ಉತ್ತರ ಪ್ರದೇಶದ ಮೀರತ್‌ನಲ್ಲಿ ತುಂಬಾನೇ ಫೇಮಸ್ ಆಗಿದೆ ಬಾಹುಬಲಿ ಸಮೋಸ
ಯಾವತ್ತಾದ್ರೂ 12 ಕೆ.ಜಿ ತೂಕದ ಬೃಹತ್ ಬಾಹುಬಲಿ ಸಮೋಸವನ್ನು ತಿಂದಿದ್ದೀರಾ..?
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಬೃಹತ್ ಗಾತ್ರದ ಬಾಹುಬಲಿ ಸಮೋಸ
ಮೀರತ್: ಸಾಮಾನ್ಯವಾಗಿ ಸಮೋಸಾ ಅಂದ್ರೆ ಸಾಕು ಎಲ್ಲರ ಬಾಯಲ್ಲಿ ಸಹಜವಾಗಿಯೇ ನೀರು ಬರುತ್ತದೆ. ಕರ್ನಾಟಕದಲ್ಲಿ ಅಂಗೈ ಅಗಲದ ಸಮೋಸಾ ನೋಡಿರುತ್ತೇವೆ ಜೊತೆಗೆ ಟೆಸ್ಟ್ ಕೂಡ ಮಾಡಿರುತ್ತೇವೆ. ಇನ್ನು 10 ರಿಂದ 15 ರೂಪಾಯಿಗಳ ಸಮೋಸಾವನ್ನು ತಿಂದಿರುತ್ತೇವೆ. ಆದರೆ 12 ಕೆ.ಜಿ ತೂಕದ ಬೃಹತ್ ಸಮೋಸಾವನ್ನು ತಿಂದಿದ್ದೀರಾ..? ಇದೀಗ ಸಾಮಾಜಿಕ ಜಾಲತಾಣದಲ್ಲಿ ಬೃಹತ್ ಗಾತ್ರದ ಸಮೋಸದ್ದೇ ಹವಾ ಸೃಷ್ಟಿಯಾಗಿದೆ. ಅದುವೇ ಬಾಹುಬಲಿ ಸಮೋಸ. ಈ ಬಾಹುಬಲಿ ಹೆಸರಿನ ಸಮೋಸ ಉತ್ತರ ಪ್ರದೇಶದ ಮೀರತ್‌ನಲ್ಲಿ ತುಂಬಾನೇ ಫೇಮಸ್ ಆಗಿದೆ. ಇದೀಗ ಬೃಹತ್ ಗಾತ್ರದ ಸಮೋಸಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ.
ಬಾಹುಬಲಿ ಸಮೋಸದ ವಿಶೇಷತೆ ಏನು..?
ಬಾಹುಬಲಿ ಸಮೋಸವು ಬರೋಬ್ಬರಿ 12 ಕೆ.ಜಿ ತೂಕವನ್ನು ಹೊಂದಿದೆ. ಈ ಬೃಹತ್ ಗಾತ್ರದ ಸಮೋಸವನ್ನು ತಯಾರಿಸಲು 90 ನಿಮಿಷಗಳು ತೆಗೆದುಕೊಂಡಿದ್ದಾರೆ. ಇದೀಗ ಅಂಗಡಿ ಮಾಲೀಕ ಗ್ರಾಹಕರಿಗೆ ಸವಾಲೊಂದನ್ನು ಹಾಕಿದ್ದಾರೆ. ಅದುವೇ ಸಮೋಸ ಚಾಲೇಂಜ್. ಈ ಬಾಹುಬಲಿ ಸಮೋಸವನ್ನು ಕೇವಲ 30 ನಿಮಿಷದಲ್ಲಿ 12 ಕೆಜಿ ಸಮೋಸ ತಿಂದರೆ 71,000 ರೂಪಾಯಿಯನ್ನು ಬಹುಮಾನ ರೂಪದಲ್ಲಿ ಕೊಡುತ್ತೇವೆ ಎಂದಿದ್ದಾರೆ.
ಹೌದು, ಈ ಬೃಹತ್ ಗಾತ್ರದ ಸಮೋಸಾವನ್ನು ಕೇವಲ 30 ನಿಮಿಷಗಳಲ್ಲಿ ತಿಂದ್ರೆ 71,000 ರೂಪಾಯಿ ಕೂಡ ಗೆಲ್ಲಬಹುದಂತೆ. ಲಾಲ್ಕುರ್ತಿ ಮೂಲದ ಕೌಶಲ್ ಸ್ವೀಟ್ಸ್‌ನ ಮಾಲೀಕರೊಬ್ಬರು ಗ್ರಾಹಕರಿಗೆ ಹೀಗೊಂದು ಆಫರ್ ನೀಡಿದ್ದಾರೆ. ಈ ಬಾಹುಬಲಿ ಸಮೋಸಾದ ಬೆಲೆ ಸುಮಾರು 1,500 ರೂಪಾಯಿ. ಈ ಸಮೋಸದಲ್ಲಿ ಆಲೂಗಡ್ಡೆ, ಬಟಾಣಿ, ಮಸಾಲೆ ಪದಾರ್ಥಗಳು, ಪನೀರ್ ಮತ್ತು ಡ್ರೈ ಫ್ರೂಟ್ಸ್ ಹೀಗೆ ಹತ್ತು ಹಲವಾರು ಪದಾರ್ಥಗಳನ್ನು ಮಿಶ್ರಣ ಮಾಡಲಾಗಿದೆ. ಈ ಸಮೋಸವನ್ನು ತಯಾರಿಸಲು ಒಟ್ಟು ಆರು ಗಂಟೆಗಳು ಬೇಕಾಯಿತಂತೆ. ಮಸಾಲೆಯನ್ನು ಹುರಿಯೋದಕ್ಕೆ 90 ನಿಮಿಷಗಳು ತೆಗೆದುಕೊಂಡಿದ್ದಾರಂತೆ. ಇನ್ನು ಜನರು ಈ ಬೃಹತ್ ಸಮೋಸಾವನ್ನು ಬಹಳ ಇಷ್ಟಪಡುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಂಗಡಿಗೆ ಬಂದು ಬಾಹುಬಲಿ ಸಮೋಸಾಗಳನ್ನು ಆರ್ಡರ್ ಮಾಡುತ್ತಿದ್ದಾರಂತೆ. ಹಾಗೂ ವಿಶೇಷವೆಂದರೆ ಹುಟ್ಟು ಹಬ್ಬಕ್ಕೆ ಕೇಕ್ ತೆಗೆದುಕೊಳ್ಳುವ ಬದಲಿಗೆ ಬಾಹುಬಲಿ ಸಮೋಸವನ್ನು ಕತ್ತರಿಸಲು ಬಯಸುತ್ತಿದ್ದಾರಂತೆ.
ಅಂಗಡಿ ಮಾಲೀಕರು ಈ ಮೊದಲು ನಾಲ್ಕು ಕೆಜಿ ಸಮೋಸವನ್ನು ತಯಾರು ಮಾಡಲು ಶುರು ಮಾಡಿದ್ದರು. ನಂತರ ಎಂಟು ಕೆಜಿ ಸಮೋಸವನ್ನು ತಯಾರಿಸಿದರು. ಇದೀಗ 12 ಕೆಜಿ ಸಮೋಸ ಮಾರಾಟ ಮಾಡುವುದರ ಜೊತೆಗೆ ಗ್ರಾಹಕರಿಗೆ ಸಮೋಸಾ ಚಾಲೆಂಜ್ ಅನ್ನು ನೀಡಿದ್ದಾರೆ. ಹೀಗಾಗಿ ಸಾಕಷ್ಟು ಪ್ರಮಾಣದಲ್ಲಿ ಗ್ರಾಹಕರು ಸಮೋಸವನ್ನು ತಿನ್ನಲು ಅಂಗಡಿಯತ್ತ ಮುಖ ಮಾಡುತ್ತಿದ್ದಾರೆ.
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ