ರಾತ್ರಿ ಮಾಲೀಕನನ್ನು ಹತ್ಯೆ ಮಾಡಿರುವ ಆರೋಪಿ ಪರಾರಿ
ಹತ್ಯೆಯಾದವ ಬಸ್ ನಿಲ್ದಾಣದ ಬಳಿ ಎಗ್ರೈಸ್ ಅಂಗಡಿ ನಡೆಸ್ತಿದ್ದ
ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದ ಆರೋಪಿ
ಬಾಗಲಕೋಟೆ: ಎಗ್ರೈಸ್, ಚಿಕನ್ ಕಬಾಬ್ ಕಾಲಿಯಾಗಿದೆ ಎಂದಿದ್ದಕ್ಕೆ ಅಂಗಡಿ ಮಾಲೀಕನನ್ನೇ ಯುವಕನೊಬ್ಬ ಚಾಕು ಇರಿದು ಕೊಲೆ ಮಾಡಿರುವ ಘಟನೆ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ಬಸ್ ನಿಲ್ದಾಣದ ಬಳಿ ರಾತ್ರಿ ನಡೆದಿದೆ.
ಅಂಗಡಿ ಮಾಲೀಕ ಗೈಬುಸಾಬ್ ಮುಲ್ಲಾ (34) ಎನ್ನುವವರು ಹತ್ಯೆಯಾದ ದುರ್ದೈವಿ. ಆರೋಪಿ ಮುಸ್ತಾಕ್ ಜಂಗಿ (20) ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದಾನೆ. ನಿನ್ನೆ ರಾತ್ರಿ ಅಂಗಡಿ ಬಳಿ ಬಂದಿದ್ದ ಆರೋಪಿಯು ಎಗ್ರೈಸ್, ಕಬಾಬ್ ಕೇಳಿದ್ದಾನೆ. ಇದಕ್ಕೆ ಎಲ್ಲ ಕಾಲಿಯಾಗಿದೆ, ಏನು ಇಲ್ಲ ಎಂದು ಮಾಲೀಕ ಹೇಳಿದ್ದಾನೆ ಅಷ್ಟೇ. ಇದರಿಂದ ಕೋಪಗೊಂಡ ಆರೋಪಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಇದನ್ನು ಓದಿ: Breaking News: ಗೌರಿ-ಗಣೇಶ ಹಬ್ಬದ ದಿನವೇ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಸಾವು
ಆರೋಪಿ ಮುಸ್ತಾಕ್ ಈ ಹಿಂದೆಯು ಹಲ್ಲೆ ಪ್ರಕರಣದಲ್ಲಿ ಜೈಲು ಪಾಲಾಗಿ ಜಾಮೀನಿನ ಮೇಲೆ ಕೆಲ ದಿನಗಳ ಹಿಂದಷ್ಟೇ ಹೊರ ಬಂದಿದ್ದನು. ಅಷ್ಟರಲ್ಲೇ ಇನ್ನೊಂದು ಕೃತ್ಯ ಮಾಡಿ ತಲೆಮರೆಸಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಅಮೀನಗಡ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ