newsfirstkannada.com

ಬಾಂಗ್ಲಾ ವಿರುದ್ಧ ಟಿ-20 ಸರಣಿ ಗೆದ್ದ ಭಾರತ.. ಕ್ರಿಕೆಟ್ ಲೋಕದ ಚುಟುಕು ಸುದ್ದಿಗಳು

Share :

12-07-2023

    ರಾಹುಲ್ ದ್ರಾವಿಡ್​ಗೆ ಮತ್ತೆ ಬ್ಯಾಟ್ ಬೀಸೋ ಆಸೆ-ವಿಡಿಯೋ

    RCB ಮ್ಯಾಕ್ಸಿಯಿಂದ ಮಹತ್ವದ ನಿರ್ಧಾರ, ಅದು ಏನು?

    ಅಜಿಂಕ್ಯಾ ರಹಾನೆ ಉತ್ತರಕ್ಕೆ ನಸುನಕ್ಕ ರೋಹಿತ್ -ವಿಡಿಯೋ

ಮತ್ತೆ ಬ್ಯಾಟ್ಸ್​ಮನ್ ಆದ ದ್ರಾವಿಡ್

ಇಂದಿನಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್​ ಸರಣಿಗೆ ಟೀಮ್ ಇಂಡಿಯಾ ಸಜ್ಜಾಗಿದ್ದು, ಡೊಮಿನಿಕ್​ನಲ್ಲಿ ಭರ್ಜರಿ ತಾಲೀಮು ನಡೆಸಿದೆ. ಆದ್ರೆ ಈ ವೇಳೆ ಹೆಡ್​​ ಕೋಚ್ ದ್ರಾವಿಡ್ ಮತ್ತೆ ಬ್ಯಾಟ್ ಹಿಡಿದು ಅಭ್ಯಾಸ ನಡೆಸಿದ್ದಾರೆ. ದ್ರಾವಿಡ್ ಬ್ಯಾಟ್​ ಬೀಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಮತ್ತೆ ಬ್ಯಾಟ್ ಬೀಸುವ ಆಸೆಯಾಗುತ್ತಿದೆಯಾ ಎಂದು ನೆಟ್ಟಿಗರು ದ್ರಾವಿಡ್ ಕಾಲೆಳೆದಿದ್ದಾರೆ.

ರಹಾನೆ ಉತ್ತರಕ್ಕೆ ನಗೆಗಡಲಲ್ಲಿ ತೇಲಿದ ರೋಹಿತ್

ಪತ್ರಕರ್ತರ ಪ್ರಶ್ನೆಗೆ ವೈಸ್​ ಕ್ಯಾಪ್ಟನ್​ ಅಜಿಂಕ್ಯಾ ರಹಾನೆ ನೀಡಿದ ಉತ್ತರಕ್ಕೆ ನಾಯಕ ರೋಹಿತ್ ನಗೆಗಡಲಲ್ಲಿ ತೇಲಿದ್ದಾರೆ. ನೆಟ್ಸ್​ ಸೆಷನ್​​ ಬಳಿಕ ರಹಾನೆಗೆ, ಈ ವಯಸ್ಸಿನಲ್ಲಿ ಏನ್ ಮಾಡ್ತೀರಾ ಎಂದು ಕೇಳಲಾಯ್ತು. ಇದಕ್ಕೆ ಉತ್ತರಿಸಿದ ರಹಾನೆ, ನಾನು ಇನ್ನೂ ಯಂಗ್, ನನ್ನಲ್ಲಿ ಬಹಳಷ್ಟು ಕ್ರಿಕೆಟ್ ಅಡಗಿದೆ ಎಂದ್ರು. ಈ ಬೆನ್ನಲ್ಲೇ ರೋಹಿತ್ ನಸುನಕ್ಕಿದರು. ಈ ವಿಡಿಯೋವನ್ನ ಬಿಸಿಸಿಐ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

ಕನ್ನಡಿಗ ರಾಹುಲ್ ಫಿಟ್

ಟೀಮ್ ಇಂಡಿಯಾ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಸಿಕ್ಕಿದೆ. ಐಪಿಎಲ್ ವೇಳೆ ಇಂಜುರಿಗೆ ತುತ್ತಾಗಿ ಟೀಮ್ ಇಂಡಿಯಾದಿಂದ ದೂರವಾಗಿರುವ ಕನ್ನಡಿಗ ಕೆ.ಎಲ್.ರಾಹುಲ್, ಕಮ್​​ಬ್ಯಾಕ್ ಸುಳಿವು ನೀಡಿದ್ದಾರೆ.. ಮುಂದಿನ ಒಂದು ತಿಂಗಳಲ್ಲಿ ಸಂಪೂರ್ಣ ಚೇತರಿಸಿಕೊಳ್ಳಲಿರುವ ಕೆ.ಎಲ್.ರಾಹುಲ್, ಏಷ್ಯಾಕಪ್​​ ಟೂರ್ನಿಗೆ ಮರಳುವುದಾಗಿ ಬಿಸಿಸಿಐ ಮೂಲಗಳು ತಿಳಿಸಿವೆ.

ಡೊಮೆಸ್ಟಿಕ್ ಕ್ರಿಕೆಟ್​​ಗೆ ಮರಳಿದ ಮ್ಯಾಕ್ಸಿ

ಆಸ್ಟ್ರೇಲಿಯಾದ ಸ್ಟಾರ್​ ಆಲ್​ರೌಂಡರ್ ಗ್ಲೆನ್ ಮ್ಯಾಕ್ಸ್​ವೆಲ್ ಡೊಮೆಸ್ಟಿಕ್ ಕ್ರಿಕೆಟ್​ಗೆ ಮರಳಿದ್ದಾರೆ. ಇಂಗ್ಲೆಂಡ್​ನ ಕೌಂಟಿ ಚಾಂಪಿಯನ್​ಶಿಪ್​​ ವಾರ್ವಿಕ್‌ಶೈರ್ ಪರ ಕಣಕ್ಕಿಳಿದಿದ್ದಾರೆ. ರೆಡ್​ ಬಾಲ್​ ಕ್ರಿಕೆಟ್​ ಆಡಿ ಬರೋಬ್ಬರಿ 4 ವರ್ಷಗಳೇ ಕಳೆದಿವೆ. ಈ ಹಿನ್ನೆಲೆಯಲ್ಲಿ ಟೆಸ್ಟ್​ ಕ್ರಿಕೆಟ್ ಆಡಲು ಉತ್ಸುಕ ತೋರಿರುವ ಮ್ಯಾಕ್ಸ್​ವೆಲ್, ಕೌಂಟಿ ಕ್ರಿಕೆಟ್​​ಗೆ ಮರಳಿದ್ದಾರೆ. ಅಷ್ಟೇ ಅಲ್ಲ.! ಕೆಂಟ್​ ವಿರುದ್ಧದ ಪಂದ್ಯದಲ್ಲಿ ವಾರ್ವಿಕ್‌ಶೈರ್ ಪರ ಡೆಬ್ಯು ಮಾಡಿದ್ದಾರೆ.

ಕೋಚ್​ ಗ್ಯಾರಿ ಸ್ಟೆಡ್ ಮತ್ತೆ 2 ವರ್ಷ ಮುಂದುವರಿಕೆ

ನ್ಯೂಜಿಲೆಂಡ್ ತಂಡದ ಸಕ್ಸಸ್​ಫುಲ್​​​​​​ ಹೆಡ್ ಕೋಚ್ ಆಗಿ ಗ್ಯಾರಿ ಸ್ಟೆಡ್​​ರನ್ನ ಮುಂದುವರಿಸಲಾಗಿದೆ. 2025ರ ತನಕ ಮುಂದುವರಿಸಿ ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್​ ಆದೇಶ ಹೊರಡಿಸಿದೆ. ಐಸಿಸಿ ಏಕದಿನ ವಿಶ್ವಕಪ್ ಹಾಗೂ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದೆ. 2018ರಲ್ಲಿ 2 ವರ್ಷದ ಅವಧಿಗೆ ನೇಮಕಗೊಂಡಿದ್ದ ಸ್ಟೆಡ್​​ರನ್ನ, 2020ರಲ್ಲಿ ಮತ್ತೆ ಮುಂದುವರಿಸಿತ್ತು. ಆದ್ರೀಗ 3ನೇ ಬಾರಿಯೂ ಗ್ಯಾರಿ ಸ್ಟೆಡ್​​ರನ್ನ 2 ವರ್ಷ ಮುಂದುವರಿಸಿದೆ.

ಟಿ-20 ಸರಣಿ ಭಾರತ ವನಿತೆಯರ ಕೈವಶ

ಬಾಂಗ್ಲಾ ವಿರುದ್ಧದ ಟಿ20 ಸರಣಿಯನ್ನ ಕೈವಶ ಮಾಡಿಕೊಳ್ಳುವಲ್ಲಿ ಭಾರತ ವನಿತೆಯರು ಯಶಸ್ವಿಯಾಗಿದ್ದಾರೆ. ಢಾಕಾದಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ವನಿತೆಯರು ನಿಗದಿತ 20 ಓವರ್​ಗಳಲ್ಲಿ 95 ರನ್ ಕಲೆಹಾಕಿದ್ದರು. ಈ ಸುಲಭ ಗುರಿ ಬೆನ್ನತ್ತಿದ್ದ ಬಾಂಗ್ಲಾ, ಹರ್ಮನ್​ಪ್ರೀತ್​ ಪಡೆಯ ಡೆಡ್ಲಿ ದಾಳಿಗೆ ನಲುಗಿ 20 ಓವರ್​​ಗಳಲ್ಲಿ 87 ರನ್​ ಗಳಿಸಲಷ್ಟೇ ಶಕ್ತವಾಗಿ ಸೋಲೋಪ್ಪಿಕೊಳ್ತು. ಆ ಮೂಲಕ ಭಾರತ ವನಿತೆಯರು, 8 ರನ್​ಗಳ ಗೆಲುವು ದಾಖಲಿಸಿದ್ದಲ್ಲದೆ. ಸರಣಿ ಕೈವಶ ಮಾಡಿಕೊಳ್ತು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಬಾಂಗ್ಲಾ ವಿರುದ್ಧ ಟಿ-20 ಸರಣಿ ಗೆದ್ದ ಭಾರತ.. ಕ್ರಿಕೆಟ್ ಲೋಕದ ಚುಟುಕು ಸುದ್ದಿಗಳು

https://newsfirstlive.com/wp-content/uploads/2023/07/TEMAINDIA.jpg

Load More