newsfirstkannada.com

ಮನೆಗಳ ಮೇಲೆ ಕಲ್ಲು ತೂರಾಟ.. ಬಾಗಲಕೋಟೆಯಲ್ಲಿ ಬಿಗುವಿನ ವಾತಾವರಣ.. ಪೊಲೀಸರಿಂದ ಕಟ್ಟೆಚ್ಚರ

Share :

22-06-2023

    ಕ್ಷುಲ್ಲಕ ಕಾರಣಕ್ಕೆ ಎರಡು ಕೋಮಿನ ಯುವಕರ ನಡುವೆ ಗಲಾಟೆ

    ಕಲ್ಲು ತೂರಾಟದಿಂದ ಎರಡೂ ಕೋಮಿನ ಯುವಕರಿಗೆ ಗಾಯ

    ಆರೋಪಿಗಳ ವಿರುದ್ಧ ಕ್ರಮಕ್ಕೆ ಹಿಂದೂ ಕಾರ್ಯಕರ್ತರು ಆಗ್ರಹ

ಬಾಗಲಕೋಟೆ: ಎರಡು ಕೋಮುಗಳ ಯುವಕರ ನಡುವೆ ಗಲಾಟೆ ಬೆನ್ನಲ್ಲೇ ಮನೆಗಳ ಮೇಲೆ ಕಲ್ಲು ತೂರಾಟ ನಡೆದ ಘಟನೆ ಜಿಲ್ಲೆಯ ನವನಗರದ ವಾಂಬೆ ಕಾಲೋನಿಯಲ್ಲಿ ನಡೆದಿದೆ.

ಎರಡು ಕೋಮುಗಳ ಯುವಕರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಗಲಾಟೆಯು ಕೈ ಮೀರಿ ಹೋಗಿದ್ದರಿಂದ ಎರಡು ಮನೆಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಹೀಗಾಗಿ 2 ಕೋಮಿನ ತಲಾ ಮೂವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ವಿಷಯ ತಿಳಿದ ತಕ್ಷಣ ಹಿಂದೂ ಕಾರ್ಯಕರ್ತರು ನಗರಸಭೆ ಮುಂದೆ ಜಮಾಯಿಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪೊಲೀಸರಿಗೆ ಇವತ್ತು ಮಧ್ಯಾಹ್ನ 12 ಗಂಟೆವರೆಗೂ ಗಡುವು ನೀಡಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮನೆಗಳ ಮೇಲೆ ಕಲ್ಲು ತೂರಾಟ.. ಬಾಗಲಕೋಟೆಯಲ್ಲಿ ಬಿಗುವಿನ ವಾತಾವರಣ.. ಪೊಲೀಸರಿಂದ ಕಟ್ಟೆಚ್ಚರ

https://newsfirstlive.com/wp-content/uploads/2023/06/BGK_HALLE.jpg

Load More