newsfirstkannada.com

ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಆಟೋ, ಬೈಕ್‌ ಸಂಚಾರ ಕಂಪ್ಲೀಟ್‌ ಬಂದ್‌; ಯಾವತ್ತಿಂದ ರೂಲ್ಸ್ ಜಾರಿ?

Share :

26-07-2023

  ಎಕ್ಸ್‌ಪ್ರೆಸ್‌ ವೇನಲ್ಲಿ ದ್ವಿಚಕ್ರ ವಾಹನ, ಆಟೋ, ಟ್ರ್ಯಾಕ್ಟರ್‌ಗಳಿಗೆ ಬ್ರೇಕ್!

  ಹೆದ್ದಾರಿ ರೂಲ್ಸ್ ಬ್ರೇಕ್ ಆಟೋ, ಬೈಕ್ ಹೋದ್ರೆ ದಂಡ ಹಾಕಲಾಗುತ್ತಾ?

  ಜನವರಿಯಿಂದ ಇಲ್ಲಿಯವರೆಗೂ 296 ಭೀಕರ ರಸ್ತೆ ಅಪಘಾತಗಳು

ಬೆಂಗಳೂರು, ಮೈಸೂರು ದಶಪಥ ಹೆದ್ದಾರಿಯ ವಾಹನ ಸವಾರರಿಗೆ ಮತ್ತೊಂದು ಶಾಕಿಂಗ್‌ ನ್ಯೂಸ್ ಬಂದಿದೆ. ಮುಂದಿನ ತಿಂಗಳು ಅಂದ್ರೆ ಆಗಸ್ಟ್‌ 1ರಿಂದಲೇ ಎಕ್ಸ್‌ಪ್ರೆಸ್‌ ವೇನಲ್ಲಿ ದ್ವಿಚಕ್ರ ವಾಹನ, ಆಟೋ, ಟ್ರ್ಯಾಕ್ಟರ್‌ಗಳ ಸಂಚಾರಕ್ಕೆ ಸಂಪೂರ್ಣ ಬ್ರೇಕ್ ಹಾಕಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರು, ಮೈಸೂರು ದಶಪಥ ಹೆದ್ದಾರಿ ಸಂಚಾರದ ಬಗ್ಗೆ ಮತ್ತೊಮ್ಮೆ ಸುತ್ತೋಲೆಯನ್ನು ಹೊರಡಿಸಿದೆ. ಈ ಬಾರಿ ಆಟೋ, ಬೈಕ್‌ಗಳ ಸಂಚಾರವನ್ನು ಕಂಪ್ಲೀಟ್ ಆಗಿ ಬಂದ್ ಮಾಡಲು ಮುಂದಾಗಿದೆ.

ಬೆಂಗಳೂರು, ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಈ ಹಿಂದೆಯೂ ಬೈಕ್, ಆಟೋಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಆದರೆ ಅದು ಕಡ್ಡಾಯವಾಗಿ ಜಾರಿಗೆ ಬಂದಿರಲಿಲ್ಲ. ಈ ಬಾರಿ ಮತ್ತೊಮ್ಮೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೈವೇನಲ್ಲಿ ಆಟೋ, ಬೈಕ್‌ಗಳನ್ನು ತರದಂತೆ ಸೂಚಿಸಲಾಗಿದೆ. ಎಕ್ಸ್‌ಪ್ರೆಸ್ ವೇ ಬದಲಿಗೆ ಸರ್ವೀಸ್ ರಸ್ತೆಗಳನ್ನು ಬಳಸುವಂತೆ ಮನವಿ ಮಾಡಿಕೊಂಡಿದೆ. ಈ ಕುರಿತು ರಸ್ತೆ ಮಾರ್ಗಸೂಚಿಗಳ ಪ್ರಕಾರ ಜಾಗೃತಿ ಮೂಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಇದು ದುಬಾರಿ ದಶಪಥ: ಹೆದ್ದಾರಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ಎಷ್ಟೆಷ್ಟು ಟೋಲ್ ಕಟ್ಟಬೇಕು ಗೊತ್ತಾ?

ಕಳೆದ ಜನವರಿಯಿಂದ ದಶಪಥ ಹೆದ್ದಾರಿಯಲ್ಲಿ 296 ಭೀಕರ ರಸ್ತೆ ಅಪಘಾತಗಳು ಸಂಭವಿಸಿವೆ. ಅದರಲ್ಲಿ 132 ಜನ ಪ್ರಾಣ ಬಿಟ್ಟಿದ್ದಾರೆ. ಅಲ್ಲದೇ ಎಕ್ಸ್‌ಪ್ರೆಸ್‌ ಹೈವೇಯಲ್ಲಿ 14 ಪ್ರವೇಶದ್ವಾರಗಳು ಮತ್ತು 14 ನಿರ್ಗಮನ ದ್ವಾರಗಳು ಇವೆ. ಈ ಮಾರ್ಗದಲ್ಲಿ ಆಟೋ, ಬೈಕ್‌ಗಳ ಪ್ರವೇಶಾತಿಯನ್ನು ನಿರ್ಬಂಧಿಸುವುದು ನಿಜಕ್ಕೂ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸ ಸುತ್ತೋಲೆಯನ್ನು ಹೊರಡಿಸಿದೆ.

ಹೆದ್ದಾರಿ ಪ್ರಾಧಿಕಾರದ ಪ್ರಕಾರ ಎಕ್ಸ್‌ಪ್ರೆಸ್‌ ವೇನಲ್ಲಿ ವೇಗವಾಗಿ ಸಂಚರಿಸುವ ವಾಹನಗಳಿಗಿಂತ ಬೈಕ್, ಆಟೋ, ಟ್ರ್ಯಾಕ್ಟರ್‌ಗಳಿಗೆ ಸುರಕ್ಷತೆ ಕಡಿಮೆ. ಬೈಕ್, ಆಟೋ, ಟ್ರ್ಯಾಕ್ಟರ್‌ಗಳು 80 ರಿಂದ 100 ಕಿಲೋ ಮೀಟರ್‌ಗಿಂತಲೂ ಕಡಿಮೆ ವೇಗದಲ್ಲಿ ಸಂಚರಿಸುತ್ತವೆ. ಈ ವೇಳೆ ವೇಗವಾಗಿ ಸಂಚರಿಸುವ ವಾಹನಗಳಿಂದ ಅಪಾಯ ಎದುರಾಗಬಹುದು. ಹೀಗಾಗಿ ಎಕ್ಸ್‌ಪ್ರೆಸ್ ಹೈವೇಗಿಂತ ಸರ್ವೀಸ್ ರಸ್ತೆಯನ್ನು ಬಳಸುವಂತೆ ಹೇಳಲಾಗಿದೆ. 2002ರ ಹೆದ್ದಾರಿ ಕಾಯ್ದೆ ಸೆಕ್ಷನ್ 35ರ ಪ್ರಕಾರ ಆಟೋ, ಬೈಕ್ ಸೇರಿದಂತೆ 6 ಬಗೆಯ ವಾಹನಗಳಿಗೆ ಬ್ರೇಕ್ ಹಾಕಲಾಗುತ್ತಿದೆ. ಒಂದು ವೇಳೆ ರೂಲ್ಸ್ ಬ್ರೇಕ್ ಮಾಡಿ ಎಕ್ಸ್‌ಪ್ರೆಸ್‌ ವೇನಲ್ಲಿ ಹೋದ್ರೆ ಮುಂದಿನ ದಿನಗಳಲ್ಲಿ ದಂಡ ಹಾಕುವ ಸಾಧ್ಯತೆಗಳು ಇವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಆಟೋ, ಬೈಕ್‌ ಸಂಚಾರ ಕಂಪ್ಲೀಟ್‌ ಬಂದ್‌; ಯಾವತ್ತಿಂದ ರೂಲ್ಸ್ ಜಾರಿ?

https://newsfirstlive.com/wp-content/uploads/2023/07/MYS_BNG-EXPRESS.jpg

Load More