newsfirstkannada.com

ಬಿಜೆಪಿ ಅಧಿಕಾರಕ್ಕೆ ಬಂದರೆ ಮತಾಂತರ ನಿಷೇಧ.. ಕೇಂದ್ರ ಸಚಿವ ರಾಜನಾಥ್​​ ಸಿಂಗ್​

Share :

11-11-2023

  ಈಗಾಗಲೇ ರಾಜ್ಯದಲ್ಲಿ ಮೊದಲ ಹಂತದ ಮತದಾನ ಮುಕ್ತಾಯ

  ಚುನಾವಣಾ ಪ್ರಚಾರದ ಱಲಿಯಲ್ಲಿ ಮಾತಾಡಿದ ರಕ್ಷಣಾ ಸಚಿವ

  BJP ಅಧಿಕಾರಕ್ಕೆ ಬಂದರೇ ರಾಜ್ಯದಲ್ಲಿ ಮತಾಂತರ ಫುಲ್ ಬ್ಯಾನ್

ರಾಯಪುರ್: ಛತ್ತೀಸ್‌ಗಢದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮತಾಂತರವನ್ನು ಸಂಪೂರ್ಣವಾಗಿ ರದ್ದು ಮಾಡಲಾಗುವುದು ಎಂದು ರಕ್ಷಣಾ ಇಲಾಖೆ ಸಚಿವ ರಾಜನಾಥ್​ ಸಿಂಗ್ ಹೇಳಿದ್ದಾರೆ.

ಸೀತಾಪುರದ ಚುನಾವಣಾ ಪ್ರಚಾರದ ಱಲಿಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್ ಅವರು, 2018ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಬಂದ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಮತಾಂತರ ಆಗುತ್ತಿರುವುದು ಆಘಾತಕಾರಿ ಸಂಗತಿ. ಒತ್ತಾಯ ಪೂರ್ವಕವಾಗಿ ಏಕೆ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಹೋಗಬೇಕು. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂಪೂರ್ಣವಾಗಿ ಮತಾಂತರವನ್ನು ಬ್ಯಾನ್ ಮಾಡುತ್ತೇವೆ ಎಂದು ಹೇಳಿದ್ದಾರೆ.

ಕಾಂಗ್ರೆಸ್​ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಜನಾಥ್ ಸಿಂಗ್, ಕೊಲೆಯಂತ ಅಪರಾಧಗಳು ಸಾಮಾನ್ಯವಾಗಿವೆ. ಹಲವಾರು ಮಹಿಳೆಯರು ನಾಪತ್ತೆಯಾಗಿದ್ದಾರೆ. ಮಾನವ ಕಳ್ಳಸಾಗಣೆ ಮತ್ತು ಮಾದಕ ವ್ಯಸನ ಹೆಚ್ಚುತ್ತಿವೆ. ಸದ್ಯ ಈಗ ಕಾಂಗ್ರೆಸ್ ಅನ್ನು ಆಡಳಿತದಿಂದ ಕೆಳಗಿಳಿಸುವುದು ಅನಿವಾರ್ಯವಾಗಿದೆ ಎಂದಿದ್ದಾರೆ. ಇನ್ನು ಛತ್ತೀಸ್‌ಗಢದಲ್ಲಿ ಈಗಾಗಲೇ ಮೊದಲ ಹಂತದ ವೋಟಿಂಗ್ ಮುಗಿದಿದ್ದು, 70 ಕ್ಷೇತ್ರಗಳಿಗೆ 2ನೇ ಹಂತದ ಮತದಾನ ನ.17ರಂದು ನಡೆಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿ ಅಧಿಕಾರಕ್ಕೆ ಬಂದರೆ ಮತಾಂತರ ನಿಷೇಧ.. ಕೇಂದ್ರ ಸಚಿವ ರಾಜನಾಥ್​​ ಸಿಂಗ್​

https://newsfirstlive.com/wp-content/uploads/2023/11/RAJNATH_SINGH.jpg

Load More