ಕೇಸ್ವೊಂದರಲ್ಲಿ ಮಾಜಿ ಸಿಎಂ ಚಂದ್ರ ಬಾಬು ನಾಯ್ಡು ಅರೆಸ್ಟ್
ಮುಖ್ಯಮಂತ್ರಿ ಸಿಎಂ ಜಗನ್ಗೆ ವಾರ್ನಿಂಗ್ ಕೊಟ್ಟ ನಟ ಬಾಲಯ್ಯ
ಏಟಿಗೆ ಏಟು, ಗುದ್ದಿಗೆ ಗುದ್ದು, ಹೆದರೋ ಮಾತೇ ಇಲ್ಲ ಎಂದ NTR ಪುತ್ರ
ಅಮರಾವತಿ: ವರ್ಷಾಂತ್ಯಕ್ಕೆ ಆಂಧ್ರ ಪ್ರದೇಶದಲ್ಲಿ ನಡೆಯಲಿರೋ ವಿಧಾನಸಭೆ ಚುನಾವಣೆಗೆ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್, ಮಾಜಿ ಸಿಎಂ ಚಂದ್ರಬಾಬು ನಾಯ್ಡು ನಾಯಕತ್ವದ ತೆಲುಗು ದೇಶಂ ಪಕ್ಷ, ಪವನ್ ಕಲ್ಯಾಣ್ ಜನಸೇನಾ ಪಾರ್ಟಿಯೂ ಭಾರೀ ತಯಾರಿ ಮಾಡಿಕೊಂಡಿವೆ. ಈ ಹೊತ್ತಲೇ ಕೇಸ್ವೊಂದರಲ್ಲಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಸಿಎಂ ಜಗನ್ ಮೋಹನ್ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಸರ್ಕಾರ ಅರೆಸ್ಟ್ ಮಾಡಿದ್ದು, ಇಡೀ ಆಂಧ್ರದಲ್ಲೇ ರಾಜಕೀಯ ಚಟುವಟಿಕೆಗಳು ರಂಗೇರತೊಡಗಿವೆ. ಅದರಲ್ಲೂ ರಾಜಮಹೇಂದ್ರವರಂ ಕೇಂದ್ರ ಕಾರಾಗೃಹದಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದ ನಂತರ ಪವನ್ ಕಲ್ಯಾಣ್ ಟಿಡಿಪಿ, ಜನಸೇನಾ ಮೈತ್ರಿ ಬಗ್ಗೆ ಘೋಷಿಸಿದ್ದಾರೆ. ಹೀಗಿರುವಾಗಲೇ ಟಿಡಿಪಿ ಶಾಸಕ, ನಟ ಬಾಲಯ್ಯ ಸಿಎಂ ಜಗನ್ ಅವರಿಗೆ ವಾರ್ನಿಂಗ್ ಕೊಟ್ಟಿದ್ದಾರೆ.
ಜೈಲಿನಲ್ಲಿರೋ ಚಂದ್ರಬಾಬು ನಾಯ್ಡು ಭೇಟಿ ಬಳಿಕ ಮಾತಾಡಿದ ಬಾಲಯ್ಯ, ನಾವು ಎಂದೂ ಕೈಕಟ್ಟಿ ಕೂತಿಲ್ಲ. ಇವರ ದುರಾಡಳಿತ ಸಹಿಸಲು ಸಾಧ್ಯವಿಲ್ಲ. ಯಾರಿಗೂ ಹೆದರೋ ಮಾತೇ ಇಲ್ಲ. ಏಟಿಗೆ ಏಟು, ತಂತ್ರಕ್ಕೆ ಪ್ರತಿತಂತ್ರ ರೂಪಿಸಲಿದ್ದೇವೆ ಎಂದರು.
ಈ ಮುನ್ನ ಮಾತಾಡಿದ್ದ ಪವನ್ ಕಲ್ಯಾಣ್, ನಾನು ಇಲ್ಲಿಯವರೆಗೂ ಟಿಡಿಪಿ ಜತೆ ಮೈತ್ರಿ ಮಾಡುವ ಬಗ್ಗೆ ಯೋಚನೆ ಮಾಡುತ್ತಿದ್ದೆ. ಈಗ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದ ನಂತರ ಮಹತ್ವದ ತೀರ್ಮಾನಕ್ಕೆ ಬಂದಿದ್ದೇನೆ. ಜನಸೇನೆ ಮತ್ತು ಟಿಡಿಪಿ ಒಟ್ಟಿಗೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ನಿರ್ಧರಿಸಿದ್ದೇನೆ ಎಂದಿದ್ದರು.
ಏನಿದು ಕೇಸ್..?
ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು 2021ರಲ್ಲಿ ಕೌಶಲ್ಯ ಅಭಿವೃದ್ದಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದಲ್ಲಿ ಬಂಧಿಸಲಾಗಿದೆ. ಈ ಪ್ರಕರಣದ ವಿಚಾರಣೆ ನಡೆಸಿದ್ದ ಸಿಐಡಿ ಅಧಿಕಾರಿಗಳು ಕೌಶಲ್ಯ ಅಭಿವೃದ್ದಿ ಇಲಾಖೆಯಲ್ಲಿ ಅಕ್ರಮ ನಡೆದಿದೆ ಎಂದಿದ್ದಾರೆ. ಸದ್ಯ ಚಂದ್ರಬಾಬು ನಾಯ್ಡು ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸ ರಾಜಮಂಡ್ರಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ