ಡಿಸೆಂಬರ್ 22ರಂದು ಹಿಂದೂ ಸಂಪ್ರದಾಯದಂತೆ ಸಿಂಧು ವಿವಾಹ ನಡೆಯಲಿದೆ. ಡಿಸೆಂಬರ್ 24ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ನಡೆಯಲಿದೆ. ಆರತಕ್ಷತೆ ಸಮಾರಂಭದಲ್ಲಿ ಕುಟುಂಬಸ್ಥರು, ಆಪ್ತರು, ಕ್ರೀಡಾ ಪಟುಗಳು, ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ. ಪಿವಿ ಸಿಂಧು ಭಾರತದ ಜನಪ್ರಿಯ ಕ್ರೀಡಾಪಟು. ಬ್ಯಾಡ್ಮಿಂಟನ್‌ನಲ್ಲಿ ಅವರು ಮಾಡಿರುವ ಸಾಧನೆ ದೇಶಕ್ಕೆ ಹೆಮ್ಮೆ ತಂದಿದೆ. ಒಲಿಂಪಿಕ್ ಪದಕಗಳನ್ನು ಗೆಲ್ಲುವ ಮೂಲಕ ಭಾರತದ ಗೌರವ ಹೆಚ್ಚಿಸಿದ ಸಾಧಕಿ ಪಿವಿ ಸಿಂಧು.
ಇದನ್ನೂ ಓದಿ:BBK11 ಗೌತಮಿಗೆ ಏನಾಯ್ತು..? ಬಿಕ್ಕಿಬಿಕ್ಕಿ ಕಣ್ಣೀರು ಇಟ್ಟ ಸ್ಪರ್ಧಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us