ದೇವಿ ದರ್ಶನ ಪಡೆದು ಊರಿಗೆ ವಾಪಸ್ ಆಗುವಾಗ ಘಟನೆ
ರಸ್ತೆಯಲ್ಲಿ ಮುಖಾಮುಖಿ ಡಿಕ್ಕಿಯಾದ ಕಾರು ಹಾಗೂ ಲಾರಿ
ಘಟನೆಯಲ್ಲಿ ಮೃತಪಟ್ಟವರು ಯಾವ ಊರಿಗೆ ಸೇರಿದವರು?
ಬಾಗಲಕೋಟೆ: ಕಾರು ಹಾಗೂ ಲಾರಿ ನಡುವೆ ಭೀಕರವಾಗಿ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ. ಹುಲಿಗೆಮ್ಮ ದೇವಿ ದರ್ಶನ ಮುಗಿಸಿಕೊಂಡು ಬರುರುವಾಗ ಹುನಗುಂದ ತಾಲೂಕಿನ ಧನ್ನೂರ ಟೋಲ್ ನಾಕಾ ಬಳಿ ಈ ಘಟನೆ ನಡೆದಿದೆ.
ಕಾರಿನಲ್ಲಿದ್ದ ಲಕ್ಷ್ಮಣ ವಡ್ಡರ (55), ಬೈಲಪ್ಪ ಬಿರಾದಾರ (45), ರಾಮಣ್ಣ ನಾಯಕಮಕ್ಕಳ (50), ಕಾರು ಚಾಲಕ ಮೊಹಮ್ಮದ್ ರಫೀಕ್ ಗುಡ್ನಾಳ (25) ಮೃತಪಟ್ಟವರು. ಇವರೆಲ್ಲ ವಿಜಯಪುರದ ಮುದ್ದೇಬಿಹಾಳ ಮೂಲದವರು ಆಗಿದ್ದಾರೆ.
ಇದನ್ನೂ ಓದಿ: ಬಿಗ್‌ಬಾಸ್ ಫ್ಯಾನ್ಸ್ ಗುಡ್‌ನ್ಯೂಸ್.. ಹೊಸ ಅಧ್ಯಾಯದ ಬಿಗ್ ಸೀಕ್ರೆಟ್‌ಗೆ ಮುಹೂರ್ತ ಫಿಕ್ಸ್; ಯಾವಾಗ?
ನಾಲ್ವರು ಕಾರಿನಲ್ಲಿ ಹುಲಿಗೆಮ್ಮ ದೇವಿ ದರ್ಶನ ಪಡೆದುಕೊಂಡು ವಾಪಸ್ ಊರಿಗೆ ತೆರಳುತ್ತಿದ್ದರು. ಹುನಗುಂದ ಮೂಲಕ ಮುದ್ದೇಬಿಹಾಳಕ್ಕೆ ಹೋಗುವಾಗ ಧನ್ನೂರ ಟೋಲ್ ನಾಕಾ ಬಳಿ ಬೆಳಗಿನ ಜಾವ ಇವರ ಕಾರು ಹಾಗೂ ಲಾರಿ ನಡುವೆ ಭಯಾನಕವಾದ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಪರಿಣಾಮ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ. ಇನ್ನು ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ