newsfirstkannada.com

ಭಾರೀ ಫೇಮಸ್ ಆಗ್ತಿವೆ ‘ಬಾಹುಬಲಿ ಸಮೋಸಾ’; ಬರ್ತ್​​ಡೇಯಲ್ಲಿ ಕೇಕ್ ಬದಲಾಗಿ ಈ ದೈತ್ಯ ತಿಂಡಿಯದ್ದೇ ಕಾರುಬಾರು..!

Share :

21-06-2023

    12 KG ತೂಕದ ಸಮೋಸಾ 30 ನಿಮಿಷದಲ್ಲಿ ಮಾತ್ರ ತಿನ್ನುವ ಚಾಲೆಂಜ್..!

    ದೈತ್ಯ ಸಮೋಸಾ ಪರಿಚಯ ಮಾಡುವ ಸಲುವಾಗಿ ಸ್ಪರ್ಧೆ ಆಯೋಜನೆ

    ಅವರೆಕಾಳು, ವಿವಿಧ ಮಸಾಲೆ, ಮತ್ತು ಡ್ರೈ ಫ್ರೂಟ್ಸ್​ನಿಂದ ಸಮೋಸಾ ರೆಡಿ

ಶುಭಂ ಕೌಶಲ್, ಇವರು ಮೀರತ್​​ನ ಲಾಲ್​ಕುರ್ತಿಯಲ್ಲಿರುವ ‘ಕೌಶಲ್ ಸ್ವೀಟ್ಸ್​’ ಅಂಗಡಿಯ ಮಾಲೀಕರು. ಇವರು ಇತ್ತೀಚೆಗೆ ಹುಟ್ಟು ಹಬ್ಬದ ಸಂಭ್ರಮಕ್ಕೆ ಕೇಕ್ ಕಟ್ ಮಾಡುವ ಬದಲಾಗಿ 12 ಕೆಜಿಯ ‘ದೈತ್ಯ ಸಮೋಸಾ’ ಪರಿಚಯಿಸುವ ‘ಯುನಿಕ್ ಐಡಿಯಾ’ ಮಾಡಿದ್ದರು. ಅವರ ಐಡಿಯಾ ವರ್ಕೌಟ್ ಆಗಿದ್ದು, ಜನರನ್ನು ಭಾರೀ ಇಂಪ್ರೆಸ್ ಮಾಡ್ತಿದೆ. ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.

30 ನಿಮಿಷದಲ್ಲಿ ತಿಂದರೆ 71,000 ರೂ ಬಹುಮಾನ

ಅಂದ್ಹಾಗೆ ಅವರು ತಯಾರಿಸಿದ್ದ ದೈತ್ಯ ಸಮೋಸಕ್ಕೆ ‘ಬಾಹುಬಲಿ’ ಎಂದು ಹೆಸರಿಟ್ಟಿದ್ದಾರೆ. ದಿನ ಕಳೆದಂತೆ ಈ ಸಮೋಸಾ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಜನ ವಿಭಿನ್ನತೆ ಇರಲಿ ಎಂದು ಹುಟ್ಟಹಬ್ಬದ ಸಂದರ್ಭದಲ್ಲಿ ಕೇಕ್ ಬದಲಾಗಿ ಸಮೋಸಾ ತಂದು ಕಟ್ ಮಾಡಿಸಲಾಗುತ್ತಿದೆ. ಇನ್ನು, ಈ ದೈತ್ಯ ಸಮೋಸಾಗಳನ್ನು ಪರಿಚಯ ಮಾಡುವ ಸಲುವಾಗಿ ಸ್ಪರ್ಧೆ ಆಯೋಜನೆ ಮಾಡಿದ್ದರು. ಬರೋಬ್ಬರಿ 12 ಕೆಜಿ ಹೊಂದಿರುವ ‘ಬಾಹುಬಲಿ ಸಮೋಸಾ’ವನ್ನು ಕೇವಲ 30 ನಿಮಿಷಗಳಲ್ಲಿ ತಿಂದು ಮುಗಿಸಬೇಕಾಗಿತ್ತು. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ಅವರು 71 ಸಾವಿರ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದರು.

ಅಂದ್ಹಾಗೆ ಈ ದೈತ್ಯ ಸಮೋಸಾ ತಯಾರಿಸೋದು ಸುಲಭದ ಟಾಸ್ಕ್​ ಆಗಿರಲಿಲ್ಲ. 12 ಕೆಜಿಯ ದೈತ್ಯ ಸಮೋಸಾ ಮಾಡಲು ಹೆಚ್ಚುಕಮ್ಮಿ 6 ಗಂಟೆ ತೆಗೆದುಕೊಳ್ಳಲಿದೆ. ಎಣ್ಣೆಯಲ್ಲಿ ಫ್ರೈ ಮಾಡಲು ಸುಮಾರು 90 ನಿಮಿಷಗಳು ತೆಗೆದುಕೊಂಡಿದೆ. ಮೂವರು ಬಾಣಸಿಗರಿಂದ ಮಾಡಿಸಲಾಗಿತ್ತು. ಇದನ್ನು ಆಲೂಗಡ್ಡೆ, ಅವರೆಕಾಳು, ವಿವಿಧ ಮಸಾಲೆ, ಪನ್ನೀರ್ ಮತ್ತು ಡ್ರೈ ಫ್ರೂಟ್ಸ್​ ಬಳಸಿ ಮಾಡಲಾಗಿತ್ತು.

ಒಂದು ಸಮೋಸಾಗೆ ಎಷ್ಟು ಖರ್ಚು ಆಗುತ್ತೆ..?

ಈ ಸ್ಪರ್ಧೆ ಬೆನ್ನಲ್ಲೇ ‘ಬಾಹುಬಲಿ ಸಮೋಸಾ’ ಭಾರೀ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಅಲ್ಲಿನ ಸ್ಥಳೀಯ ನಿವಾಸಿಗಳಿಗೆ ಮಾತ್ರವಲ್ಲ, ಸೋಶಿಯಲ್ ಮೀಡಿಯಾದಲ್ಲೂ ಸಖತ್ ಫೇಮಸ್ ಆಗ್ತಿದೆ. ದೇಶದ ವಿವಿಧ ಭಾಗಗಳ ಜನರು ಅದನ್ನು ಹೇಗೆ ಮಾಡೋದು ಎಂದು ತಿಳಿದುಕೊಳ್ಳಲು ಕೌಶಲ್ ಅವರನ್ನು ಸಂಪರ್ಕಿಸುತ್ತಿದ್ದಾರಂತೆ. ಮಾತ್ರವಲ್ಲ, ಸ್ಥಳೀಯ ಸಮೋಸಾ ಅಭಿಮಾನಿಗಳು ಅಡ್ವಾನ್ಸ್​ ಆಗಿ ‘ಬಾಹುಬಲಿ ಸಮೋಸಾ’ ಬುಕ್ ಮಾಡುತ್ತಿದ್ದಾರಂತೆ!

ಬೇಡಿಕೆಯ ತಕ್ಕಂತೆ 4 ಕೆಜಿ, 8 ಕೆಜಿ ಸಮೋಸಾಗಳನ್ನು ಜನರು ಹೆಚ್ಚಾಗಿ ಆರ್ಡರ್​ ಮಾಡ್ತಿದ್ದಾರಂತೆ. 12 ಕೆಜಿಯ ಒಂದು ಸಮೋಸಾ ಮಾಡಲು 1500 ರೂಪಾಯಿ ತಗುಲಲಿದೆ. ಇದುವರೆಗೆ ಸುಮಾರು 40-50 ಸಮೋಸಾಗಳು ಬರ್ತ್​​ಡೇಗಾಗಿ ಆರ್ಡರ್ ಆಗಿವೆ ಎಂದು ವರದಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರೀ ಫೇಮಸ್ ಆಗ್ತಿವೆ ‘ಬಾಹುಬಲಿ ಸಮೋಸಾ’; ಬರ್ತ್​​ಡೇಯಲ್ಲಿ ಕೇಕ್ ಬದಲಾಗಿ ಈ ದೈತ್ಯ ತಿಂಡಿಯದ್ದೇ ಕಾರುಬಾರು..!

https://newsfirstlive.com/wp-content/uploads/2023/06/SAMOSA.jpg

Load More